Site icon Vistara News

Allu Arjun: ಅಲ್ಲು ಅರ್ಜುನ್‌ಗೆ ಪಾರ್ಟಿ ಆಯೋಜಿಸಿ ಸರ್‌ಪ್ರೈಸ್‌ ಕೊಟ್ಟ ಪತ್ನಿ ಸ್ನೇಹಾ!

Allu Arjun

‘ಪುಷ್ಪ’ ನಟ ಅಲ್ಲು ಅರ್ಜುನ್ (Allu Arjun) ಇಂದು (ಏಪ್ರಿಲ್ 8) ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರು ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಮಧ್ಯರಾತ್ರಿಯೇ ಪಾರ್ಟಿಯನ್ನು ಆಯೋಜಿಸಿದ್ದರು.

ಪಾರ್ಟಿಯಲ್ಲಿ ದಂಪತಿ ಹಾಗೂ ಸ್ನೇಹಿತರು, ಕುಟುಂಬ ಸದಸ್ಯರು ಭಾಗವಹಿಸಿದ್ದರು. ಅಲ್ಲು ಸ್ನೇಹಾ ರೆಡ್ಡಿ ವಿಶೇಷವಾಗಿ ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ಇದನ್ನೂ ಓದಿ: Allu Arjun Birthday: ಮಧ್ಯರಾತ್ರಿಯೇ ಅಲ್ಲು ಅರ್ಜುನ್ ಮನೆ ಮುಂದೆ ಜಮಾಯಿಸಿ ವಿಶ್‌ ಮಾಡಿದ ಫ್ಯಾನ್ಸ್‌!

ಇದೀಗ ಸ್ನೇಹಾ ರೆಡ್ಡಿ ಅವರು ಹುಟ್ಟುಹಬ್ಬದ ಪಾರ್ಟಿಯ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಪಾರ್ಟಿಗಾಗಿ, ಅಲ್ಲು ಅರ್ಜುನ್ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರೆ, ಸ್ನೇಹಾ ಬಿಳಿ ಕ್ರಾಪ್ ಟಾಪ್ ಮತ್ತು ಸ್ಕರ್ಟ್‌ನಲ್ಲಿ ಸಖತ್‌ ಆಗಿಯೇ ಕಾಣುತ್ತಿದ್ದರು.

ಈಗಾಗಲೇ ಅಲ್ಲು ಫ್ಯಾನ್ಸ್‌ ಮಧ್ಯರಾತ್ರಿಯೇ ಮನೆ ಮುಂದೆ ಜಮಾಯಿಸಿ ನಟನಿಗೆ ವಿಶ್‌ ಮಾಡಿದ್ದಾರೆ.

Exit mobile version