Site icon Vistara News

Allu Arjun Birthday: ಮಧ್ಯರಾತ್ರಿಯೇ ಅಲ್ಲು ಅರ್ಜುನ್ ಮನೆ ಮುಂದೆ ಜಮಾಯಿಸಿ ವಿಶ್‌ ಮಾಡಿದ ಫ್ಯಾನ್ಸ್‌!

Allu Arjun gets welcome from die-hard fans on his birthday

ಬೆಂಗಳೂರು: ಟಾಲಿವುಡ್‌ ಸೂಪರ್‌ ಸ್ಟಾರ್‌, ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್ (Allu Arjun Birthday) ಅವರಿಗೆ ಇಂದು (ಏಪ್ರಿಲ್ 8 ) ಜನುಮದಿನದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಮಧ್ಯರಾತ್ರಿಯೇ ನೂರಾರು ಅಭಿಮಾನಿಗಳು ಅಲ್ಲು ಅರ್ಜುನ್‌ ಅವರ ಮುಂದೆ ಜಮಾಯಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್‌ ಅವರ ಮನೆಯ ಹೊರಗೆ ಅಭಿಮಾನಿಗಳು ನಟನಿಗೆ ವಿಶ್‌ ಮಾಡಿದ್ದಾರೆ. ಅಲ್ಲು ಅರ್ಜುನ್‌ ಕೂಡ ಫ್ಯಾನ್ಸ್‌ಗೆ ಕೈ ಬೀಸಿ, ಧನ್ಯವಾದ ಸೂಚಿಸಿದ್ದಾರೆ.

ಅಲ್ಲು ಅರ್ಜುನ್ ಮನೆಯ ಹೊರಗೆ ಅಭಿಮಾನಿಗಳು ಜಮಾಯಿಸಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿ ನಟ ಕೈಮುಗಿದು ನಮಸ್ಕಾರ ಮಾಡುವುದನ್ನು ಸಹ ಕಾಣಬಹುದು. ಹಲವಾರು ಬಾರಿ ಫ್ಯಾನ್ಸ್‌ ‘ಪುಷ್ಪ’ ಎಂದು ಕೂಗುತ್ತಿದ್ದಂತೆ ನಟ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.

ಇಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ದಿನ. ಪುಷ್ಟ ತಂಡ ಟೀಸರ್‌ ಬಿಡುಗಡೆ ಮಾಡುತ್ತಿದೆ. ಚಿತ್ರತಂಡ ಕೆಲವು ದಿನಗಳಿಂದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅಲ್ಲು ಅರ್ಜುನ್ ಕಳೆದ ಕೆಲವು ತಿಂಗಳುಗಳಿಂದ ‘ಪುಷ್ಪ: ದಿ ರೂಲ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಸುಕುಮಾರ್ ನಿರ್ದೇಶನದ ಈ ಚಿತ್ರವು ಮುಕ್ತಾಯದ ಹಂತದಲ್ಲಿದ್ದು, ಮುಂದಿನ ವಾರಗಳಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಬ್ಲಾಕ್‌ಬಸ್ಟರ್ ಚಿತ್ರದ ಮುಂದುವರಿದ ಭಾಗ ಅಗಸ್ಟ್ 15 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜನ್ ಹೊಸ ಬ್ಯುಸಿನೆಸ್‌; ಸ್ಟೈಲೀಶ್ ಸ್ಟಾರ್ ಒಡೆತನದ AAA ಸಿನಿಮಾಸ್ ಫೋಟೊಗಳು ವೈರಲ್‌!

ಅಲ್ಲು ಅರ್ಜುನ್ ಜತೆಗೆ ‘ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.

Exit mobile version