Site icon Vistara News

Pushpa 2: ʻಪುಷ್ಪ 2ʼ ಅನಸೂಯಾ ಭಾರದ್ವಾಜ್ ಪಾತ್ರದ ಫಸ್ಟ್ ಲುಕ್ ಔಟ್!

Pushpa 2 Allu Arjun anasuya bharadwaj poster look out

ಬೆಂಗಳೂರು: ಐಕಾನ್ ಸ್ಟಾರ್​ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್​ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2: ದಿ ರೂಲ್’ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ನಡುವೆ ಪುಷ್ಪ 2 ಮುಂದೂಡಲ್ಪಡಬಹುದು (Pushpa 2) ಎಂಬ ವದಂತಿಗಳು ಅವರನ್ನು ಬೇಸರಕ್ಕೆ ತಳ್ಳಿತ್ತು. ಆದರೆ ತಯಾರಕರು ಅಂತಿಮವಾಗಿ ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಒಂದಾದ ಅನಸೂಯಾ ಭಾರದ್ವಾಜ್ ಅವರ ಜನ್ಮದಿನದಂದು ತಂಡ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಅನಸೂಯಾ ಅವರ ಹುಟ್ಟುಹಬ್ಬದ ಗೌರವಾರ್ಥವಾಗಿ, ಚಿತ್ರ ನಿರ್ಮಾಪಕರು ಅವರ ಫಸ್ಟ್‌ ಲುಕ್‌ ಅನಾವರಣಗೊಳಿಸಿದ್ದಾರೆ.

ಅನಸೂಯಾ ಅವರ ಹುಟ್ಟುಹಬ್ಬಕ್ಕೆ (ಮೇ 15) ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.

ಹೀರೋ ಅಲ್ಲು ಅರ್ಜುನ್‌ಗೆ (Allu Arjun) ಅನಸೂಯಾ ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಜೊತೆಗೆ ಫಹಾದ್ ಫಾಸಿಲ್, ಡಾಲಿ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ: Allu Arjun: ʻಪುಷ್ಪ 2ʼ ಸಿನಿಮಾಗೆ ಹೆದರಿತಾ ʻಸಿಂಗಂʼ? ಅಜಯ್ ದೇವಗನ್ ಸಿನಿಮಾ ಮುಂದೂಡಿಕೆ!

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಪುಷ್ಪ 2 ತಯಾರಕರು ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದರು. ಟೀಸರ್​ನಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು, ಮುಖವನ್ನು ನೀಲಿ ಮತ್ತು ಕೆಂಪು ಬಣ್ಣಗಳನ್ನು ಮೆತ್ತಿಕೊಂಡಿದ್ದಾರೆ. ಅವರು ಭಾರವಾದ ಸಾಂಪ್ರದಾಯಿಕ ಚಿನ್ನ ಮತ್ತು ಹೂವಿನ ಆಭರಣಗಳೊಂದಿಗೆ ಮೇಕಪ್ ಧರಿಸಿದ್ದರು. ಅವರು ಗೂಂಡಾಗಳನ್ನು ಹೊಡೆಯುತ್ತಿರುವುದು ಕಂಡುಬಂದಿದೆ.

ಪುಷ್ಪಾ 2 ಅನ್ನು ಚಿತ್ರಮಂದಿರಗಳಲ್ಲಿ ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಚಿತ್ರವು ಖಂಡಿತವಾಗಿಯೂ ಬಾಕ್ಸ್ ಆಫೀಸ್ ಆಳುತ್ತಿದೆ. ಪುಷ್ಪಾ 2 ಚಿತ್ರದ ಥಿಯೇಟರ್ ಹಕ್ಕುಗಳನ್ನು ಅನಿಲ್ ತಡಾನಿ 200 ಕೋಟಿ ರೂ.ಗೆ ಮುಂಗಡವಾಗಿ ಖರೀದಿಸಿದ್ದಾರೆ ಎಂದು ಪಿಂಕ್​ವಿಲ್ಲಾ ಇತ್ತೀಚೆಗೆ ವರದಿ ಮಾಡಿತ್ತು.

`ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!

ಪುಷ್ಪ 2 ಸಿನಿಮಾ ಕಂಡು ಸಿನಿಪ್ರಿಯರು ಬೆರಗಾಗಿದ್ದಾರೆ. ಟೀಸರ್‌ನಲ್ಲಿ ಹೆಚ್ಚು ಹೈಲೈಟ್‌ ಆಗಿದ್ದು, ಗಂಗಮ್ಮ ಜಾತ್ರೆ. ಈ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿ ಸಖತ್‌ ರಗಡ್‌ ಲುಕ್‌ನಲ್ಲಿ ಕಂಡಿದ್ದರು. ಈ ಸೆಟ್‌ಗೆ ಚಿತ್ರತಂಡ ಖರ್ಚು ಮಾಡಿದ್ದು ಐವತ್ತು ಕೋಟಿ ರೂ. ಎಂದು ವರದಿಯಾಗಿದೆ.

ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಹಾಕಲಾದ ಈ ಸೆಟ್ ನಲ್ಲಿ ಪ್ರತಿ ದಿನ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಕಂಡು ಬರುತ್ತಿದ್ದರು ಎಂದು ವರದಿಯಾಗಿದೆ. ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ಸುಕುಮಾರ್ ತರಿಸಿಕೊಂಡಿದ್ದರು. ಇದೆಲ್ಲದಕ್ಕೂ ಖರ್ಚಾಗಿದ್ದು ಮೂವತ್ತು ಕೋಟಿ ರೂ. ಎನ್ನಲಾಗಿದೆ. ವಿಶೇಷ ಏನೆಂದರೆ, ನಿರ್ದೇಶಕ ಸುಕುಮಾರ್ ಅವರು ಈ ಜಾತ್ರೆಯ ಸನ್ನಿವೇಶವನ್ನು ಸುಮಾರು 30ಕ್ಕೂ ಅಧಿಕ ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಸೆಟ್‌ ಅಲ್ಲದೇ ಕಲಾವಿದರ ಸಂಭಾವನೆ, ಮೇಕಪ್‌, ನೂರಾರು ಕಲಾವಿದರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌, ಸೌಂಡ್ ಡಿಸೈನ್ ಹೀಗೆ ಎಲ್ಲವೂ ಸೇರಿ ಬರೋಬ್ಬರಿ 50 ಕೋಟಿ ರೂ. ಖರ್ಚಾಗಿದೆ ಎಂದು ವರದಿಯಾಗಿದೆ.

Exit mobile version