Site icon Vistara News

Allu Arjun: ದುಬೈನಲ್ಲಿ ಮೇಣದ ಪ್ರತಿಮೆ; ಇದ್ರಲ್ಲಿ ರಿಯಲ್ ಅಲ್ಲು ಅರ್ಜುನ್‌ ಯಾರು?

Allu Arjun wax statue

ಬೆಂಗಳೂರು: ಸ್ಟೈಲಿಶ್‌ ಐಕಾನ್‌, ಟಾಲಿವುಡ್‌ ನಟ ಅಲ್ಲು ಅರ್ಜುನ್ (Allu Arjun) ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂಗೆ (Madame Tussauds in Dubai) ತೆರಳಿ ತಮ್ಮದೇ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ. ಇದೀಗ ಪ್ರತಿಮೆಗಳ ಪೋಸ್ಟ್‌ವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಫೋಟೊಗಳನ್ನು ಕಂಡು ಅನೇಕರಿಗೆ ಕನ್​ಫ್ಯೂಸ್ ಆಗಿದೆ.

ದುಬೈನ ಮೇಡಂ ಟುಸ್ಸಾಡ್ಸ್​ ಮ್ಯೂಸಿಯಂ ಅಲ್ಲು ಅವರನ್ನು ‘ನೃತ್ಯದ ರಾಜ’ ಎಂದು ಕರೆದು ಮೇಣದ ಪ್ರತಿಮೆಯ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದೆ. ಮೇಣದ ಪ್ರತಿಮೆಯಲ್ಲಿ ಅಲ್ಲು ಕೆಂಪು ಜಾಕೆಟ್‌ ಧರಿಸಿ ಪುಷ್ಪ ಪೋಸ್‌ ನೀಡಿದ್ದಾರೆ. ಪ್ರತಿಮೆಯ ಪಕ್ಕ ಅಲ್ಲು ಕೂಡ ಅದೇ ರೀತಿಯ ಕಾಸ್ಟ್ಯೂಮ್‌ ಧರಿಸಿ ಪೋಸ್‌ ಕೊಟ್ಟರು.

ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಯ ಅನಾವರಣದ ವೀಡಿಯೊವನ್ನು ಸಹ ಅಲ್ಲು (Allu Arjun) ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಅಲ್ಲು ಅರ್ಜುನ್‌ ಪೋಸ್ಟ್‌ ಮಾಡಿ ʻʻಇದು ಬಹಳ ವಿಜೃಂಭಣೆಯ ದಿನ . 2003ರಲ್ಲಿ ಇದೇ ದಿನ ಗಂಗೋತ್ರಿ ಸಿನಿಮಾ ರಿಲೀಸ್ ಆಗಿತ್ತು. ಇಂದೇ ನಾನು ನಾನು ನನ್ನ ಮೇಣದ ಪ್ರತಿಮೆಯನ್ನು ಮೇಡಂ ಟುಸ್ಸಾಡ್ಸ್ ದುಬೈನಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. 21 ವರ್ಷಗಳ ಅವಿಸ್ಮರಣೀಯ ಪ್ರಯಾಣವಿದು. ಈ ಪ್ರಯಾಣದಲ್ಲಿರುವ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಅಭಿಮಾನಿಗಳಿಗೆ ವಿಶೇಷ ಧನ್ಯವಾದಗಳು. ಮುಂಬರುವ ವರ್ಷಗಳಲ್ಲಿ ನಿಮ್ಮೆಲ್ಲರನ್ನೂ ಹೆಚ್ಚು ಹೆಮ್ಮೆ ಪಡುವಂತೆ ಮಾಡುವ ಆಶಯದೊಂದಿಗೆ ಎಂದೆಂದಿಗೂ ಕೃತಜ್ಞರಾಗಿರುವೆʼʼಎಂದು ಬರೆದುಕೊಂಡಿದ್ದಾರೆ. ಪ್ರತಿಮೆಯಲ್ಲಿ . ‘ಅಲಾವೈಂಕುಠಪುರಮುಲೋ’ ಪೋಸ್ ರೀತಿಯಲ್ಲಿ ಅಲ್ಲು ಅರ್ಜುನ್ ಅವರ ಲುಕ್ ಇದೆ.

ಇದನ್ನೂ ಓದಿ: Prabhas Vs Allu Arjun: ‘ಪುಷ್ಪ 2’ ಜತೆ ಪೈಪೋಟಿಗಿಳಿದ ಶಿವಣ್ಣ, ಪ್ರಭಾಸ್!

ಅಲ್ಲು ಕೊನೆಯದಾಗಿ 2021ರ ಪುಷ್ಪ: ದಿ ರೈಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಪುಷ್ಪಾ ರಾಜ್ ಎಂಬ ಪಾತ್ರವನ್ನು ನಿಭಾಯಿಸಿದ್ದರು.

ನಿರ್ದೇಶಕ ಸುಕುಮಾರ್ ಕಳೆದ ಕೆಲವು ತಿಂಗಳುಗಳಿಂದ ‘ಪುಷ್ಪ 2’ ಚಿತ್ರೀಕರಣದಲ್ಲಿದ್ದಾರೆ. ಎರಡನೇ ಭಾಗ ಮುಗಿಯುವ ಹಂತದಲ್ಲಿದೆ. ‘ಪುಷ್ಪ 2’ ಬಹು ಭಾಷೆಗಳಲ್ಲಿ 2024ರ ಅಗಸ್ಟ್ 15ರಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: Prabas vs Allu Arjun: ʻಜೈ ಅಲ್ಲು ಅರ್ಜುನ್ʼ ಹೇಳು ಎಂದು ಪ್ರಭಾಸ್‌ ಅಭಿಮಾನಿಗೆ ಥಳಿತ; ಬೆಂಗಳೂರಿನಲ್ಲಿ ಫ್ಯಾನ್ಸ್‌ ವಾರ್‌!

ಮೊದಲ ಭಾಗ, ‘ಪುಷ್ಪ: ದಿ ರೈಸ್’ನಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದಗ್ದರು. ಡಿಸೆಂಬರ್ 2021 ರಲ್ಲಿ ಬಿಡುಗಡೆಯಾದ ‘ಪುಷ್ಪ’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದು ಹಿಂದಿ ಬೆಲ್ಟ್‌ನಲ್ಲಿಯೂ ದಾಖಲೆ ಮಾಡಿತ್ತು.

Exit mobile version