Site icon Vistara News

Anasuya Bharadwaj : ಪೈಪೋಟಿ ಕೊಡುವ ಭರದಲ್ಲಿ ವೇದಿಕೆ ಮೇಲೆ ಶರ್ಟ್‌ ಬಿಚ್ಚಿದ ʻಪುಷ್ಪʼ ನಟಿ ಅನಸೂಯಾ!

anasuya bharadwaj fight with sekhar master in kiraak boys khiladi girls show

ʼಜಬರ್ದಸ್ತ್ʼ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿ ಆ್ಯಂಕರ್ ಆಗಿ ಸ್ಟಾರ್ ಇಮೇಜ್ ಗಿಟ್ಟಿಸಿಕೊಂಡಿದ್ದ ಅನಸೂಯಾ ಭಾರದ್ವಾಜ್ (Anasuya Bharadwaj ) ಮತ್ತೆ ಹಾಟ್‌ ಅವತಾರ ತಾಳಿದ್ದಾರೆ.

ʼಕಿರ್ರಕ್ ಬಾಯ್ಸ್ ಕಿಲಾಡಿ ಗರ್ಲ್ಸ್ʼ ಶೋನಲ್ಲಿ ವೇದಿಕೆ ಮೇಲೇಯೇ ಚಾಕೆಟ್‌ ಬಿಚ್ಚಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಪುಪ್ಪು ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಇಮೇಜ್‌ ಕ್ರಿಯೇಟ್‌ ಮಾಡಿಕೊಂಡಿರುವ ನಟಿ, ಪುಷ್ಪಾ 2 ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ.

ಆಗಾಗ ಸೋಷಿಯಲ್‌ ಮೀಡಿಯಾಗಳಲ್ಲಿ ಹಾಟ್‌ ಅವತಾರ ತಾಳುವ ಇವರು ಇದೀಗ ಶರ್ಟ್‌ ಬಿಚ್ಚಿದ್ದಾರೆ.

ಇದನ್ನೂ ಓದಿ: Amithab Bacchan :14ನೇ ವರ್ಷಕ್ಕೆ ಕಾಲಿಟ್ಟ ʼರಾವಣ್ʼ ಚಿತ್ರ; ಮಗನನ್ನು ಹೊಗಳಿ ಸೊಸೆಯನ್ನು ನಿರ್ಲಕ್ಷಿಸಿದ ಅಮಿತಾಭ್!

ʼಕಿರ್ರಕ್ ಬಾಯ್ಸ್ ಕಿಲಾಡಿ ಗರ್ಲ್ಸ್ʼ (Kiraak Boys Khiladi Girls) ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೊ ಔಟ್‌ ಆಗಿದ್ದು, ನೃತ್ಯ ನಿರ್ದೇಶಕ ಶೇಖರ್‌ ಮಾಸ್ಟರ್‌ಗೆ ಮತ್ತು ಅನಸೂಯಾಗೆ ಪೈಪೋಟಿ ಬೀಳುತ್ತದೆ. ಶೇಖರ್‌ ಮಾಸ್ಟರ್‌ ಶರ್ಟ್‌ ಬಿಚ್ಚಿದರೆ ಅನಸೂಯ ಕೂಡ ತಾನು ಯಾವುದಕ್ಕೆ ಕಡಿಮೆ ಇಲ್ಲ ಎಂದು ತಮ್ಮ ಜಾಕೆಟ್‌ ಕಳಚಿದ್ದಾರೆ.

ಸಿನಿಮಾಗಳ ಮೂಲಕ ಹೆಚ್ಚು ಹೈಲೈಟ್ ಆಗುತ್ತಿರುವ ಅನಸೂಯಾ ಭಾರದ್ವಾಜ್ ಈಗ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಈ ಚೆಲುವೆ ‘ಹರಿಹರ ವೀರಮಲ್ಲು’, ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ತಮಿಳಿನಲ್ಲಿ ‘ಫ್ಲ್ಯಾಶ್‌ಬ್ಯಾಕ್’ ಸೇರಿದಂತೆ ಕೆಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ.

Exit mobile version