ಬೆಂಗಳೂರು: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅಭಿನಯದ ʻಟಿಲ್ಲು ಸ್ಕ್ವೇರ್’ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿದ್ದು ಗೊತ್ತೇ ಇದೆ. 2002ರಲ್ಲಿ ಬಂದಿದ್ದ ʻಡಿಜೆ ಟಿಲ್ಲು’ ಚಿತ್ರದ ಮುಂದುವರಿದ ಭಾಗ ಈ `ಟಿಲ್ಲು ಸ್ಕ್ವೇರ್’. ಸಿದ್ದು ಜೊನ್ನಲಗಡ್ಡ ( Siddhu Jonnalagadda ) ಈ ಚಿತ್ರದ ನಾಯಕ. ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಕೊಂಡಿತ್ತು. ಸಿನಿಮಾ ಒಟಿಟಿಗೆ ಲಗ್ಗೆ ಈಗಾಗಲೇ ಇಟ್ಟಿದೆ. ಇದರ ಬೆನ್ನಲ್ಲೇ ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೊಸ ಅವತಾರದಲ್ಲಿ ಕಂಡಿದ್ದಾರೆ ಅನುಪಮಾ ಪರಮೇಶ್ವರನ್.
‘ಟಿಲ್ಲು ಸ್ಕ್ವೇರ್’ನಲ್ಲಿ ಅತ್ಯಂತ ಬೋಲ್ಡ್ ಆಗಿ ನಟಿಸಿದ್ದ ನಟಿ ಇದೀಗ ಸಾಫ್ಟ್ ಲುಕ್‌ನಲ್ಲಿ ಕಂಡಿದ್ದಾರೆ. ಅನುಪಮಾ ಅವರ ಮುಂದಿನ ಸಿನಿಮಾ ಬಗ್ಗೆ ಸಮಂತಾ ರುತ್ ಪ್ರಭು ಮತ್ತು ರಾಜ್ ಮತ್ತು ಡಿಕೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಿಡುಗಡೆ ಮಾಡಿದ್ದಾರೆ. ʻಪರದಾʼ ಸಿನಿಮಾದಲ್ಲಿ ಮುಂದೆ ಅನುಪಮಾ ಕಾಣಿಸಿಕೊಳ್ಳುತ್ತಿದ್ದಾರೆ. ʻಪರದಾʼ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಔಟ್ ಆಗಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಅನುಪಮಾ ಕಂಡಿದ್ದಾರೆ. ಸೆರಗನ್ನು ತಲೆ ಮೇಲೆ ಹೊತ್ತು, ಮಹಿಳೆಯರ ಸಮ್ಮುಖದಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್‌ಗೆ ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ನಿಂದ ಅವಮಾನ!
`ಬಂಡಿ’ ಸಿನಿಮಾ ಖ್ಯಾತಿಯ ಪ್ರವೀಣ್ ಕಂಡ್ರೇಗುಲಾ ನಿರ್ದೇಶನ ಪರಧಾ ಚಿತ್ರಕ್ಕಿದೆ. ಮಲಯಾಳಂ ನಟ ಹೃದಯಂನ ʻದರ್ಶನಾ ರಾಜೇಂದ್ರನ್ʼ ಮತ್ತು ಸಂಗೀತಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಆನಂದ ಮೀಡಿಯಾ ಅಡಿಯಲ್ಲಿ ವಿಜಯ್ ಡೊಂಕದ, ಶ್ರೀನಿವಾಸಲು ಪಿವಿ ಮತ್ತು ಶ್ರೀಧರ್ ಮಕ್ಕುವ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ದೆಹಲಿ, ಹಿಮಾಚಲ ಪ್ರದೇಶ ಮತ್ತು ಕೆಲವು ಹಳ್ಳಿಗಳಲ್ಲಿ ಪರಧಾ ಚಿತ್ರೀಕರಣ ಮಾಡಲಾಗಿದೆ.
ಅನುಪಮಾ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ, “ ಬ್ಲಾಕ್‌ಬಸ್ಟರ್ ಟಿಲ್ಲು ಸ್ಕ್ವೇರ್ ನಂತರ, ಈಗ ಪರಧಾ ಜೊತೆ ಬರುತ್ತಿದ್ದೇನೆ! ಹಿಂದೆಂದೂ ಕಾಣದಂತಹ ಅನುಭವವನ್ನು ನಿಮಗೆ ಈ ಸಿನಿಮಾ ಮೂಲಕ ಸಿಗಲಿದೆ ಎಂದು ಭರವಸೆ ನೀಡುತ್ತೇನೆʼʼಎಂದು ಬರೆದುಕೊಂಡಿದ್ದಾರೆ.
ಟಿಲ್ಲು ಸ್ಕ್ವೇರ್’ 2024, ಮಾರ್ಚ್ 29ರಂದು ರಿಲೀಸ್ ಆಗಿತ್ತು. ‘ಡಿಜೆ ಟಿಲ್ಲು’ 30 ಕೋಟಿ ರೂಪಾಯಿ ಲೂಟಿ ಮಾಡಿದ್ದರೆ, ‘ಟಿಲ್ಲು ಸ್ಕ್ವೇರ್’ ಬಾಕ್ಸಾಫೀಸ್‌ನಲ್ಲಿ ಬರೋಬ್ಬರು 125 ಕೋಟಿ ರೂಪಾಯಿ ದೋಚಿದೆ. ಈ ವರ್ಷದ ಟಾಲಿವುಡ್‌ನ ಮೋಸ್ಟ್ ಸಕ್ಸೆಸ್‌ಫುಲ್ ಸಿನಿಮಾ ಎನಿಸಿಕೊಂಡಿದೆ. ನೆಟ್‌ಫ್ಲಿಕ್ಸ್ ‘ಟಿಲ್ಲು ಸ್ಕ್ವೇರ್’ ಸಿನಿಮಾ ಖರೀದಿ ಮಾಡಿದೆ.
`ಟಿಲ್ಲು ಸ್ಕ್ವೇರ್’ ಒಳ್ಳೆಯ ಕಥಾಹಂದರ ಮತ್ತು ಆಕರ್ಷಕ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
ಟಿಲ್ಲು ಸ್ಕ್ವೇರ್‌ನ ನಿರ್ಮಾಪಕರ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಕೇವಲ 9 ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ದಾಟಿದೆ. ತೆಲುಗು ಚಿತ್ರ ಟಿಲ್ಲು ಸ್ಕ್ವೇರ್ 100 ಕೋಟಿ ಗಳಿಸಿದ ಮೊದಲ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ʻಜಾತಿ ರತ್ನಲುʼ ಸಿನಿಮಾ ಈ ಮುಂಚೆ ದಾಖಲೆ ಮಾಡಿತ್ತು.
ಟಿಲ್ಲು ಸ್ಕ್ವೇರ್ ಚಿತ್ರವನ್ನ ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. `ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇವೆ.