ಬೆಂಗಳೂರು: ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ಕೊನೆಯದಾಗಿ ಅನುಷ್ಕಾ ಶೆಟ್ಟಿ (Anushka Shetty) ನಟಿಸಿದ್ದರು. ಆ ಬಳಿಕ ಅನುಷ್ಕಾ ಶೆಟ್ಟಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ‘ಸೈಜ್ ಜೀರೊ’ ಸಿನಿಮಾ ಮಾಡಲು ಹೋಗಿ ಇದುವರೆಗೂ ನಟಿ ಸಣ್ಣ ಆಗಲೇ ಇಲ್ಲ. ‘ನಿಶಬ್ದಂ’ ಪ್ರಮೋಷನ್ ಬಳಿಕ ಅನುಷ್ಕಾ ಶೆಟ್ಟಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಆದರೀಗ ನಟಿ ಏಕಾಏಕಿ ಒಡಿಶಾದ ಜೇಪೋರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಾಪುಟ್ ಜಿಲ್ಲೆಯ ಡಿಯೋಮಾಲಿ ಬೆಟ್ಟದಲ್ಲಿ ಶೂಟಿಂಗ್ ಇದ್ದ ಕಾರಣ ನಟಿ ಅಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಚಿತ್ರದ ಮೊದಲ ಕೆಲವು ಶಾಟ್ಗಳನ್ನು ಕೊರಾಪುಟ್ ಜಿಲ್ಲೆಯ ಡಿಯೋಮಾಲಿ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಜೇಪೋರ್ನ ಮುಖ್ಯ ರಸ್ತೆಯಲ್ಲಿರುವ ಸೂರ್ಯ ಮಹಲ್ನ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಚಿತ್ರತಂಡವು ಜಯನಗರ ಪ್ರದೇಶ ಮತ್ತು ಜಗನ್ನಾಥ ಸಾಗರ್ ಬಳಿ ಇರುವ ಉದ್ಯಾನವನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನು ಕೆಲವು ಶಾಟ್ಗಳು ಇರಲಿದ್ದು, ಅಲ್ಲಿಯವರೆಗೆ ಅನುಷ್ಕಾ ಶೆಟ್ಟಿ ಜೇಪೋರ್ನಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಕ್ರಿಶ್ ನಿರ್ದೇಶನದ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ರಮ್ಯಾಕೃಷ್ಣ ಕೂಡ ಸಾಥ್ ಕೊಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಒಡಿಶಾದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಶೂಟಿಂಗ್ ಸೆಟ್ನಲ್ಲಿ ಅವರನ್ನು ನೋಡಲು ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿರುವ ವಿಡಿಯೊ ವೈರಲ್ ಆಗುತ್ತಿದೆ. ಅನುಷ್ಕಾ ಮಾಸ್ಕ್ ಧರಿಸಿ ಓಡಾಡುತ್ತಿರುವ ಸಣ್ಣ ವೀಡಿಯೊ ಕೂಡ ವೈರಲ್ ಆಗಿದೆ.
ಇದನ್ನೂ ಓದಿ: Anushka Shetty: ಅನುಷ್ಕಾ-ಪ್ರಭಾಸ್ ಡೀಪ್ಫೇಕ್ ಫೋಟೊ ವೈರಲ್; ಕೇಸ್ ದಾಖಲು!
Sweety Latest from jeypore, odisha😍
— Anushka Shetty™ (@TrendsAnushka) February 7, 2024
Her Craze in North 🔥💥
Queen of Indian cinema 👑
A complete pan indian actress #AnushkaShetty@MsAnushkaShetty pic.twitter.com/9RD1yZC8aQ
ಈಗಾಗಲೇ ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್ ಚಿತ್ರಕೂಟ ಹಾಗೂ ಛತ್ತೀಸ್ಗಢದ ತಿರತ್ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು. ಹೋಟೆಲ್ ಸುತ್ತಮುತ್ತ ಭಾರಿ ಭದ್ರತೆಯನ್ನು ಇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಡಿಯೋಮಾಲಿಯು ಒಂದು ಜನಪ್ರಿಯ ಪ್ರವಾಸಿ ಸ್ಥಳವಾಗಿದೆ.