Site icon Vistara News

Anushka Shetty: ತಲೆಗೆ ಸೆರಗು ಸುತ್ತಿಕೊಂಡು ಹೊರಟೇ ಬಿಟ್ರು ಅನುಷ್ಕಾ ಶೆಟ್ಟಿ!

Anushka Shetty Ghaati look

ಬೆಂಗಳೂರು: ಕೆಲ ದಿನಗಳ ಹಿಂದೆ ನಿರ್ದೇಶಕ ಕ್ರಿಶ್ ಅವರು ಅನುಷ್ಕಾ ಶೆಟ್ಟಿ (Anushka Shetty) ಜತೆ ಗುಟ್ಟಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ ಎಂದು ವರದಿ ಆಗಿದ್ದವು. ಯುವಿ ಕ್ರಿಯೇಷನ್ಸ್ ಈ ಚಿತ್ರ ಮಹಿಳಾ ಪ್ರಧಾನ ಸಿನಿಮಾವಾಗಿದೆ. 14 ವರ್ಷಗಳ ಹಿಂದೆ ಬಂದಿದ್ದ ‘ವೇದಂ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಕ್ರಿಶ್ ಆ್ಯಕ್ಷನ್ ಕಟ್ ಹೇಳಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಹೊಸದೊಂದು ಸಿನಿಮಾ ಮೂಡಿ ಬರುತ್ತಿದೆ. ಇದೀಗ ಆ ಚಿತ್ರದ ಟೈಟಲ್ ರಿವೀಲ್ ಆಗಿದೆ. ‘ಘಾಟಿ’ ಎನ್ನುವ ಟೈಟಲ್ (Ghaati Title) (UV Creations) ಫೈನಲ್ ಮಾಡಲಾಗಿದೆ. ಇದು ತೆಲುಗು ಸಿನಿಮಾ. ಅಷ್ಟೇ ಅಲ್ಲ ಪೋಸ್ಟ್ ಥ್ರಿಯೇಟ್ರಿಕಲ್ ಒಟಿಟಿ ಪಾರ್ಟ್‌ನರ್‌ ಕೂಡ ಫಿಕ್ಸ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಈಗ ಮತ್ತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ.

ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಕ್ರಿಶ್ ಒಬ್ಬರು. ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರದ್ದು ವೇಶ್ಯೆ ಪಾತ್ರ ಎಂದು ಹೇಳಲಾಗುತ್ತಿದೆ. ಅನುಷ್ಕಾ ಶೆಟ್ಟಿ ಜತೆ ಈ ಚಿತ್ರಕ್ಕೆ ಕ್ರಿಶ್ ಈ ಸಿನಿಮಾ ಮಾಡಿದ ಬಳಿಕ ಪವನ್‌ ಕಲ್ಯಾಣ್‌ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

ಅಮೆಜಾನ್ ಪ್ರೈಂ ಸಂಸ್ಥೆ ಮುಂದಿನ 2 ವರ್ಷಗಳಲ್ಲಿ ಸ್ಟ್ರೀಮಿಂಗ್ ಮಾಡುವ ಸಿನಿಮಾ ಹಾಗೂ ವೆಬ್‌ ಸೀರಿಸ್ ಲಿಸ್ಟ್ ಬಿಡುಗಡೆ ಮಾಡಿದೆ. ಆ ಲಿಸ್ಟ್‌ನಲ್ಲಿ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಕೂಡ ಇದೆ. ಇನ್ನು ಯುವಿ ಕ್ರಿಯೇಷನ್ಸ್ ಜತೆಗೆ ಫಸ್ಟ್ ಫ್ರೇಮ್ಸ್ ಎಂಟರ್‌ಟ್ರೈನ್‌ಮೆಂಟ್ಸ್ ಸಂಸ್ಥೆ ಕೂಡ ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಿದೆ.

ಇದನ್ನೂ ಓದಿ: Anushka Shetty: ವೇಶ್ಯೆಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ? ಹೊಸ ಚಿತ್ರಕ್ಕೆ ‘ಶೀಲವತಿ’ ಟೈಟಲ್‌ ಫಿಕ್ಸ್‌!

‘ಘಾಟಿ’ ಟೈಟಲ್ ಸಮೇತ ನಾಯಕಿ ತಲೆಗೆ ಸೆರಗು ಸುತ್ತಿಕೊಂಡು ಹೊರಟ ಪೋಸ್ಟರ್‌ ರಿಲೀಸ್ ಆಗಿದೆ. ಚಿಂತಕಿಂಡಿ ಶ್ರೀನಿವಾಸ್ ರಾವ್, ಕ್ರಿಶ್ ಹಾಗೂ ಸಾಯಿಮಾಧವ ಬುರ್ರಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆಂಧ್ರ ಮತ್ತು ಒಡಿಶಾ ಗಡಿಯಲ್ಲಿ ‘ಘಾಟಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ ರಮ್ಯಾ ಕೃಷ್ಣನ್ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು.

ʻಟಾಲಿವುಡ್‌ ಸ್ವೀಟಿʼ ಅನುಷ್ಕಾ ಸಖತ್‌ ಬ್ಯುಸಿ!

“ಸೈಜ್ ಜೀರೊ’ ಸಿನಿಮಾ ಮಾಡಲು ಹೋಗಿ ಇದುವರೆಗೂ ನಟಿ ಸಣ್ಣ ಆಗಲೇ ಇಲ್ಲ. ‘ನಿಶಬ್ದಂ’ ಪ್ರಮೋಷನ್ ಬಳಿಕ ಅನುಷ್ಕಾ ಶೆಟ್ಟಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಇನ್ನು ಮಲಯಾಳಂನಲ್ಲಿ ‘ಕಥನಾರ್’ ಎನ್ನುವ ಚಿತ್ರದಲ್ಲಿ ಕೂಡ ಅನುಷ್ಕಾ ನಟಿಸಿದ್ದಾರೆ. ಆ ಚಿತ್ರದ ಶೂಟಿಂಗ್‌ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ.

Exit mobile version