ಬೆಂಗಳೂರು: ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ಕೊನೆಯದಾಗಿ ಅನುಷ್ಕಾ ಶೆಟ್ಟಿ (Anushka Shetty) ನಟಿಸಿದ್ದರು. ಮೊನ್ನೆಯಷ್ಟೇ ನಟಿ ಏಕಾಏಕಿ ಒಡಿಶಾದ ಜೇಪೋರ್‌ನಲ್ಲಿ ಕಾಣಿಸಿಕೊಂಡಿದ್ದರು. ಕೊರಾಪುಟ್ ಜಿಲ್ಲೆಯ ಡಿಯೋಮಾಲಿ ಬೆಟ್ಟದಲ್ಲಿ ಶೂಟಿಂಗ್ ಇದ್ದ ಕಾರಣ ನಟಿ ಅಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾವನ್ನು ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಸಮಾರು 6 ವರ್ಷಗಳ ನಂತರ ಡಾರ್ಲಿಂಗ್ ಪ್ರಭಾಸ್ ಮತ್ತು ಸ್ವೀಟಿ ಮತ್ತೆ ತೆರೆಯ ಮೇಲೆ ಜೋಡಿಯಾಗಿ ಬರುತ್ತಿದ್ದು, ಹೊಸ ಸಿನಿಮಾ ಮಾಡುವ ಮೂಲಕ ಸದ್ದು ಮಾಡಲಿದ್ದಾರೆ.
‘ಸೈಜ್ ಜೀರೊ’ ಸಿನಿಮಾ ಮಾಡಲು ಹೋಗಿ ಇದುವರೆಗೂ ನಟಿ ಸಣ್ಣ ಆಗಲೇ ಇಲ್ಲ. ‘ನಿಶಬ್ದಂ’ ಪ್ರಮೋಷನ್ ಬಳಿಕ ಅನುಷ್ಕಾ ಶೆಟ್ಟಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಇದೀಗ ನಟಿ ಪ್ರಭಾಸ್ ಜತೆ ರತೆರೆ ಹಂಚಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದ್ದು, ಇನ್ನು ಮಲಯಾಳಂನಲ್ಲಿ ‘ಕಥನಾರ್’ ಎನ್ನುವ ಚಿತ್ರದಲ್ಲಿ ಕೂಡ ಅನುಷ್ಕಾ ನಟಿಸಿದ್ದಾರೆ. ಆ ಚಿತ್ರದ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ.
ಇದನ್ನೂ ಓದಿ: Anushka Shetty: ಒಡಿಶಾದಲ್ಲಿ ಅನುಷ್ಕಾ ಶೆಟ್ಟಿ; ಮುತ್ತಿಗೆ ಹಾಕಿದ ಫ್ಯಾನ್ಸ್
BB2 promotion 🥰💞#Prabhas #AnushkaShetty pic.twitter.com/bUjZRFGuA3
— Pabsu ❤ Sweety (@TrendsPranushka) February 10, 2024
ನಟಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ 10 ದಿನಗಳ ಕಾಲ ಒಡಿಶಾದಲ್ಲಿ ಕ್ಯಾಮರಾ ಕಾಣಿಸಿಕೊಳ್ಳಲಿದ್ದು, ಆದರೆ ಸಿನಿಮಾ ಬಗ್ಗೆ ಯಾವುದೇ ವಿಚಾರ ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಶೂಟಿಂಗ್‌ಗೆ ಭಾರೀ ಭದ್ರತೆ ವಹಿಸಿದ್ದಾರೆ. ವರದಿಯ ಪ್ರಕಾರ, ಚಿತ್ರದ ಮೊದಲ ಕೆಲವು ಶಾಟ್‌ಗಳನ್ನು ಕೊರಾಪುಟ್ ಜಿಲ್ಲೆಯ ಡಿಯೋಮಾಲಿ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಜೇಪೋರ್‌ನ ಮುಖ್ಯ ರಸ್ತೆಯಲ್ಲಿರುವ ಸೂರ್ಯ ಮಹಲ್‌ನ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಚಿತ್ರತಂಡವು ಜಯನಗರ ಪ್ರದೇಶ ಮತ್ತು ಜಗನ್ನಾಥ ಸಾಗರ್ ಬಳಿ ಇರುವ ಉದ್ಯಾನವನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನು ಕೆಲವು ಶಾಟ್‌ಗಳು ಇರಲಿದ್ದು, ಅಲ್ಲಿಯವರೆಗೆ ಅನುಷ್ಕಾ ಶೆಟ್ಟಿ ಜೇಪೋರ್‌ನಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಈಗಾಗಲೇ ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್ ಚಿತ್ರಕೂಟ ಹಾಗೂ ಛತ್ತೀಸ್‌ಗಢದ ತಿರತ್‌ಗಢದಲ್ಲಿ ನಡೆದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದರು. ಹೋಟೆಲ್ ಸುತ್ತಮುತ್ತ ಭಾರಿ ಭದ್ರತೆಯನ್ನು ಇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.