Site icon Vistara News

Actor Chiranjeevi: ʻವಿಶ್ವಂಭರʼ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಭಾರಿ ವರ್ಕೌಟ್‌!

Chiranjeevi is gearing up for Vishwambhara

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಅವರು (Actor Chiranjeevi) ʻಬಿಂಬಿಸಾರʼ ಖ್ಯಾತಿಯ ವಸಿಷ್ಠ ನಿರ್ದೇಶನದ ʻವಿಶ್ವಂಭರʼ ಚಿತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸಿನಿಮಾಗಾಗಿ ಚಿರಂಜೀವಿ ಅವರು ಸಖತ್‌ ವರ್ಕೌಟ್‌ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಚಿರಂಜೀವಿ.

2023ರಲ್ಲಿ `ಭೋಲಾ ಶಂಕರ’ ಸಿನಿಮಾ ರಿಲೀಸ್‌ ಆಗಿತ್ತು. ಆದರೆ ಸಿನಿಮಾ ಗಳಿಕೆ ಕಂಡಿರಲಿಲ್ಲ. ಇದೀಗ ವಿಶಿಷ್ಟ ಪಾತ್ರದ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ವಸಿಷ್ಠ ನಿರ್ದೇಶನದ ಈ ಚಿತ್ರ ಚಿರಂಜೀವಿ ಅವರ 156ನೇ ಸಿನಿಮಾ. ನವೆಂಬರ್ 2023ರಲ್ಲಿ ಈ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ಬಜೆಟ್ 150 ಕೋಟಿ ರೂ. ಇದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಚಿರಂಜೀವಿ ಅವರನ್ನು ಹೊರತುಪಡಿಸಿ ಉಳಿದ ಪಾತ್ರಗಳಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಚಿತ್ರತಂಡ ಮಾಹಿತಿ ಹಂಚಿಕೊಂಡಿಲ್ಲ. ಇದಲ್ಲದೇ ಚಿರಂಜೀವಿ ಅವರು ಬೋಯಪತಿ ಶ್ರೀನು ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲೂ ಚಿರಂಜೀವಿ ನಟಿಸುತ್ತಿದ್ದಾರೆ. `ವಿಶ್ವಂಭರ’ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ವಂಶಿ ಮತ್ತು ಪ್ರಮೋದ್ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: KS Bharat: ಮೆಗಾಸ್ಟಾರ್ ಚಿರಂಜೀವಿಗೆ ಜೆರ್ಸಿ ನೀಡಿ ಗೌರವಿಸಿದ ಕ್ರಿಕೆಟಿಗ ಶ್ರೀಕರ್ ಭರತ್

ಚಿರಂಜೀವಿ ಭೇಟಿ ಮಾಡಿದ ʻಅನಿಮಲ್‌ʼ, ʻದಸರಾʼ ನಿರ್ದೇಶಕರು!

ಈಗಾಗಲೇ ಚಿರಂಜೀವಿ ಅವರು ʻಪದ್ಮ ವಿಭೂಷಣʼ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿರಂಜೀವಿ ಅವರನ್ನು ಅಭಿನಂದಿಸಲು, ‘ಅನಿಮಲ್‌’ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಮತ್ತು ‘ದಸರಾ’ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಹೈದರಾಬಾದ್ ನಿವಾಸಕ್ಕೆ ಭೇಟಿ ನೀಡಿದ್ದರು. ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಾಗಿ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಸಂದೀಪ್‌ ರೆಡ್ಡಿ ವಾಂಗ ಅವರನ್ನು ಅಭಿನಂದಿಸಿದ್ದರು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2006ರಲ್ಲಿಯೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Exit mobile version