ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ (Actor Chiranjeevi), ಅವರಿಗೆ ʻಪದ್ಮ ವಿಭೂಷಣʼ ಪ್ರಶಸ್ತಿ ಸಂದಿರುವುದು ಗೊತ್ತೇ ಇದೆ. ಈ ಸಂಭ್ರಮವನ್ನು ಆಚರಿಸಲು ಚಿರಂಜೀವಿ ಪುತ್ರ ನಟ ರಾಮ್ ಚರಣ್ ಮತ್ತು ಸೊಸೆ ಉಪಾಸನಾ ಅವರು ಅದ್ಧೂರಿ ಪಾರ್ಟಿಯನ್ನು ಆಯೋಜಿಸಿದ್ದಾರೆ. ಫೆ. 3ರಂದು ಹೈದರಾಬಾದ್ನ ಹೊರವಲಯದಲ್ಲಿರುವ ಕುಟುಂಬದ ಫಾರ್ಮ್ಹೌಸ್ನಲ್ಲಿ ಪಾರ್ಟಿ ನಡೆಸಿದರು.
ಪಾರ್ಟಿಯಲ್ಲಿ ವೆಂಕಟೇಶ್, ನಾಗಾರ್ಜುನ, ಬ್ರಹ್ಮಾನಂದಂ, ತಬಿತಾ ಬಂಡ್ರೆಡ್ಡಿ, ಸುರೇಶ್ ಬಾಬು, ಮೈತ್ರಿ ನವೀನ್, ಮತ್ತು ದಿಲ್ ರಾಜು ಭಾಗವಹಿಸಿದ್ದರು. ಸೆಲೆಬ್ರಿಟಿಗಳ ಪೈಕಿ ನಿಹಾರಿಕಾ, ವರುಣ್ ತೇಜ್, ಅಲ್ಲು ಅರವಿಂದ್, ಶರ್ವಾನಂದ್, ಶಂಕರ್, ಸಾಯಿ ಧರಂ ತೇಜ್, ವಂಶಿ ಪೈಡಿಪಲ್ಲಿ ಮುಂತಾದವರು ಉಪಸ್ಥಿತರಿದ್ದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ ರೆಡ್ಡಿ, ಭಟ್ಟಿ ವಿಕ್ರಮಾರ್ಕ, ಕಲ್ವಕುಂಟ್ಲ ಕವಿತಾ ಮತ್ತು ಕೊಂಡ ವಿಶ್ವೇಶ್ವರ್ ರೆಡ್ಡಿ ಸಹ ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಚಿರಂಜೀವಿ ಕಡು ನೀಲಿ ಬಣ್ಣದ ಶರ್ಟ್ ಹಾಗೂ ಡೆನಿಮ್ ಧರಿಸಿದ್ದರು. ರಾಮ್ ಚರಣ್ ಕಪ್ಪು ಶರ್ಟ್ ಧರಿಸಿದ್ದರು.
ಇದನ್ನೂ ಓದಿ: Actor Chiranjeevi: ʻವಿಶ್ವಂಭರʼ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಭಾರಿ ವರ್ಕೌಟ್!
150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2006ರಲ್ಲಿಯೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ʻಪದ್ಮ ವಿಭೂಷಣʼ ಗೌರವ ದೊರಕಿದೆ. ಚಿರಂಜೀವಿ ಅವರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ (ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಸೇರಿದಂತೆ) ಕೆಲಸ ಮಾಡಿದ ಅತ್ಯಂತ ಯಶಸ್ವಿ ನಟರಲ್ಲಿ ಚಿರಂಜೀವಿ ಕೂಡ ಒಬ್ಬರು. 2006ರಲ್ಲಿ, ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಇದು ಅವರ ಎರಡನೇ ಪದ್ಮ ಪ್ರಶಸ್ತಿಯಾಗಿದೆ. ಬಿಂಬಿಸಾರ ಖ್ಯಾತಿಯ ವಸಿಷ್ಠ ನಿರ್ದೇಶನದ ʻವಿಶ್ವಂಭರʼ ಚಿತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.
2023ರಲ್ಲಿ ಭೋಲಾ ಶಂಕರ’ ಸಿನಿಮಾ ರಿಲೀಸ್ ಆಗಿತ್ತು. ಆದರೆ ಸಿನಿಮಾ ಗಳಿಕೆ ಕಂಡಿರಲಿಲ್ಲ. ಇದೀಗ ವಿಶಿಷ್ಟ ಪಾತ್ರದ ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.ವಿಶ್ವಂಭರ’ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ವಂಶಿ ಮತ್ತು ಪ್ರಮೋದ್ ನಿರ್ಮಿಸುತ್ತಿದ್ದಾರೆ.