ಬೆಂಗಳೂರು: ಶ್ರೀಲಂಕಾ ಗಾಯಕಿ ಯೋಹಾನಿ ಧ್ವನಿಯಲ್ಲಿ ಮೂಡಿ ಬಂದ ‘ಮಾನಿಕೆ ಮಾಗೆ ಹಿತೆ’ (Manike Mage Hithe) ಹಾಡು ರಾತ್ರೋ ರಾತ್ರಿ ಫೇಮಸ್ ಆಗಿತ್ತು. ಸಿಂಹಳ ಗೀತೆಯಾದ ʻಮಾನಿಕೆ ಮಾಗೆ ಹಿತೆʼ 2020ರಲ್ಲಿ ಸತೀಶನ್ ರತ್ನಯಕ ಮೊದಲು ಹಾಡಿದ್ದರು. ‘ಮಾನಿಕೆ ಮಾಗೆ ಹಿತೆ’ ಕೆಲವು ವರ್ಷಗಳ ಹಿಂದೆ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ದೇವರ’ ಚಿತ್ರದ ‘ಚುಟ್ಟಮಲ್ಲೆ’ ಹಾಡು ‘ ʻಮಾನಿಕೆ ಮಾಗೆ ಹಿತೆʼ’ ಹಾಡಿಗೆ ಹೋಲಿಕೆಯಿದೆ ಎಂದು (Chuttamalle Song) ಹಲವರು ಟ್ರೋಲ್ ಕೂಡ ಮಾಡಿದ್ದಾರೆ. ಇದಾದ ಬಳಿಕ ಹಾಡಿನ ಸಂಯೋಜಕ ಚಮತ್ ಸಂಗೀತ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿನ ತಮ್ಮ ಅಧಿಕೃತ ಪೋಸ್ಟ್‌ನಲ್ಲಿ, ಚಮತ್ ಅವರು ಯಾವಾಗಲೂ ‘ಚುಟ್ಟಮಲ್ಲೆ’ ಹಿಂದೆ ಇರುವ ಸಂಯೋಜಕ ಅನಿರುದ್ಧ ರವಿಚಂದರ್ ( Anirudh Ravichander) ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಎರಡೂ ಹಾಡುಗಳ ನಡುವಿನ ಸಾಮ್ಯತೆಗಳನ್ನು ಎತ್ತಿ ತೋರಿಸುವ ವೀಡಿಯೊ ಮಾಡಿದ ಪ್ರಭಾವಿಗಳ ವೀಡಿಯೊವನ್ನು ಚಮತ್ ಮರು ಪೋಸ್ಟ್ ಮಾಡಿದ್ದಾರೆ. “ಯಾವಾಗಲೂ ಅನಿರುದ್ಧ್ ಅವರ ಕೆಲಸವನ್ನು ಮೆಚ್ಚುವ ನಾನು. ನನ್ನ ಹಾಡು ‘ಮಾನಿಕೆ ಮಾಗೆ ಹಿತೆ’ ಅವರನ್ನು ಇದೇ ರೀತಿಯ ಹಾಡು ರಚಿಸಲು ಸ್ಫೂರ್ತಿ ನೀಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ.”ಎಂದು ಬರೆದುಕೊಂಡಿದ್ದಾರೆ.
‘ದೇವರ’ ಚಿತ್ರದ ‘ಚುಟ್ಟಮಲ್ಲೆ’ ಹಾಡು ಆಗಸ್ಟ್ 5 ರಂದು ಲಾಂಚ್ ಆಗಿದ್ದು, ಅಂದಿನಿಂದ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ‘ಮಾನಿಕೆ ಮಾಗೆ ಹಿತೆ’ ಕಾಪಿ ಮಾಡಿದ ಆರೋಪದ ಮೇಲೆ ಟ್ರೋಲ್ ಆಗಿದ್ದಾರೆ. ಆದರೆ ಈ ಬಗ್ಗೆ ಅನಿರುದ್ಧ ಅವರು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ʻಮನಿಕೆ ಮಾಗೆ ಹಿತೆ’ ಎಂಬುದು ಶ್ರೀಲಂಕಾದ ಗೀತೆಯಾಗಿದ್ದು, ಇದನ್ನು ಚಮ್ಂತ್ ಸಂಗೀತ್ ಸಂಯೋಜಿಸಿದ್ದಾರೆ ಮತ್ತು ಯೋಹಾನಿ ಹಾಡಿದ್ದಾರೆ. 2021 ರಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಜನರು ರೀಲ್ಸ್ ಮಾಡುವ ಮೂಲಕ ಖ್ಯಾತಿ ಪಡೆಯಿತು.
ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅವರ ‘ದೇವರ’ ಸೆಪ್ಟೆಂಬರ್ 27 ರಂದು ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗುತ್ತಿದೆ. ಮೊದಲ ಭಾಗವು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದರೆ, ಎರಡನೇ ಭಾಗವು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಈ ಚಿತ್ರವನ್ನು ಕೊರಟಾಲ ಶಿವ ಬರೆದು ನಿರ್ದೇಶಿಸಿದ್ದಾರೆ.