Site icon Vistara News

Citadel Hunny Bunny: ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಮಾಜಿ ದಂಪತಿ ಸಮಂತಾ-ನಾಗಚೈತನ್ಯ!

Samantha Ruth Prabhu and Naga Chaitanya

ಬೆಂಗಳೂರು: ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ ವಿಚ್ಛೇದನದ ಪಡೆದು ಮೂರು ವರ್ಷಗಳು ಕಳೆದಿವೆ. ಇದೀಗ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ಮಾಜಿ ಪತಿ ನಾಗ ಚೈತನ್ಯ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ಸಮಂತಾ ನಟಿಸಿರುವ ‘ಸಿಟಾಡೆಲ್​ ಹನಿ ಬನಿ’ (Citadel Hunny Bunny) ಕೂಡ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕವೇ ಪ್ರಸಾರಕ್ಕೆ ಸಜ್ಜಾಗುತ್ತಿದೆ. ಈ ಒಟಿಟಿ ಸಂಸ್ಥೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮಂತಾ, ನಾಗ ಚೈತನ್ಯ, ವರುಣ್​ ಧವನ್​ ಮುಂತಾದ ಕಲಾವಿದರು ಭಾಗಿಯಾಗಿದ್ದರು.

ಮಾರ್ಚ್ 19 ರಂದು, ರಾಜ್ ಮತ್ತು ಡಿಕೆ ನಿರ್ದೇಶನದ ‘ಸಿಟಾಡೆಲ್- ಹನಿ ಬನ್ನಿ,’ ಅವರ ಆಕ್ಷನ್ ಸರಣಿಯ ಬಿಡುಗಡೆಯ ಮೊದಲು ವರುಣ್ ಧವನ್ ಅವರೊಂದಿಗೆ ಸಮಂತಾ ಸಮಾರಂಭದಲ್ಲಿ ಭಾಗವಹಿಸಿದ್ದರು.(ಮಾರ್ಚ್​ 19) ಮುಂಬೈನಲ್ಲಿ ಕಾರ್ಯಕ್ರಮದಲ್ಲಿ ಸಮಂತಾ ಮತ್ತು ನಾಗ ಚೈತನ್ಯ (Naga Chaitanya) ಅವರು ಪಾಲ್ಗೊಂಡಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ವೇದಿಕೆ ಏರಿದರು. ನಾಗ ಚೈತನ್ಯ ನಟಿಸಿದ ‘ಧೂತ’ ವೆಬ್​ ಸಿರೀಸ್​ ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಸಮಂತಾ ನಟಿಸಿರುವ ‘ಸಿಟಾಡೆಲ್​ ಹನಿ ಬನಿ’ ಕೂಡ ‘ಅಮೇಜಾನ್​ ಪ್ರೈಂ ವಿಡಿಯೊ’ ಮೂಲಕವೇ ಪ್ರಸಾರ ಆಗಲಿದೆ.

ಇದನ್ನೂ ಓದಿ: Samantha | ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ ಬಿಡುಗಡೆ ದಿನಾಂಕ ಫಿಕ್ಸ್‌

ಈವೆಂಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ, ಸೂರ್ಯ, ಶಾಹಿದ್ ಕಪೂರ್, ಬಾಬಿ ಡಿಯೋಲ್, ತಮನ್ನಾ ಭಾಟಿಯಾ ಮತ್ತು ಶೋಭಿತಾ ಧುಲಿಯಾಲ ಸೇರಿದಂತೆ ಇತರ ನಟ ನಟಿಯರು ಭಾಗವಹಿಸಿದ್ದರು.

ಸಿಟಾಡೆಲ್ (Citadel) ಯೂನಿವರ್ಸ್‌ನ ಭಾರತೀಯ ಅಧ್ಯಾಯದಲ್ಲಿ ವರುಣ್ ಧವನ್ ಹಾಗೂ ಸಮಂತಾ (Samantha Ruth Prabhu) ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸರಣಿಯಲ್ಲಿ ಕೇ ಕೇ ಮೆನನ್, ಸಿಮ್ರಾನ್, ಸೋಹಮ್ ಮಜುಂದಾರ್, ಶಿವಂಕಿತ್ ಸಿಂಗ್ ಪರಿಹಾರ್, ಕಶ್ವಿ ಮಜ್ಮುಂದರ್, ಸಾಕಿಬ್ ಸಲೀಮ್ ಮತ್ತು ಸಿಕಂದರ್ ಖೇರ್ ಕೂಡ ನಟಿಸಿದ್ದಾರೆ. ಅಮೇರಿಕನ್ ಲೆಗ್ ಆಫ್ ಸಿಟಾಡೆಲ್ ಅನ್ನು ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ರಿಚರ್ಡ್ ಮ್ಯಾಡೆನ್ ನೇತೃತ್ವ ವಹಿಸಿದ್ದರು.

Exit mobile version