Site icon Vistara News

Prabas vs Allu Arjun: ʻಜೈ ಅಲ್ಲು ಅರ್ಜುನ್ʼ ಹೇಳು ಎಂದು ಪ್ರಭಾಸ್‌ ಅಭಿಮಾನಿಗೆ ಥಳಿತ; ಬೆಂಗಳೂರಿನಲ್ಲಿ ಫ್ಯಾನ್ಸ್‌ ವಾರ್‌!

clash between prabhas fans and allu arjun fans in bengaluru

ಬೆಂಗಳೂರು: ಸ್ಟಾರ್ ನಟರ ಅಭಿಮಾನಿಗಳ ನಡುವೆ ವಾರ್‌ಗಳಾಗುವುದು (Prabas vs Allu Arjun) ಹೊಸತೇನಲ್ಲ. ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಕ್ರಿಕೆಟ್ ಆಡುವ ವೇಳೆ ಇವರಿಬ್ಬರ ಅಭಿಮಾನಿಗಳು ಬಡಿದಾಡಿಕೊಂಡಿರುವ ವಿಡಿಯೊ ವೈರಲ್ ಆಗುತ್ತಿದೆ. ಪ್ರಭಾಸ್ ಅಭಿಮಾನಿಯೊಬ್ಬನನ್ನು ಕೆಲ ಅಲ್ಲು ಅರ್ಜುನ್ ಅಭಿಮಾನಿಗಳು ಸೇರಿ ಥಳಿಸಿದ್ದಾರೆ.

‘ಜೈ ಅಲ್ಲು ಅರ್ಜುನ್’ ಎಂದು ಹೇಳು ಹೇಳು ಎಂದು ಬಲವಂತ ಮಾಡಿ ಹೊಡೆದಿರುವುದನನು ವಿಡಿಯೋದಲ್ಲಿ ಗಮನಿಸಬಹುದು. ಸದ್ಯ ಈ ಘಟನೆ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಆಂಧ್ರ, ತೆಲಂಗಾಣದಲ್ಲಿ ಮಹೇಶ್ ಬಾಬು ಅಭಿಮಾನಿಗಳು, ಪವನ್ ಕಲ್ಯಾಣ್ ಅಭಿಮಾನಿಗಳು ಹಾಗೂ ರಾಮ್‌ಚರಣ್, ಪ್ರಭಾಸ್ ಅಭಿಮಾನಿಗಳು ಹೀಗೆ ಕಿರಿಕ್ ಮಾಡಿಕೊಂಡಿದ್ದರು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಇಂತಹ ಘಟನೆ ಜರುಗಿದೆ.

ಇದನ್ನೂ ಓದಿ: Election Commissioners: ಹೊಸ ಚುನಾವಣಾ ಆಯುಕ್ತರ ನೇಮಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ʼಕಲ್ಕಿ 2898 ಎಡಿʼ ಚಿತ್ರದ ಹೊಸ ಪೋಸ್ಟರ್‌ ಔಟ್‌

ಸಿನಿಮಾ ವಿಚಾರಕ್ಕೆ ಬಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿ ಈ ಸಿನಿಮಾಕ್ಕಿದೆ. ಟಾಲಿವುಟ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇದೀಗ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿದ್ದು ಪ್ರಭಾಸ್‌ ಪಾತ್ರದ ಹೆಸರು ರಿವೀಲ್‌ ಆಗಿದೆ.

ಆಗಸ್ಟ್ 15ರಂದು ಥಿಯೇಟರ್‌ಗೆ  ಪುಷ್ಪ2

ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ (Pushpa 2) ಸಿಹಿ ಸುದ್ದಿ ನೀಡಿದ್ದಾರೆ. ಪುಷ್ಪ 2: ದಿ ರೂಲ್ ಚಿತ್ರ 2024ರ ಆಗಸ್ಟ್ 15ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ.  ಚಿತ್ರದ ನಿರ್ಮಾಣ ಸಂಸ್ಥೆಯಾದ ಮೃತ್ರಿ ಮೂವಿ ಮೇಕರ್ಸ್‌ ಚಿತ್ರದ ಕುರಿತು ಈ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿತ್ತು.

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version