Site icon Vistara News

Comedian Sunil: ನನ್ನ ಜತೆ ಅನುಷ್ಕಾ, ತ್ರಿಶಾ ನಟಿಸಲು ಒಪ್ಪಲೇ ಇಲ್ಲ ಎಂದ ತೆಲುಗು ಸ್ಟಾರ್ ಕಾಮಿಡಿಯನ್!

Comedian Sunil

ಬೆಂಗಳೂರು: 2000ರ ದಶಕದಲ್ಲಿ ಟಾಲಿವುಡ್‌ನಲ್ಲಿ ಸುನಿಲ್ (Comedian Sunil) ಅವರನ್ನು ʻಸ್ಟಾರ್ ಕಾಮಿಡಿಯನ್ʼ ಎಂದು ಪರಿಗಣಿಸಲಾಗಿತ್ತು. ʻಸೊಂತಂ,ʼ ʻಮನಸಂತ ನುವ್ವೆʼ, ʻಮನ್ಮತುಡುʼ, ʻದುಬೈ ಸೀನು,ʼ ಹೀಗೆ ಹಲವು ಚಿತ್ರಗಳಲ್ಲಿ ಕಾಮಿಡಿ ಮೂಲಕ ಜನರ ಮನ ಸೆಳೆದರು. ಸುನಿಲ್ 2006ರಲ್ಲಿ ಬಂದಿದ್ದ ‘ಅಂದಾಲು ರಾಮುಡು’ ಚಿತ್ರದ ಲೀಡ್‌ ರೋಲ್‌ನಲ್ಲಿ ಮಿಂಚಿದ್ದರು. ಆ ಬಳಿಕ ರಾಜಮೌಳಿ ಅವರು ʻಮರ್ಯಾದ ರಾಮಣ್ಣ’ ಸಿನಿಮಾ ಮಾಡಿ ಪೂರ್ಣ ಪ್ರಮಾಣದಲ್ಲಿ ಸುನಿಲ್ ಅವರನ್ನು ಹೀರೊ ಆಗಿ ಮಾಡಿದ್ದರು. ʻಮರ್ಯಾದ ರಾಮಣ್ಣ’ ಸಿನಿಮಾ ಮಾಡುವ ವೇಳೆ ನನ್ನೊಟಿಗೆ ನಟಿಸಲು ನಟಿಯರು ಹಿಂದೇಟು ಹಾಕುತ್ತಿದ್ದರು ಎಂದು ಸಂದರ್ಶನವೊಂದರಲ್ಲಿ ನಟ ಹೇಳಿಕೊಂಡಿದ್ದಾರೆ.

ಹಾಸ್ಯ ಕಲಾವಿದರು ಹೀಗೆ ನಾಯಕ ನಟರಾಗಿ ಎಂಟ್ರಿ ಕೊಡುವಾಗ ಅವರಿಗೆ ನಾಯಕಿಯರ ಸಮಸ್ಯೆ ಕೂಡ ಎದುರಾಗುತ್ತದೆ. ಅದೇ ಸಮಸ್ಯೆ ಸುನೀಲ್‌ ಎದುರಿಸಿದ್ದರು. ದಪ್ಪ ಇದ್ದ ಸುನೀಲ್ ತೂಕ ಇಳಿಸಿ ಸಿಕ್ಸ್‌ ಪ್ಯಾಕ್ ಮಾಡಲು ಕಸರತ್ತು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ದೊಡ್ಡಮಟ್ಟದಲ್ಲಿ ಸಕ್ಸೆಸ್‌ ಆಗಲಿಲ್ಲ.

ಇದೀಗ ನಟ ಸಂದರ್ಶನವೊಂದರಲ್ಲಿ ಮಾತನಾಡಿ ʻʻʻಮರ್ಯಾದ ರಾಮಣ್ಣ’ ಸಿನಿಮಾ ಮಾಡುವಾಗ ರಾಜಮೌಳಿ ಅವರು ನಾಯಕಿ ಪಾತ್ರಕ್ಕೆ ಬೇರೆ ನಟಿಯರನ್ನು ಬೇಕು ಎಂದುಕೊಂಡಿದ್ದರು. ಯಾವ ನಟಿಯರೂ ಒಪ್ಪದೇ ಇದ್ದಾಗ ಸಲೋನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಚಿತ್ರಕ್ಕಾಗಿ ರಾಜಮೌಳಿ ಮೊದಲು ಅನುಷ್ಕಾ ಶೆಟ್ಟಿ ಅವರನ್ನು ಕೇಳಿದ್ದರು. ಅವರು ತಿರಸ್ಕರಿಸಿದ್ದರು. ಆ ನಂತರ ಆ ಪಾತ್ರಕ್ಕೆ ತ್ರಿಶಾ ಆಗಬಹುದು ಎಂದು ಕೇಳಿದಾಗ ಅವರೂ ಒಪ್ಪಲಿಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ: Hi Nanna: ಅಥೆನ್ಸ್ ಅಂತಾರಾಷ್ಟ್ರೀಯ ಕಲಾ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ನಾನಿ-ಮೃಣಾಲ್ ಸಿನಿಮಾ!

ಇತ್ತೀಚೆಗೆ ಸುನೀಲ್‌ ಅವರು ಅನೇಕ ಸಣ್ಣ-ಬಜೆಟ್ ಸಿನಿಮಾಗಳ ಪಾತ್ರಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ದಿನಕ್ಕೆ 3-5 ಲಕ್ಷ ರೂ. ಒಳಗಿನ ಸಿನಿಮಾ ಪ್ರಾಜೆಕ್ಟ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಸುನಿಲ್‌ಗೆ ಇನ್ನೂ ಸ್ವಲ್ಪ ಕ್ರೇಜ್ ಇದೆಯಂತೆ. ಟಾಲಿವುಡ್‌ ಚಿತ್ರರಂಗ ಅವರ ಸಾಮರ್ಥ್ಯವನ್ನು ಅರಿತು ಅವರ ಪ್ರತಿಭೆ ನೋಡಿ ಪಾತ್ರ ನೀಡಬೇಕು ಎಂಬ ಆಸೆಯನ್ನು ಹೊಂದಿದ್ದಾರೆ.

Exit mobile version