ಬೆಂಗಳೂರು: ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ ʻಡಬಲ್ ಇಸ್ಮಾರ್ಟ್ʼ (Ram Pothineni) ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿದೆ. ರಾಮ್ ಪೋತಿನೇನಿ (Double iSmart Trailer) ಮತ್ತು ಸಂಜಯ್ ದತ್ ಸಖತ್ ಹೈಲೈಟ್ ಆಗಿದ್ದಾರೆ. ಬಿಗ್ ಬುಲ್ ಪಾತ್ರದಲ್ಲಿ ಸಂಜಯ್ ದತ್ ಅಬ್ಬರಿಸಿದ್ದಾರೆ.
ಪುರಿ ಅವರ ನೆಚ್ಚಿನ ಹಾಸ್ಯನಟ ಅಲಿ ಕೂಡ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ಬಂದವು, ಕೆಲವರು ಇದನ್ನು ‘ಬ್ಲಾಕ್‌ಬಸ್ಟರ್’ ಎಂದು ಕರೆದರು. ಮತ್ತು ಚಿತ್ರವು ಪುರಿ ಮತ್ತು ರಾಮ್ ಇಬ್ಬರಿಗೂ ‘ಕಮ್‌ಬ್ಯಾಕ್’ ಆಗಲಿದೆ ಎಂದು ಆಶಿಸುತ್ತಿದ್ದಾರೆ.
ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ರವಿತೇಜ ಇಟ್ಲು ಶ್ರಾವಣಿ ಸುಬ್ರಮಣ್ಯಂ’ ಮತ್ತು
ಈಡಿಯಟ್’ ನಂತಹ ಹಿಟ್ ಸಿನಿಮಾಗಳನ್ನು (Mr Bachchan Director) ಒಟ್ಟಿಗೆ ನೀಡಿದವರು. ರವಿತೇಜಾ ಅವರ ʻಮಿಸ್ಟರ್ ಬಚ್ಚನ್ʼ ಮತ್ತು ಪುರಿ ಅವರ ನಿರ್ದೇಶನದ ʻಡಬಲ್ ಇಸ್ಮಾರ್ಟ್ʼ (Ram Pothineni) ಆಗಸ್ಟ್ 15 ರಂದು ತೆಲುಗು ಬಾಕ್ಸ್ ಆಫೀಸ್ನಲ್ಲಿ ಘರ್ಷಣೆಗೆ ಸಿದ್ಧವಾಗಿದೆ (Puri Jagannadh’s directorial ). ‘ಡಬಲ್ ಇಸ್ಮಾರ್ಟ್” ಮತ್ತು ”ಮಿಸ್ಟರ್ ಬಚ್ಚನ್” ತಂಡದ ನಡುವೆ ಶೀತಲ ಸಮರ ಆರಂಭವಾಗಿದೆ.
ʻಮಿಸ್ಟರ್ ಬಚ್ಚನ್ʼ ನಿರ್ದೇಶಕ ಹ್ಯಾರಿಸ್ ಶಂಕರ್ ಬೇರೆ ಯಾರು ಅಲ್ಲ, ಬದಲಿಗೆ ಪುರಿ ಜಗನ್ನಾಥ್ ಶಿಷ್ಯ. ಒಂದು ಕಾಲದಲ್ಲಿ ಪುರಿ ಬಳಿ ಕೆಲಸ ಕಲಿತ ಹ್ಯಾರಿಸ್ ಶಂಕರ್ ಈಗ ಗುರುವಿಗೆ ತಿರುಮಂತ್ರ ಹಾಕುತ್ತಿದ್ದಾರೆ. ಕೇವಲ ಹ್ಯಾರಿಸ್ ಶಂಕರ್ ಮಾತ್ರ ಅಲ್ಲ, ʻಮಿಸ್ಟರ್ ಬಚ್ಚನ್ʼ ಚಿತ್ರದ ಮೂಲಕ ರವಿತೇಜಾ ಕೂಡ ಪುರಿ ಜಗನ್ನಾಥ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ರವಿತೇಜಾ ಅವರಿಂದ ಪುರಿ ಜಗನ್ನಾಥ್ ಇದನ್ನು ನಿರೀಕ್ಷೆ ಮಾಡಿರಲಿಲ್ಲ.
ಡಬಲ್ ಇಸ್ಮಾರ್ಟ್” ಚಿತ್ರಕ್ಕೆ ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ. ಹೀಗಾಗಿಯೇ ಪುರಿ ಜಗನ್ನಾಥ್ ಜೊತೆ ರವಿತೇಜಾ ಮೇಲೆ ಕೋಪ ಮಾಡಿಕೊಂಡಿರುವ ಚಾರ್ಮಿ,ಸದ್ಯಕ್ಕೆ ”ಮಿಸ್ಟರ್ ಬಚ್ಚನ್” ನಿರ್ದೇಶಕ ಹರೀಶ್ ಶಂಕರ್ ಮತ್ತು ನಾಯಕ ರವಿತೇಜಾ ಇಬ್ಬರನ್ನೂ ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ; Actor Kiran Raj: ಕಿರಣ್‌ರಾಜ್ `ರಾನಿ’ ಸಿನಿಮಾಗೆ ಯು/ಎ ಸರ್ಟಿಫಿಕೇಟ್; ತೆರೆಗೆ ಯಾವಾಗ?
ಡಬಲ್ ಇಸ್ಮಾರ್ಟ್
ಸೌತ್ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್ ಇಸ್ಮಾರ್ಟ್’ ಚಿತ್ರದಲ್ಲೂ ವಿಲನ್ ಆಗಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬಲ್ ಇಸ್ಮಾರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ. ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.
ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ಆಗಸ್ಟ್-15 ರಂದು ಚಿತ್ರ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಬರ್ತಿರೋ ಈ ಚಿತ್ರದ ಪ್ರಚಾರ ಕೂಡ ಈಗಾಗಲೇ ಶುರು ಆಗಿದೆ.
2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ.