Site icon Vistara News

Family Star Box Office: ಮೃಣಾಲ್ ಠಾಕೂರ್- ವಿಜಯ್ ದೇವರಕೊಂಡ ʻಫ್ಯಾಮಿಲಿ ಸ್ಟಾರ್ʼ ಮೊದಲ ದಿನ ಗಳಿಸಿದ್ದೆಷ್ಟು?

Family Star Box Office Vijay Deverakonda Mrunal Thakur

ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿದೆ. ಈ ಸಿನಿಮಾ ಮೊದಲ ದಿನ ಕೇವಲ 5.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾಗೆ ಪರಶುರಾಮ್ ಪೆಟ್ಲ (Parasuram Petla) ನಿರ್ದೇನವಿದೆ. ʻಫ್ಯಾಮಿಲಿ ಸ್ಟಾರ್ʼ ಮೊದಲನೇ ದಿನ ಶೇ. 38.45ರಷ್ಟು ತೆಲುಗು ಆಕ್ಯುಪೆನ್ಸಿ ಹೊಂದಿದ್ದು, ವಾರಂಗಲ್‌ನಲ್ಲಿ ಶೇ.57.5 ಪ್ರತಿಶತ , ವಿಶಾಖಪಟ್ಟಣಂ ಮತ್ತು ಕಾಕಿನಾಡ ತಲಾ 56.75 ಪ್ರತಿಶತ ಆಕ್ಯುಪೆನ್ಸಿ ಹೊಂದಿದೆ ಎಂದು ವರದಿಯಾಗಿದೆ.

ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಬ್ಬರು ʻʻಸಿನಿಮಾ ಫಸ್ಟ್‌ ಹಾಪ್‌ ಹಾಗೂ ಕಾಮಿಡಿ ಚೆನ್ನಾಗಿದೆʼʼಎಂದು ಬರೆದುಕೊಂಡಿದ್ದರು. ʻವಿಜಯ್ ಮತ್ತು ಮೃಣಾಲ್ ಅಭಿನಯ ಸೂಪರ್‌ʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದರು. ʻʻನನ್ನ ರೇಟಿಂಗ್ – 3.5/5. ಕೌಟುಂಬಿಕ ಮನರಂಜನೆ ಸಿನಿಮಾ ಇದುʼʼಮತ್ತೊಬ್ಬರು ಬರೆದುಕೊಂಡಿದ್ದರು.

ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.

ಇದನ್ನೂ ಓದಿ: Family Star Twitter Review: ವಿಜಯ್​​ ದೇವರಕೊಂಡ ʻಫ್ಯಾಮಿಲಿ ಸ್ಟಾರ್ʼ ಸಿನಿಮಾ ಹೇಗಿದೆ?

ಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು. ಸಂದೀಪ್ ರೆಡ್ಡಿ ವಂಗಾ ಅವರ ರಣಬೀರ್ ಕಪೂರ್ ಅಭಿನಯದ ʻಅನಿಮಲ್ʼ (2023) ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ರಶ್ಮಿಕಾ ʻಫ್ಯಾಮಿಲಿ ಸ್ಟಾರ್‌ʼನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ, ಬಹುಶಃ ಮದುವೆಯ ಹಾಡು ʻಕಲ್ಯಾಣಿ ವಲ್ಲಾʼದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಗುಸುಗುಸು ಇದೆ. ಆದರೆ, ಇದುವರೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಫ್ಯಾಮಿಲಿ ಸ್ಟಾರ್ʼ ಚಿತ್ರಕ್ಕೆ ಗೋಪಿಸುಂದರ್ ಸಂಗೀತ ನೀಡಿದ್ದು, ಇದುವರೆಗೆ ಬಿಡುಗಡೆಯಾಗಿರುವ ಮೂರು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್‌ ರಾಜು ಮತ್ತು ಶಿರೀಷ್ ನಿರ್ಮಿಸಿರುವ ಈ ಚಿತ್ರ ಬಿಡುಗಡೆ ಆಗಿದೆ.

Exit mobile version