Site icon Vistara News

Hanuman OTT: ʻಹನುಮಾನ್ʼ ಒಟಿಟಿ ಬಿಡುಗಡೆ ತಡವಾಗಿದ್ದೇಕೆ? ಕಾರಣ ಕೊಟ್ಟ ನಿರ್ದೇಶಕ

Hanuman OTT release finalised

ಬೆಂಗಳೂರು: ಸೂಪರ್ ಹೀರೊ ಕಾನ್ಸೆಪ್ಟ್‌ ಹೊಂದಿರುವ ʻಹನುಮಾನ್ʼ (Hanuman OTT) ಸಿನಿಮಾ ಭರಪೂರ ಮೆಚ್ಚುಗೆಗೆ ಪಾತ್ರವಾಗಿತ್ತು. ತೇಜ ಸಜ್ಜಾ, ವರಲಕ್ಷ್ಮೀ, ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಅಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಜೈಕಾರ ಹಾಕಿದ್ದರು. ಇದಾದ ಬಳಿಕ ಒಟಿಟಿಯಲ್ಲಿ ಸಿನಿಮಾ ಯಾವಾಗ ಬಿಡುಗಡೆ ಎಂದು ನೋಡುಗರು ತುದಿಗಾಲಲ್ಲಿ ಕಾದಿದ್ದರು. ಈಗಾಗಲೇ ಎರಡು ಬಾರಿ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಮುಂದೂಡಲಾಗಿದೆ. ‘ಹನುಮಾನ್’ ಸಿನಿಮಾದ ಒಟಿಟಿ ಬಿಡುಗಡೆ ತಡವಾಗುತ್ತಿರುವ ಬಗ್ಗೆ ನಿರ್ದೇಶಕ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

“ಹನುಮಾನ್ OTT ಸ್ಟ್ರೀಮಿಂಗ್ ವಿಳಂಬ ಉದ್ದೇಶಪೂರ್ವಕವಾದದ್ದಲ್ಲ! ಸಿನಿಮಾವನ್ನು ನಿಮಗೆಲ್ಲರಿಗೂ ತೋರಿಸಲಿಕ್ಕಾಗಿ ನಾವು ಹಗಲು-ರಾತ್ರಿ ಶ್ರಮಪಟ್ಟು ಕೆಲಸ ಮಾಡುತ್ತಿದ್ದೇವೆ. ನಿಮಗೆ ಒಂದು ಅದ್ಭುತವಾದ ಸಿನಿಮಾ ವೀಕ್ಷಣೆ ಅನುಭವವನ್ನು ಕೊಡುವುದೇ ನಮ್ಮ ಧ್ಯೇಯ. ಅದಕ್ಕಾಗಿಯೇ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ನಮಗೆ ನೀಡುತ್ತಿರುವ ನಿಮ್ಮ ಬೆಂಬಲವನ್ನು ಮುಂದುವರಿಸಿ’ ಎಂದು ‘ಹನುಮಾನ್’ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ಟ್ವೀಟ್ ಮಾಡಿದ್ದಾರೆ.

Zee5 ಅಧಿಕೃತ X ಹ್ಯಾಂಡಲ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದೆ, “ ಇಂಗ್ಲೀಷ್ ಸಬ್‌ ಟೈಟಲ್‌ನೊಂದಿಗೆ ತೆಲುಗು ಭಾಷೆಯಲ್ಲಿ ZEE5ನಲ್ಲಿ ಹನುಮಾನ್ ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ “ಹನುಮಾನ್ʼ ತಂಡವನ್ನು ಭೇಟಿ ಮಾಡಿ ಶ್ಲಾಘಿಸಿದ್ದರು.

ಇದನ್ನೂ ಓದಿ: Arbbie Movie: ಅಣ್ಣಾಮಲೈ ನಟಿಸಿದ ಮೊದಲ ಕನ್ನಡದ ಸಿನಿಮಾ ಟ್ರೈಲರ್‌ ಔಟ್‌!

ಇದನ್ನೂ ಓದಿ: Arbbie Movie: ಅಣ್ಣಾಮಲೈ ನಟಿಸಿದ ಮೊದಲ ಕನ್ನಡದ ಸಿನಿಮಾ ಟ್ರೈಲರ್‌ ಔಟ್‌!

ಫೆಬ್ರವರಿ ತಿಂಗಳಲ್ಲಿಯೇ ‘ಹನುಮಾನ್’ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಬಳಿಕ ಮಾರ್ಚ್ 2ಕ್ಕೆ ಸಿನಿಮಾ ಒಟಿಟಿಗೆ ಬರಲಿದೆ ಎಂದು ಘೋಷಿಸಲಾಯ್ತು. ಆದರೆ ಮಾರ್ಚ್ 2ರಂದು ಸಹ ಸಿನಿಮಾ ಬಿಡುಗಡೆ ಆಗಲಿಲ್ಲ. ಈಗ ಮಾರ್ಚ್ 16ಕ್ಕೆ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಅದು ಸಹ ಮುಂದೂಡಲಾಗಿದೆ.

ತೇಜ ಸಜ್ಜಾ ನಟನೆಯ `ಹನುಮಾನ್’ ಸಿನಿಮಾ (HanuMan) ಕೂಡ ಜ. 12ರಂದೇ ತೆರೆ ಕಂಡಿತ್ತು. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು, ʼಗುಂಟೂರು ಖಾರಂʼಗೆ ಪ್ರಬಲ ಪೈಪೋಟಿ ನೀಡಿತ್ತು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಸುಮಾರು 7.56 ಕೋಟಿ ರೂ. ಬಾಚಿಕೊಂಡಿತ್ತು. ಈ ಪೈಕಿ ಸಿಂಹಪಾಲು ಅಂದರೆ 5.50 ಕೋಟಿ ರೂ. ತೆಲುಗು ಭಾಷೆಯಿಂದ ಸಂಗ್ರಹವಾಗಿದ್ದರೆ 2 ಕೋಟಿ ರೂ. ಹಿಂದಿಯಿಂದ ಹರಿದು ಬಂದಿತ್ತು.

Exit mobile version