ಬೆಂಗಳೂರು: ‘ದೇವರ‘ ಸಿನಿಮಾ (Devara Movie) ಒಂದು ದೊಡ್ಡ-ಬಜೆಟ್ ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನರ್. ಕೊರಟಾಲ ಶಿವ ಈ ಸಿನಿಮಾ ನಿರ್ದೇಶಕರು. `ದೇವರ’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ಹೊಸ ಅಪ್ ಡೇಟ್ ನೀಡಿದ್ದಾರೆ. ಈ ಚಿತ್ರವು 2024ರ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5 ರಂದು ಸಿನಿಮಾ ರಿಲೀಸ್ ಡೇಟ್‌ವನ್ನು ಘೋಷಿಸಿತ್ತು.
ಜ್ಯೂನಿಯರ್ ಎನ್‌ಟಿಆರ್ ಅವರ ಜನ್ಮದಿನವಾದ ಜನವರಿ 8 ರಂದು, ‘ದೇವರ’ ನಿರ್ಮಾಪಕರು ಫಸ್ಟ್ ಲುಕ್‌ವನ್ನು ಹಂಚಿಕೊಂಡಿದ್ದರು, ಅಲ್ಲಿಂದ ಸಿನಿಮಾ ಬಗ್ಗೆ ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಾಗಿತ್ತು. ಸೈಫ್ ಅಲಿಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣಗಳಿಂದಾಗಿ ದೇವರ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಜ್ಯೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್‌ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.
ಇದನ್ನೂ ಓದಿ: Kannada New Movie: ʻಧೀರ ಸಾಮ್ರಾಟ್ʼ ಸಿನಿಮಾಗೆ ಪ್ರಜ್ವಲ್ ದೇವರಾಜ್ ಸಾಥ್
ಇದೀಗ ‘ದೇವರ’ ಮೂಲಕ ಒಂದಾಗಿದ್ದಾರೆ. ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.
ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.