ಬೆಂಗಳೂರು: ವೈಜ್ಞಾನಿಕ ಮತ್ತು ಕಾಲ್ಪನಿಕ (Kalki 2898 AD) ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಿ ನೋಡುಗರ ಮನ ಸೆಳೆದಿದೆ. ಇದೀಗ ಈ ಸಿನಿಮಾ ಬಿಡುಗಡೆಗೆ ಕೇವಲ ನಾಲ್ಕು ದಿನ ಇದೆ. ಈಗಾಗಲೇ ಹಲವೆಡೆ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಇನ್ನು ಬೆಳ್ಳಂಬೆಳಗ್ಗೆ 5 ಗಂಟೆಗೆ ಸಾಕಷ್ಟು ಕಡೆಗಳಲ್ಲಿ ಮೊದಲ ಪ್ರದರ್ಶನ ಆರಂಭವಾಗಿದೆ. ದೊಡ್ಡ ಸಿನಿಮಾ, ಕ್ರೇಜ್ ಇದೆ ಎನ್ನುವ ಕಾರಣಕ್ಕೆ ಟಿಕೆಟ್ ದರ ಹೆಚ್ಚಿಸಲಾಗಿದೆ.
ಕನ್ನಡ ಶೋಗಳ ಸಂಖ್ಯೆ ಕಮ್ಮಿಯಿದ್ದು ತೆಲುಗು, ಹಿಂದಿ ವರ್ಷನ್‌ಗೆ ಹೆಚ್ಚು ಶೋ ಕೊಟ್ಟಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ರಾಜಶೇಖರ್ ನಟನೆಯ ‘ಕಲ್ಕಿ’ ಎನ್ನುವ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಟಿಕೆಟ್ ದರವನ್ನು 400 ರೂಪಾಯಿ, 500 ರೂಪಾಯಿ, 700 ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೂ ಪ್ರಭಾಸ್ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕೆಲವು ದಿನಗಳ ಹಿಂದೆ ಚಿತ್ರತಂಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ರಿವೀಲ್ ಮಾಡಿತ್ತು. ಬಿಗ್ ಬಿ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಟೀಸರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುಹೆಯೊಂದರಲ್ಲಿ ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ ನಾನು ಕಲ್ಕಿಯ ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೇನೆ. ನಾನು ಗುರು ದ್ರೋಣರ ಮಗ ಅಶ್ವತ್ಥಾಮʼʼ ಎಂದು ಅಮಿತಾಭ್ ಹೇಳುವ ಮೂಲಕ ಈ ಸಿನಿಮಾದ ಕಥೆ ಪುರಾಣ ಕಾಲದಿಂದ ಭವಿಷ್ಯದತ್ತ ಸಾಗುತ್ತದೆ ಎನ್ನುವ ಸುಳಿವು ಲಭಿಸಿತ್ತು. ಭಾರತ ಚಿತ್ರರಂಗದ ಮಟ್ಟಿಗೆ ಇಂತಹ ಪ್ರಯೋಗ ಬಹಳ ಅಪರೂಪ.
ಇದನ್ನೂ ಓದಿ: Kalki 2898 AD: ‘ಕಲ್ಕಿ 2898 AD’ ಚಿತ್ರದ ಫೈನಲ್ ಟ್ರೇಲರ್ ಹೀಗಿದೆ ನೋಡಿ! ಜೂ.27ರಂದು ಚಿತ್ರ ರಿಲೀಸ್
ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಅಶ್ವಿನ್ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.
ಈ ಸಿನಿಮಾದಲ್ಲಿ ಪ್ರಭಾಸ್ ಭೈರವನಾಗಿ ಮಿಂಚಲಿದ್ದು, ಬಾಲಿವುಡ್ ನಟಿ ದಿಶಾ ಪಠಾಣಿ, ಕಮಲ್ ಹಾಸನ್ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆಯೇ ಧ್ವನಿ ನೀಡಲಿದ್ದಾರೆ. ಜತೆಗೆ ಹಿಂದಿಯಲ್ಲಿಯೂ ಅವರು ಡಬ್ ಮಾಡಲಿದ್ದಾರೆ.