ಬೆಂಗಳೂರು: ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ (Kalki 2898 AD) ಮತ್ತು ಕಮಲ್ ಹಾಸನ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಮೂರನೇ ಅತಿದೊಡ್ಡ ಓಪನರ್ ಕಂಡ ಸಿನಿಮಾವಾಗಿ ಹೊರಹೊಮ್ಮಿತ್ತು. ಎರಡನೇ ದಿನ ಭಾರದಲ್ಲಿ ಸುಮಾರು 50 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಒಟ್ಟು ಸಂಗ್ರಹ 150 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ. ಈ ಮೂಲಕ ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಸೇರಿದರೆ ಸಿನಿಮಾದ ಒಟ್ಟಾರೆ ಗಳಿಕೆ 300 ಕೋಟಿ ರೂಪಾಯಿ ಸಮೀಪಿಸಿದೆ.
ಶನಿವಾರದಿಂದ ಸಿನಿಮಾ ಕಲೆಕ್ಷನ್‌ನಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಈ ಮುಂಚೆ ಸಲಾರ್ ಸಿನಿಮಾ ಎರಡನೇ ದಿನ 147.05 ಕೋಟಿ ರೂ. ಗಳಿಕೆ ಕಂಡಿತ್ತು. ‘ಬಾಹುಬಲಿ 2’ ಎರಡನೇ ದಿನದಲ್ಲಿ 90 ಕೋಟಿ ರೂ. ‘ಆದಿಪುರುಷ’ 2ನೇ ದಿನದಲ್ಲಿ 65.25 ಕೋಟಿ ರೂ ಕಲೆಕ್ಷನ್ ಮಾಡಿತ್ತು. ಇವುಗಳಿಗೆ ಹೋಲಿಸಿದರೆ ಕಲ್ಕಿ ಎರಡನೇ ದಿನ ಸಂಗ್ರಹ ಮಾಡಿದ್ದು ತುಂಬಾ ಕಡಿಮೆಯಾಗಿದೆ.
ನಾಗ್ ಅಶ್ವಿನ್ ನಿರ್ದೇಶಿಸಿದ ಕಲ್ಕಿ 2898 AD, ಎಲ್ಲಾ ಭಾಷೆಗಳಲ್ಲಿ ಮೊದಲ ದಿನದಲ್ಲಿ ಭಾರತದಲ್ಲಿ ಸುಮಾರು 95 ಕೋಟಿ ರೂಪಾಯಿ ಗಳಿಸಿತ್ತು, ಆದರೆ ಅದರ ಒಟ್ಟು ಸಂಗ್ರಹವು ಸುಮಾರು 115 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಒಟ್ಟಾರೆಯಾಗಿ, ಚಿತ್ರವು ಮೊದಲ ದಿನ ವಿಶ್ವದಾದ್ಯಂತ 180 ಕೋಟಿ ರೂ ಗಳಿಸಿತ್ತು. ಕಲ್ಕಿ 2898 ಎಡಿ ಸಿನಿಮಾ ಹಲವು ಚಿತ್ರಗಳನ್ನು ಹಿಂದಿಕ್ಕಿತ್ತು. ಅದರಲ್ಲಿ ಕೆಜಿಎಫ್ 2 (ರೂ. 159 ಕೋಟಿ), ಸಲಾರ್ (ರೂ. 158 ಕೋಟಿ), ಲಿಯೋ (ರೂ. 142.75 ಕೋಟಿ) ಸಿನಿಮಾಗಳ ಜಾಗತಿಕ ಆರಂಭಿಕ ದಾಖಲೆಗಳನ್ನು ಹಿಂದಿಕ್ಕಿತ್ತು. ಆದರೆ, ಮೊದಲ ದಿನದ ಗಳಿಕೆಯಲ್ಲಿ ‘ಆರ್ಆರ್ಆರ್’ (223) ಹಾಗೂ ‘ಬಾಹುಬಲಿ 2’ (217) ಚಿತ್ರವನ್ನು ಹಿಂದಿಕ್ಕಲು ಈ ಸಿನಿಮಾ ಬಳಿ ಸಾಧ್ಯವಾಗಿಲ್ಲ.’
ಇದನ್ನೂ ಓದಿ: Kalki 2898 AD 2: ಶೀಘ್ರದಲ್ಲೇ ಬರಲಿದೆ ಕಲ್ಕಿ 2898ಎಡಿ ಭಾಗ- 2!
ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.
ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.
ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.
ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈತ ಕಲಿಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದೇ ಭಾವಿಸಲಾಗಿದೆ. ಕಲಿಯುಗ ವಂಚನೆ, ಪಾಪ ಮತ್ತು ಅನೈತಿಕತೆಯಿಂದ ತುಂಬಿರುವ ಯುಗವಾಗಿದೆ. ಇದೀಗ ತೆರೆಗೆ ಬಂದಿರುವ ‘ಕಲ್ಕಿ 2898 ಎಡಿ’ ಈ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತೆಲುಗು ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಒಳಗೊಂಡ ಈ ಚಿತ್ರದಲ್ಲಿ ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಅದ್ಭುತವಾಗಿ ನಿರ್ಮಿಸಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹುತೇಕ ಎಲ್ಲಾ ಪ್ರಮುಖ ಪಾತ್ರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಗುರುತಿಸಬಹುದು. ಟ್ರೇಲರ್‌ನಲ್ಲಿ ಭವಿಷ್ಯ ನುಡಿದ ಕಲ್ಕಿಯ ಗುರುತಿನ ಬಗ್ಗೆ ಅಶ್ವಿನ್ ಯಾವುದೇ ಸುಳಿವು ನೀಡಲಿಲ್ಲ.