ಬೆಂಗಳೂರು: ʻಕಲ್ಕಿ 2898 AD‘ ತನ್ನ ಎರಡನೇ ವಾರಾಂತ್ಯದಲ್ಲಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಎರಡನೇ ಶುಕ್ರವಾರ-ಭಾನುವಾರದ ನಡುವೆ ಸುಮಾರು 230 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕೇವಲ 11 ದಿನಕ್ಕೆ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ ಸ್ಯಾಕ್‌ನಿಲ್ಕ್ ಪ್ರಕಾರ, ಚಿತ್ರವು ತನ್ನ ಎರಡನೇ ಭಾನುವಾರದಂದು 500 ಕೋಟಿ ಮೈಲಿಗಲ್ಲನ್ನು ದಾಟಿದೆ.
ಪ್ರಭಾಸ್ ಅಭಿನಯದ ಈ ಚಿತ್ರವು ಈಗ ಆಮೀರ್ ಖಾನ್ ಅವರ ‘ಪಿಕೆ’ ಮತ್ತು ಸನ್ನಿ ಡಿಯೋಲ್ ಅವರ ಬ್ಲಾಕ್ಬಸ್ಟರ್, ‘ಗದರ್ 2’ ಸಿನಿಮಾ ಕಲೆಕ್ಷನ್‌ನ್ನು ಮೀರಿಸಿದೆ. 10 ನೇ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿದೆ.
- ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿ ಇದು.
- ದಂಗಲ್ (2016): 2070.3 ಕೋಟಿ ರೂ
- ಬಾಹುಬಲಿ 2 (2017): 1788.06 ಕೋಟಿ ರೂ
- RRR (2022): 1230 ಕೋಟಿ ರೂ
- ಕೆಜಿಎಫ್ 2 (2022): 1215 ಕೋಟಿ ರೂ
- ಜವಾನ್ (2023): 1160 ಕೋಟಿ ರೂ
- ಪಠಾಣ್ (2023): 1055 ಕೋಟಿ ರೂ
- ಬಜರಂಗಿ ಭಾಯಿಜಾನ್ (2015): 922.03 ಕೋಟಿ ರೂ
- ಅನಿಮಲ್ (2023): 915 ಕೋಟಿ ರೂ
- ಸೀಕ್ರೆಟ್ ಸೂಪರ್ಸ್ಟಾರ್ (2017): 912.75 ಕೋಟಿ ರೂ
- ಕಲ್ಕಿ 2898 AD (2024): ರೂ 832.2 ಕೋಟಿ
- ಪಿಕೆ (2014): 792 ಕೋಟಿ ರೂ
- 2.0 (2018): ರೂ 744.78 ಕೋಟಿ
- ಗದರ್ 2 (2023): 686 ಕೋಟಿ ರೂ
ಕಲ್ಕಿ 2898 AD ತನ್ನ ಮೊದಲ ವಾರದಲ್ಲಿ ಒಟ್ಟು ರೂ 414.85 ಕೋಟಿ ಗಳಿಸಿತು. ಕಲ್ಕಿ ವಿಶ್ವ ಬಾಕ್ಸ್ ಆಫೀಸ್ನಲ್ಲೂ ಮಿಂಚುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿ ಗಳಿಸಿದೆ. ಶೀಘ್ರವೇ ಚಿತ್ರ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.
ತೆಲುಗು ಪ್ರದರ್ಶನಗಳಲ್ಲಿ 242.85 ಕೋಟಿ ರೂಪಾಯಿಗಳನ್ನು ಮತ್ತು ಹಿಂದಿ ಪ್ರದರ್ಶನಗಳಲ್ಲಿ 211.9 ಕೋಟಿ ರೂಪಾಯಿಗಳನ್ನು ಗಳಿಸಿದೆ. ಚಿತ್ರದ ತಮಿಳು ಶೋಗಳು 30.1 ಕೋಟಿ, ಮಲಯಾಳಂ ಶೋ 18.2 ಕೋಟಿ ಮತ್ತು ಕನ್ನಡ ಪ್ರದರ್ಶನಗಳು ರೂ 3.95 ಕೋಟಿ ರೂ. ಆಗಿದೆ.
ಇದನ್ನೂ ಓದಿ: Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ʻಕಲ್ಕಿ 2898 ಎಡಿʼಸಿನಿಮಾ!
ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.