Site icon Vistara News

Kalki 2898 AD: ಪ್ರಭಾಸ್‌ ಜೀವನದಲ್ಲಿ ಎಂಟ್ರಿ ಆದ ವ್ಯಕ್ತಿ ಇವರೇನಾ? ಏನದು ʻಬುಜ್ಜಿʼ?

Kalki 2898 AD Keerthy Suresh Lends Her Voice To Bujji Car

ಬೆಂಗಳೂರು: ಇತ್ತೀಚೆಗೆ ಟಾಲಿವುಡ್‌ ನಟ ಪ್ರಭಾಸ್‌ ಅವರು ಡಾರ್ಲಿಂಗ್ಸ್‌(ಫ್ಯಾನ್ಸ್)ಗೆ (Kalki 2898 AD) ಸರ್‌ಪ್ರೈಸ್ ನ್ಯೂಸ್ ಇದೆ ಎಂದು ಇನ್‌ಸ್ಟಾ ಪೋಸ್ಟ್‌ ಮಾಡಿದ್ದರು. ಇದಾದ ಬಳಿಕ ಕೆಲವರು ಪ್ರಭಾಸ್ ಮದುವೆ ಫಿಕ್ಸ್ ಎಂದು ಕಮೆಂಟ್‌ ಮಾಡಿದ್ದರು. ಕೆಲವೇ ಕ್ಷಣಗಳಲ್ಲಿ ಪ್ರಭಾಸ್‌ ಮದುವೆ ಬಗ್ಗೆ ಹೇಳುತ್ತಿಲ್ಲ. ಸಿನಿಮಾ ಬಗ್ಗೆಯೇ ಪೋಸ್ಟ್‌ ಮಾಡಿರುತ್ತಾರೆ ಎಂದು ಕಮೆಂಟ್‌ ಮಾಡಿದ್ದರು. ಅದರಂತೆ ಈಗ ಆ ವಿಶೇಷ ವ್ಯಕ್ತಿ ಯಾರು ಎನ್ನುವುದು ಈಗ ರಿವೀಲ್ ಆಗಿದೆ. ಸದ್ಯ ಚಿತ್ರದ ʻಬುಜ್ಜಿʼ ಎನ್ನುವ ಪಾತ್ರವನ್ನು ಪರಿಚಯಿಸಲಾಗಿದೆ. ʻಬುಜ್ಜಿʼ ಎನ್ನುವುದು ಒಂದು ಸಣ್ಣ ರೋಬೊ. ಸದಾ ಚಿತ್ರದ ನಾಯಕ ಭೈರವನ ಜತೆಗಿರುವ ಪಾತ್ರ. ಬುಜ್ಜಿಗೆ ನಟಿ ಕೀರ್ತಿ ಸುರೇಶ್ ವಾಯ್ಸ್ ಕೊಟ್ಟಿದ್ದಾರೆ. ಸದ್ಯ ಹೊಸ ಮೇಕಿಂಗ್ ವಿಡಿಯೊವೊಂದು ರಿಲೀಸ್ ಆಗಿದೆ.  ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರಕ್ಕಾಗಿಯೇ ಪ್ರಭಾಸ್​ ಅವರು ಆ ರೀತಿ ಪೋಸ್ಟ್​ ಮಾಡಿದ್ದರು. 

ಸದ್ಯ ಹೊಸ ಮೇಕಿಂಗ್ ವಿಡಿಯೊವೊಂದು ರಿಲೀಸ್ ಆಗಿದೆ. ಅದಲ್ಲಿ ಬುಜ್ಜಿ “ನನ್ನ ಜೀವನವೇನು? ‘ದೇಹ ಇಲ್ಲದೇ ಹೀಗೆ ಬದುಕಬೇಕಾ?” ಎಂದು ಕೇಳುತ್ತದೆ. ಅಷ್ಟರಲ್ಲಿ ಪ್ರಭಾಸ್ ಎಂಟ್ರಿ ಆಗುತ್ತದೆ. ಬುಜ್ಜಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮೇ 22 ರವರೆಗೆ ಕಾಯಬೇಕು ಎಂದು ಚಿತ್ರತಂಡ ಟ್ವಿಸ್ಟ್ ಕೊಟ್ಟಿದೆ. ಬಹಳ ಸ್ಮಾರ್ಟ್ ಆಗಿರುವ ಬುಜ್ಜಿಗೆ ವಾಹನ ಇರಲಿದೆ. ವಾಹನ ಹೇಗೆ ಸಿದ್ದ ಪಡಿಸಿಲಾಗಿತ್ತು ಎನ್ನುವ ಮೇಕಿಂಗ್‌ ವಿಡಿಯೊ ಇದು. ಮೇ 22ಕ್ಕೆ ಆ ವಾಹನದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ನಟಿ ಕೀರ್ತಿ ಸುರೇಶ್ ವಾಯ್ಸ್ ಬುಜ್ಜಿಗೆ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ನಟಿಯರು ವಾಯ್ಸ್ ಕೊಡಲಿದ್ದಾರೆ. ಕನ್ನಡದಲ್ಲಿ ಯಾರು ಡಬ್ ಮಾಡುತ್ತಾರೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ.

ಇದನ್ನೂ ಓದಿ: Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

ಕಲ್ಕಿ 2898 ಎಡಿ’ ಸಿನಿಮಾ ಸೈನ್ಸ್​ ಫಿಕ್ಷನ್​ ಮಾದರಿಯಲ್ಲಿ ಮೂಡಿಬರುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಇದು ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇವರ ಜತೆಗೆ ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchan) ಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿವಿಧ ಭಾಷೆಗಳಲ್ಲಿ ʼಕಲ್ಕಿ 2898 ಎಡಿʼ ಸಿನಿಮಾ ತೆರೆಗೆ ಬರಲಿದೆ. ಈ ಪೈಕಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ದೀಪಿಕಾ ಅವರೇ ಡಬ್‌ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2006ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ ಕನ್ನಡದ ʼಐಶ್ವರ್ಯಾʼ ಚಿತ್ರದ ಮೂಲಕ ದೀಪಿಕಾ ಬಣ್ಣದ ಲೋಕ ಪ್ರವೇಶಿಸಿದ್ದರು. ಅದರ ಬಳಿಕ ಅವರು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರು ಕನ್ನಡದಲ್ಲಢ ಡಬ್‌ ಮಾಡಿರುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಬಹು ತಾರಾಗಣ ಹೊಂದಿರುವ ಚಿತ್ರ ಜೂನ್ 27ರಂದು ತೆರೆಗೆ ಬರಲಿದೆ. ಮೊದಲಿಗೆ ಮೇ 9ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಚುನಾವಣೆಯ ಕಾರಣ ಸಿನಿಮಾ ರಿಲೀಸ್‌ ಡೇಟ್‌ವನ್ನು ಮುಂದೂಡಲಾಗಿತ್ತು. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯದಲ್ಲಿ ನಿರತವಾಗಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ಮೊದಲೇ ಒಪ್ಪಂದ ಮಾಡಿಕೊಂಡಂತೆ ಈ ತಿಂಗಳಲ್ಲಿ ಪ್ರೊಮೊಷನ್‌ ನಡೆಸಿಕೊಂಡಲಿದ್ದಾರೆ. ಅದರ ಭಾಗವಾಗಿ ವಿವಿಧ ಮಾಧ್ಯಮಗಳು ಅವರ ಸಂದರ್ಶನವನ್ನು ಚಿತ್ರೀಕರಿಸಲು ತಯಾರಿ ನಡೆಸಿವೆ ಎನ್ನಲಾಗಿದೆ. ಇದರ ಜತೆಗೆ ಡಬ್ಬಿಂಗ್‌ ಅನ್ನೂ ಅವರು ಪೂರ್ಣಗೊಳಿಸಲಿದ್ದಾರೆ. ಸೆಪ್ಟಂಬರ್‌ನಲ್ಲಿ ಮಗು ಜನಿಸುವ ನಿರೀಕ್ಷೆ ಇದ್ದು, ಬಾಕಿ ಇರುವ ಸಿನಿಮಾ ಚಟುವಟಿಕೆಗಳನ್ನೆಲ್ಲ ನಡೆಸಿ ದೀಪಿಕಾ ಜೂನ್‌ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: IPL 2024: ರಾಯಲ್‌ ಆಗಿ ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು; ಮುಗಿಲು ಮುಟ್ಟಿದ ಸಂಭ್ರಮ

ಅಶ್ವತ್ಥಾಮನಾಗಿ ಗಮನ ಸೆಳೆದ ಅಮಿತಾಭ್‌

ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿರುವ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಲುಕ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಏ. 21ರಂದು ಚಿತ್ರತಂಡ ಅಮಿತಾಭ್‌ ಅವರ ಪಾತ್ರವನ್ನು ರಿವೀಲ್‌ ಮಾಡಿದೆ. ಜತೆಗೆ ಶಿವರಾತ್ರಿಯಂದು ಪ್ರಭಾಸ್‌ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿತ್ತು. ಇದು ಕೂಡ ಅಭಿಮಾನಿಗಳನ್ನು ಆಕರ್ಷಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.

ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

Exit mobile version