Site icon Vistara News

Kalki 2898 AD: ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಕಂಡ ʻಕಲ್ಕಿʼ: ಪ್ರಭಾಸ್‌ ಅಬ್ಬರಕ್ಕೆ ಬಾಕ್ಸ್ ಆಫೀಸ್‌ ಧೂಳೀಪಟ!

Kalki 2898 AD Prabhas Film Hits Jackpot 500 Cr WW In Opening

ಬೆಂಗಳೂರು: ಕಲ್ಕಿ 2898 AD (Kalki 2898 AD) ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ನಾಗ್ ಅಶ್ವಿನ್ ಅವರ ಕಲ್ಕಿ 2898 AD ಜೂನ್ 27 ರಂದು ಬಿಡುಗಡೆಯಾಯಿತು. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ. ವರದಿಗಳ ಪ್ರಕಾರ, ಕಲ್ಕಿ 2898 AD ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಮೀರಿದೆ.ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

ಕಲ್ಕಿ 2898 AD ತನ್ನ ಆರಂಭಿಕ ದಿನದಲ್ಲಿ 95.3 ಕೋಟಿ ರೂ. ಮತ್ತು ಶುಕ್ರವಾರ 57.6 ಕೋಟಿ ರೂ. ಭಾರತದಲ್ಲಿ ಗಳಿಸಿತು. ಶನಿವಾರ 67.1 ಕೋಟಿ ರೂ. ಮತ್ತು ಭಾನುವಾರ 83.2 ಕೋಟಿ ರೂ. ಗಳಿಸಿದ ಈ ಚಿತ್ರ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಚಿತ್ರದ ಒಟ್ಟು ಮೊತ್ತ 300.6 ಕೋಟಿ ರೂ. ಆಗಿದೆ. ವಿಶ್ವಾದ್ಯಂತ ಮೂರು ದಿನಗಳಲ್ಲಿ ಚಿತ್ರ 415 ಕೋಟಿ ಗಳಿಸಿದೆ. ವಾರದ ದಿನಗಳಲ್ಲೂ ಚಿತ್ರ ತನ್ನ ಯಶಸ್ವಿ ಪ್ರದರ್ಶನವನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಕಲ್ಕಿ 2898 AD ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ 2D ಮತ್ತು 3D ನಲ್ಲಿ ಬಿಡುಗಡೆಯಾಯಿತು.

ಕರ್ನಾಟಕದಲ್ಲಿ ‘ಕಲ್ಕಿ2898 AD’ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ (Nett) ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

ಇದನ್ನೂ ಓದಿ: Kalki 2898 AD: ಮೂರನೇ ದಿನ ಭರ್ಜರಿ ಗಳಿಕೆ ಕಂಡ ‘ಕಲ್ಕಿ 2898 ಎಡಿ’ ಸಿನಿಮಾ ! 

ಕಲ್ಕಿ 2898 AD ಜೂನ್ 27 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಚಲನಚಿತ್ರವು ಈಗಾಗಲೇ ತನ್ನ ಮುಂಗಡ ಬುಕಿಂಗ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Exit mobile version