Site icon Vistara News

Kamal Haasan: ಮುಂದೊಂದು ದಿನ ದೀಪಿಕಾ ಮಗು ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದ ಕಮಲ್‌ ಹಾಸನ್‌!

Kamal Haasan predicts Deepika Padukone baby choose cinema career

ಬೆಂಗಳೂರು: : ನಾಗ್ ಅಶ್ವಿನ್ ಅವರ ಕಲ್ಕಿ 2898 ADಯ (Kalki 2898 AD) ಪ್ರೀ-ರಿಲೀಸ್ ಈವೆಂಟ್ ಮುಂಬೈನಲ್ಲಿ ಇತ್ತೀಚೆಗೆ ನಡೆದಿತ್ತು. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ತಂಡದಲ್ಲಿ ಕಲ್ಕಿ ಕ್ರಾನಿಕಲ್ಸ್ ಎಂಬ ಶೀರ್ಷಿಕೆಯ ಚರ್ಚೆಯ (Kamal Haasan) ಸಂದರ್ಭದಲ್ಲಿ, ಕಮಲ್ ಹಾಸನ್ ಅವರು ದೀಪಿಕಾ ಅವರ ಮಗು ಮುಂದೊಂದು ದಿನ ಸಿನಿಮಾ ಮಾಡಬಹುದು ಎಂದು ಭವಿಷ್ಯ ನುಡಿದರು.

ನಿರ್ದೇಶಕ ನಾಗ್ ಅಶ್ವಿನ್ ಅವರು ಮಗುವಿನಂತೆ ಎಂದು ದೀಪಿಕಾ ಚರ್ಚೆ ನಡೆಯುತ್ತಿರುವಾಗ ಹೇಳಿದರು. ಈ ಬಗ್ಗೆ ದೀಪಿಕಾ ಮಾತನಾಡಿ ʻʻನಾಗ್ ಅಶ್ವಿನ್ ಅವರು ಕಾಲ್‌ ಮಾಡಿದ್ದಾಗ, ನಾನು ಬಾಂಬೆಯಲ್ಲಿದ್ದೆ. ಬೇರೆ ಬೇರೆ ಶೆಡ್ಯೂಲ್‌ಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದರಿಂದ ಸಿನಿಮಾಗೆ ಲಾಂಗ್‌ ಬ್ರೇಕ್‌ ಹಾಕಿದ್ದೆ. ಹೀಗಾಗಿ ಒಂದು ದಿನ ನಾಗ್ ಅಶ್ವಿನ್ ಅವರು ನನಗೆ ಕರೆ ಮಾಡಿದ್ದು. ಅವರಿಂದ ತುಂಬ ಮಿಸ್ಡ್ ಕಾಲ್ ಇತ್ತು. ಹೀಗಾಗಿ ನಾನು ಏನಾಯಿತು ಎಂದು ಕೇಳಿದಾಗ, ‘ನಾವು ಕಮಲ್ ಸರ್ ಜೊತೆಗೆ ನಮ್ಮ ಮೊದಲ ದಿನವನ್ನು ಶೂಟ್ ಮಾಡಿದ್ದೇವೆ ಎಂದು ಹೇಳಲು ನಾನು ನಿಮಗೆ ಕರೆ ಮಾಡಿದ್ದೇನೆ.’ ಎಂದು ಮಗುವಿನಂತೆ ಹೇಳಿದರುʼʼಎಂದರು. ಈ ವೇಳೆ ಕಮಲ್‌ ಅವರು ನಟಿಯ ಬೇಬಿ ಬಂಪ್‌ ಕಡೆ ತೋರಿಸಿ ʻʻಮುಂದೊಂದು ದಿನ ಈ ಮಗು ಕೂಡ ಸಿನಿಮಾ ಮಾಡಲಿ ಎಂದು ಆಶಿಸುತ್ತೇವೆʼʼ ಎಂದು ಹೇಳಿದರು.

ಇದನ್ನೂ ಓದಿ: Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಹಾಗೂ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಟ್ರೇಲರ್‌ನಲ್ಲಿ ಸಿನಿಮಾದ ಪಂಚ್‌ ಡೈಲಾಗ್‌, ಫೈಟ್ಸ್‌ ನೋಡಿ ಅಭಿಮಾನಿಗಳು ದಶಕದ ಟ್ರೇಲರ್‌ ಎಂದು ಹೇಳುತ್ತಿದ್ದಾರೆ. ಚಿತ್ರದ ಟ್ರೇಲರ್‌ ನೋಡುವವರಿಗೆ ಇದು ಯುಗಗಳ ಕಥೆ ಎಂಬುದು ಸ್ಪಷ್ಟವಾಗುತ್ತದೆ. ರೆಕಾರ್ಡ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಫೈಟ್‌ ಸೋತಿಲ್ಲ ಎಂದು ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹೇಳುವ ಡೈಲಾಗ್‌ ಟ್ರೇಲರ್‌ನ ಹೈಲೆಟ್‌ ಆಗಿದೆ.

Exit mobile version