ಬೆಂಗಳೂರು: ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರ (Lal Salaam Box Office) ಕಳೆದ ಮೂರು ದಿನಗಳಿಂದ ನಿರಂತರ ಕಲೆಕ್ಷನ್ ಮಾಡುತ್ತಿದೆ. ರಜನಿಕಾಂತ್ ಪ್ರಮುಖ ಅತಿಥಿ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇಲ್ಲಿಯವರೆಗೆ ಭಾರತದಲ್ಲಿ 10 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ. ಈ ಮೂಲಕ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಲಾಲ್ ಸಲಾಂ’ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ರಜನಿಕಾಂತ್ ಅವರ ಅಭಿಮಾನಿಗಳು ಚಿತ್ರ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ದೇಶೀಯ ಬಾಕ್ಸ್ ಆಫೀಸ್ ನಲ್ಲಿ ಮೂರು ದಿನಗಳ ಒಟ್ಟು ಕಲೆಕ್ಷನ್ 9.70 ಕೋಟಿ ರೂ. ಆಗಿದೆ ಎಂದು ವರದಿಯಾಗಿದೆ. ‘ಲಾಲ್ ಸಲಾಂ’ನ ತಮಿಳು ಆವೃತ್ತಿಯಲ್ಲಿ ಫೆಬ್ರವರಿ 11 ರಂದು ಭಾರತದಲ್ಲಿ ಶೇ.28.53 ಆಕ್ಯುಪೆನ್ಸಿಯನ್ನು ದಾಖಲಿಸಿದೆ.
ಆಂಧ್ರದಲ್ಲಿ ಹಿನ್ನಡೆ
ತಮಿಳುನಾಡಿನಲ್ಲಿ ಉತ್ತಮವಾದ ಆರಂಭ ಪಡೆದ ಚಿತ್ರಕ್ಕೆ, ಆಂಧ್ರದಲ್ಲಿ ಹಿನ್ನಡೆಯಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಅನೇಕ ಕಡೆ ʻಲಾಲ್ ಸಲಾಂʼ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ರದ್ದು ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಹೈದ್ರಾಬಾದ್ ನ ಅನೇಕ ಕಡೆ ʻಲಾಲ್ ಸಲಾಂʼ ಚಿತ್ರದ ತೆಲುಗು ಪ್ರದರ್ಶನ ರದ್ದಾಗಿದ್ದವು. ಮುಂಗಡ ಟಿಕೆಟ್ ಖರೀದಿಸಿದ್ದ ಬೆರಳಣಿಕೆಯಷ್ಟು ಜನಕ್ಕೆ ಹಣವನ್ನೂ ಮರುಪಾವತಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮೊಯ್ದೀನ್ ಭಾಯ್ ಪಾತ್ರದಲ್ಲಿ ಸೂಪರ್‌ಸ್ಟಾರ್ ರಜಿನಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೇವಲ 10-15 ನಿಮಿಷದ ಪಾತ್ರ ಅಲ್ಲ. ಹೆಚ್ಚು ಕಡಿಮೆ 40 ನಿಮಿಷಗಳ ಅವಧಿಯ ಪಾತ್ರದಲ್ಲಿ ರಜನಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Lal Salaam Movie: ಪ್ರೇಕ್ಷಕರೇ ಇಲ್ಲದೇ ಪ್ರದರ್ಶನ ರದ್ದು; ಗೆಲ್ಲಲ್ಲಿಲ್ಲ ರಜನಿಕಾಂತ್ ‘ಲಾಲ್ ಸಲಾಂ’!
@rajinikanth #LalSalaam pic.twitter.com/cTdG0MnIMT
— Dhanushksdurai Dhanushksdurai (@dhanushksdurai) February 12, 2024
ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ನಿರ್ಮಾಣ ಆಗಿರುವ ‘ಲಾಲ್ ಸಲಾಂ’ ಸಿನಿಮಾಗೆ ರಜನಿಕಾಂತ್ ಅವರ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ.ಲಾಲ್ ಸಲಾಂ’ ಸಿನಿಮಾಗೆ ಐಶ್ವರ್ಯಾ ನಿರ್ದೇಶನವಿದೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯ ಬಾಲಕೃಷ್ಣನ್, ವಿವೇಕ್ ಪ್ರಸನ್ನ, ಮತ್ತು ಕೆಎಸ್ ರವಿಕುಮಾರ್ ತಾರಾ ಬಳಗ.ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಕಾಣಿಸಿಕೊಂಡಿದ್ದಾರೆ.