Site icon Vistara News

Pushpa 2: ಲೀಕ್‌ ಆಯ್ತು ‘ಪುಷ್ಪ 2’ ಶ್ರೀವಲ್ಲಿಯ ಹೊಸ ಅವತಾರ!

Leaked video Rashmika Mandanna Pushpa 2

ಬೆಂಗಳೂರು: ರಶ್ಮಿಕಾ ಮಂದಣ್ಣ ಈಗಾಗಲೇ ʻಅನಿಮಲ್‌ʼ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ಟಾಲಿವುಡ್‌ ನಟ ಅಲ್ಲು ಅರ್ಜುನ್ ಅವರ ‘ಪುಷ್ಪ 2′( ‘ಪುಷ್ಪ: ದಿ ರೂಲ್’ ) (Pushpa 2) ಚಿತ್ರೀಕರಣದಲ್ಲಿದ್ದಾರೆ. ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿರುವ ನಟಿಯ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿದೆ. ಮುಂದಿನ ಭಾಗದಲ್ಲಿ, ಪುಷ್ಪರಾಜ್ ಅವರನ್ನು ಮದುವೆಯಾದ ಶ್ರೀವಲ್ಲಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ನಿರ್ದೇಶಕ ಸುಕುಮಾರ್ ಕಳೆದ ಕೆಲವು ತಿಂಗಳುಗಳಿಂದ ‘ಪುಷ್ಪ 2’ ಚಿತ್ರೀಕರಣದಲ್ಲಿದ್ದಾರೆ. ಎರಡನೇ ಭಾಗ ಮುಗಿಯುವ ಹಂತದಲ್ಲಿದೆ. ‘ಪುಷ್ಪ 2’ ಬಹು ಭಾಷೆಗಳಲ್ಲಿ 2024ರ ಅಗಸ್ಟ್ 15ರಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಮೊದಲ ಭಾಗ, ‘ಪುಷ್ಪ: ದಿ ರೈಸ್’ನಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದಗ್ದರು. ಡಿಸೆಂಬರ್ 2021 ರಲ್ಲಿ ಬಿಡುಗಡೆಯಾದ ‘ಪುಷ್ಪ’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದು ಹಿಂದಿ ಬೆಲ್ಟ್‌ನಲ್ಲಿಯೂ ದಾಖಲೆ ಮಾಡಿತ್ತು.

‘ಪುಷ್ಪ 2’ ಜತೆ ಪೈಪೋಟಿಗಿಳಿದ ಶಿವಣ್ಣ, ಪ್ರಭಾಸ್!

ಪ್ರಭಾಸ್ ಜಾಗತಿಕವಾಗಿ ಇಮೇಜ್ ಹೊಂದಿರುವ ಪ್ಯಾನ್-ಇಂಡಿಯಾ (Prabhas Vs Allu Arjun) ಹೀರೊ. ಸ್ಟೈಲ್ ಐಕಾನ್ ಎಂದು ಖ್ಯಾತಿ ಪಡೆದಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಲ್ಲು ಅರ್ಜುನ್. ಇಬ್ಬರೂ ಆಫ್-ಸ್ಕ್ರೀನ್‌ನಲ್ಲಿ ಉತ್ತಮ ಸ್ನೇಹಿತರು. ಆದರೀಗ ಇಬ್ಬರ ಸಿನಿಮಾಗಳು ಒಂದೇ ದಿನ ರಿಲೀಸ್‌ ಆಗಲಿದೆ ಎಂದು ವರದಿಯಾಗಿದೆ. ಮೇ 9ರಂದು ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ರಿಲೀಸ್‌ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ತೆಲುಗು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಕಾರಣಕ್ಕೆ ಡೇಟ್‌ ಪೋಸ್ಟ್‌ಪೋನ್‌ ಆಗುವ ಸಾಧ್ಯತೆ ಇದೆ. ಇದೀಗ ವರದಿಯ ಪ್ರಕಾರ ಕಾರಣ ಆಗಸ್ಟ್ 15 ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Pushpa 2: ಪುಷ್ಪ 2 ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಅಲ್ಲು ಅರ್ಜುನ್‌!

‘ಮಫ್ತಿ’ ಸಿನಿಮಾದಲ್ಲಿ ʻಭೈರತಿ ರಣಗಲ್ʼ (Bhairathi Ranagal) ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ (Shiva Rajkumar). ಶಿವಣ್ಣ ಅವರ ಹೋಂ ಬ್ಯಾನರ್​ನಲ್ಲಿ ಈ ಚಿತ್ರ ಮೂಡಿ ಬರುತ್ತಿರುವುದು ಗೊತ್ತೇ ಇದೆ. ‘ಗೀತಾ ಪಿಕ್ಚರ್ಸ್​’ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ʻಮಫ್ತಿ’ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನರ್ತನ್ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಇದೀಗ ಈ ಸಿನಿಮಾ ಬಿಗ್‌ ಅಪ್‌ಡೇಟ್‌ ಹಂಚಿಕೊಂಡಿದೆ. ‘ಪುಷ್ಪ 2’, ‘ಸಿಂಗಂ ಅಗೇನ್’ ಜತೆ ಸ್ಪರ್ಧೆಗೆ ಇಳಿಯುತ್ತಿದೆ ‘ಭೈರತಿ ರಣಗಲ್ʼ. ಆಗಸ್ಟ್ 15ರಂದು ಚಿತ್ರ ಬಿಡುಗಡೆ ಆಗಲಿದೆ.

Exit mobile version