Site icon Vistara News

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

List of Movies Releasing From may 24

ಬೆಂಗಳೂರು: ಐಪಿಎಲ್‌, ಲೋಕಸಭಾ ಎಲೆಕ್ಷನ್‌ನಿಂದಾಗಿ ಕನ್ನಡ ಸಿನಿಮಾಗಳು (List of Movies Releasing) ಪ್ರೇಕ್ಷಕರ ಮುಂದೆ ಬಂದಿಲ್ಲ. ಜೂನ್ 4ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಸಹ ಹೊರ ಬೀಳಲಿದೆ. ಆ ಬಳಿಕವೇ ಚಿತ್ರರಂಗ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ. ದೊಡ್ಡ ಸಿನಿಮಾಗಳು ಅಲ್ಲದೇ ಇದ್ದರೂ ಒಂದಷ್ಟು ಸಿನಿಮಾಗಳು ಈ ವಾರ ಬಿಡುಗಡೆಗೆ ಸಜ್ಜಾಗಿವೆ. ಅವುಗಳು ಯಾವುದೆಲ್ಲ ನೋಡೋಣ…

‘ದಿ ಜಡ್ಜ್‌ಮೆಂಟ್’

ಜಿ9 ಕಮ್ಯೂನಿಕೇಷನ್ ಮೀಡಿಯಾ & ಎಂಟರ್ಟೈನ್ಮೆಂಟ್ ಲಾಂಛನದಲ್ಲಿ (tKannada New Movie) ನಿರ್ಮಾಣವಾಗುತ್ತಿರುವ, ‘ಕ್ರೇಜಿಸ್ಟಾರ್’ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ದಿ ಜಡ್ಜ್‌ಮೆಂಟ್’ ಚಿತ್ರದಲ್ಲಿ ದಿಗಂತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ‘ದಿ ಜಡ್ಜ್‌ಮೆಂಟ್’ ಸಿನಿಮಾ ಈ ವಾರ ತೆರೆಗೆ ಬರ್ತಿದೆ.ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ ಎಸ್ ಸಂಕಲನ‌, ಪ್ರಮೋದ್ ಮರವಂತೆ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಡಾ. ರವಿ ವರ್ಮ ಸಾಹಸ ನಿರ್ದೇಶನ, ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನ ‘ದ ಜಡ್ಜ್ ಮೆಂಟ್’ ಚಿತ್ರಕ್ಕಿದೆ.

ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!

ಮೂರನೇ ಕೃಷ್ಣಪ್ಪ

ವಿಭಿನ್ನ ಕಥಾನಕದ ಮೂಲಕವೇ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಹೊರಟಿರುವ ಸಿನಿಮಾ ʻಮೂರನೇ ಕೃಷ್ಣಪ್ಪʼ. ಲೂಸ್ ಮಾದ ಯೋಗಿ (Kannada New Movie) ಸಂಭಾಷಣೆಯಿಂದ ಶುರುವಾಗುವ ಟ್ರೈಲರ್‌ನಲ್ಲಿ ಕೋಲಾರ‌ ಕನ್ನಡ‌ , ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ ಅಭಿನಯ ಗಮನ ಸೆಳೆಯುತ್ತದೆ. ಹಳ್ಳಿ ಸೊಗಡನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಟ್ರೇಲರ್ ಪ್ರಾಮಿಸಿಂಗ್ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ಗ್ಯಾರಂಟಿ ಎಂಬ ಸಂದೇಶ ರವಾನಿಸಿದೆ. ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ. ಮೇ 24ಕ್ಕೆ ಮೂರನೇ ಕೃಷ್ಣಪ್ಪನ ಕಥೆ ತೆರೆಗೆ ಬರಲಿದೆ.

3ದೇವಿ

3ದೇವಿ ಅಶ್ವಿನ್ ಮ್ಯಾಥ್ಯೂ ನಿರ್ದೇಶನದ 3ದೇವಿ ಸಿನಿಮಾ ಕೂಡ ಈ ವಾರವೇ ಪ್ರೇಕ್ಷಕರ ಮುಂದೆ ಬರಲಿದೆ. ಮೊಗ್ಗಿನ ಮನಸ್ಸಿನ ಶುಭಾ ಪೂಂಜಾ (Shubha Poonja) ದೇವಿ ರೂಪದಲ್ಲಿಯೇ ಅಭಿನಯಿಸಿದ್ದಾರೆ. ಸಂಧ್ಯಾ ಮತ್ತು ಜ್ಯೋತ್ಸ್ನಾ ತಾರಾಗಣದಲ್ಲಿದ್ದಾರೆ.

ಎವಿಡೆನ್ಸ್

ಸಿ. ಪಿ ಪ್ರವೀಣ್ ನಿರ್ದೇಶನದ ‘ಎವಿಡೆನ್ಸ್’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ʼಮಂಗಳಗೌರಿ ಮದುವೆ’ ಸೇರಿ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ, ಅದರಲ್ಲಿಯೂ ದೇವಿ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರುವ ನಟಿ ಮಾನಸಾ ಜೋಶಿ ಅವರು ಈ ಬಾರಿ ‘ಎವಿಡೆನ್ಸ್’ ಎನ್ನುವ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ 3 ಚಿತ್ರಗಳ ಜೊತೆಗೆ ‘ಸೆಲ್ಯೂಟ್’ ಎನ್ನುವ ಮತ್ತೊಂದು ಕನ್ನಡ ಸಿನಿಮಾ ತೆರೆಗೆ ಬರಲಿದೆ.

ಟರ್ಬೋ

ಮಮ್ಮುಟ್ಟಿ (Mammootty) ಅವರು ಈ ಹಿಂದೆ ಘೋಷಿಸಿದ ಮೂರು ಸಿನಿಮಾಗಳ ಬಿಡುಗಡೆಗಳಲ್ಲಿ ʻಟರ್ಬೋʼ (Turbo Trailer Out) ಕೂಡ ಒಂದು. ರಾಜ್ ಬಿ ಶೆಟ್ಟಿ (Raj B Shetty) ಮತ್ತು ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಲ್ಲಿ ರಾಜ್‌ ಬಿ ಶೆಟ್ಟಿ ಅವರದ್ದು ಸಣ್ಣ ಪಾತ್ರ ಏನಲ್ಲ. ಮಮ್ಮುಟಿಗೆ ಪೈಪೋಟಿ ಕೊಡುವಂತಿದೆ. ಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ.

ಇದನ್ನೂ ಓದಿ: Dina Bhavishya : ಈ ರಾಶಿಯವರು ಯಾರೊಂದಿಗೂ ದಿನದ ಮಟ್ಟಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ

ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಇದು ಆ್ಯಕ್ಷನ್ ಕಾಮಿಡಿ ಎಂದು ಹೇಳಲಾಗುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ.ಇದೊಂದು ಆಕ್ಷನ್ ಕಾಮಿಡಿ ಎಂಟರ್‌ಟೈನರ್ ಆಗಿದ್ದು ಮೇ 23ಕ್ಕೆ ತೆರೆಗೆ ಬರಲಿದೆ. ಆಟೋ ಬಿಲ್ಲ ಆಗಿ ತೆಲುಗು ನಟ ಸುನೀಲ್ ಕೂಡ ಕಾಣಿಸಿಕೊಂಡಿದ್ದಾರೆ. ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕಿ ಸೇರಿದಂತೆ ದೊಡ್ಡ ತಾರಾಗಣ ‘ಟರ್ಬೋ’ ಚಿತ್ರದಲ್ಲಿದೆ. ವಿಷ್ಣು ಶರ್ಮಾ ಛಾಯಾಗ್ರಹಣ, ಕ್ರಿಸ್ಟೋ ಕ್ಸೇವಿಯರ್ ಸಂಗೀತ ಚಿತ್ರಕ್ಕಿದೆ.

Exit mobile version