ಬೆಂಗಳೂರು: ನಟ ವಿಜಯ್ ಸೇತುಪತಿ ಅವರ 50ನೇ ಚಿತ್ರ ʻಮಹಾರಾಜʼ ಟ್ರೈಲರ್ (Maharaja Trailer) ಬಿಡುಗಡೆಯಾಗಿದೆ. ನಿಥಿಲನ್ ಸಾಮಿನಾಥನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಮತ್ತು ಅನುರಾಗ್ ಕಶ್ಯಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್‌ನಲ್ಲಿ ನೋಡಿದಾಗ ವಿಜಯ್ ಕ್ಷೌರಿಕ ಪಾತ್ರ ನಿಭಾಯಿಸಿದ್ದಾರೆ. ನಾಪತ್ತೆಯಾದ ಲಕ್ಷ್ಮೀಯನ್ನು ಹುಡುಕಿ ಕೊಡಿ ಎಂದು ಕಥಾನಾಯಕ ಪೊಲೀಸ್ ಸ್ಟೇಷನ್‌ಗೆ ಬರ್ತಾನೆ. ಅಷ್ಟಕ್ಕೂ ಆ ಲಕ್ಷ್ಮೀ ಯಾರು? ಹೀಗೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿಯೇ ಟ್ರೇಲರ್ ನೋಡಿಸಿಕೊಂಡು ಹೋಗುತ್ತದೆ.
ಟ್ರೈಲರ್‌ನಲ್ಲಿ ಲಕ್ಷ್ಮೀಯನ್ನು ಹುಡುಕಿ ಕೊಡಿ ಎಂದು ಕಥಾನಾಯಕ ಪೊಲೀಸ್ ಸ್ಟೇಷನ್‌ಗೆ ಬರ್ತಾನೆ. ಚಿನ್ನ, ಹಣ,ಸಹೋದರಿ, ಹೆಂಡತಿ , ಮಗು ಯಾವುದು ಅಲ್ಲ. ಅಷ್ಟಕ್ಕೂ ಆ ಲಕ್ಷ್ಮೀ ಯಾರು? ಹೀಗೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿಯೇ ಟ್ರೇಲರ್ ನೋಡಿಸಿಕೊಂಡು ಹೋಗುತ್ತದೆ.
ವಿಜಯ್ ಸೇತುಪತಿ 50ನೇ ಚಿತ್ರಕ್ಕಾಗಿ,(50th film ‘Maharaja) ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಜತೆ ಕೈ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್ ಮತ್ತು ನಟ್ಟಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ದಿನೇಶ್ ಪುರುಷೋತ್ತಮನ್ ಅವರ ಛಾಯಾಗ್ರಹಣವಿದೆ. ಕನ್ನಡದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಟ್ರೇಲರ್‌ನಲ್ಲಿರುವ ಸಂಗೀತವೇ ಭಯ ಹುಟ್ಟಿಸುವಂತಿದೆ.
ಇದನ್ನೂ ಓದಿ: Air India Maharaja : ಏರ್ ಇಂಡಿಯಾ ರಿಬ್ರಾಂಡಿಂಗ್, ಮಹಾರಾಜ ನೇಪಥ್ಯಕ್ಕೆ?
ಮಹಾರಾಜ ಚಿತ್ರದಲ್ಲಿ ಮಮತಾ ಮೋಹನ್‌ದಾಸ್, ನಟರಾಜ್ , ಭಾರತಿರಾಜ, ಅಭಿರಾಮಿ, ಸಿಂಗಂಪುಲಿ ಮತ್ತು ಕಲ್ಕಿ ಕೂಡ ನಟಿಸಿದ್ದಾರೆ. ಪ್ಯಾಶನ್ ಸ್ಟುಡಿಯೋಸ್ ಮತ್ತು ದಿ ರೂಟ್ ಅಡಿಯಲ್ಲಿ ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸಾಮಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಹಾರಾಜ ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
ಈ ಹಿಂದೆ ನಟ ಈ ಸಿನಿಮಾ ಕುರಿತು ಮಾತನಾಡಿ ʻʻʻ50ನೇ ಸಿನಿಮಾವನ್ನು ನಿರೀಕ್ಷಿಸಿರಲಿಲ್ಲ. ಇದು ಮೈಲಿಗಲ್ಲಿನಂತಿದೆ. ನಾವು ಎಷ್ಟು ದೂರ ಬಂದಿದ್ದೇವೆ ಎಂಬುದದಕ್ಕೆ ಒಂದು ಭರವಸೆ ಇದು. ಒಳ್ಳೆಯ ಅನುಭವ ನೀಡಿದ ಎಲ್ಲಾ ನಿರ್ದೇಶಕರು ಮತ್ತು ಕಲಾವಿದರಿಗೆ ಧನ್ಯವಾದಗಳು” ಎಂದಿದ್ದರು.
“ನಾನ್ ಮಹಾನ್ ಅಲ್ಲಾ ಚಿತ್ರದ ಡಬ್ಬಿಂಗ್ ಮುಗಿದ ನಂತರ, ಅರುಲ್ದಾಸ್ ಅಣ್ಣನ್ ಮತ್ತು ನಾನು ಪರಸ್ಪರರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು. ಇದ್ದಕ್ಕಿದ್ದಂತೆ ಒಂದು ದಿನ ಎರಡು ಮಿಸ್ಡ್ ಕಾಲ್‌ಗಳಿದ್ದವು. ನಾವು ಮತ್ತೆ ಕರೆ ಮಾಡಿದಾಗ, ನಮ್ಮ ಸ್ನೇಹಿತ ಸೀನು ರಾಮಸಾಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಯಾವುದೇ ಪಾತ್ರ ಕೊಟ್ಟರೂ ಸಿನಿಮಾ ಮಾಡು ಎಂದು ಹೇಳಿದ್ದರು. ಆಮೇಲೆ ಹೋಗಿ ಸೀನು ರಾಮಸಾಮಿ ಸರ್ ಅವರನ್ನು ನೋಡಿದೆ. ಆ ನಂತರ ನಡೆದಿದ್ದೆಲ್ಲ ಇತಿಹಾಸ, ಈಗ ಈ ಹಂತ ತಲುಪಿದ್ದೇನೆ. ತುಂಬಾ ಧನ್ಯವಾದಗಳು ಅರುಲ್ದಾಸ್. ಧನ್ಯವಾದಗಳು ಸೀನು ಸರ್. ಈ ಕ್ಷಣಕ್ಕೆ ಧನ್ಯವಾದಗಳುʼʼ ಎಂದು ಹೇಳಿಕೊಂಡಿದ್ದರು.