ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ಮುಂದಿನ ಚಿತ್ರಕ್ಕೆ ಮೃಣಾಲ್ ಠಾಕೂರ್ (Mrunal Thakur) ಮತ್ತು ಸಿದ್ಧಾಂತ್ ಚತುರ್ವೇದಿ ಜೋಡಿಯಾಗಿ ನಟಿಸುತ್ತಿದ್ದಾರೆ. ಮುಂದಿನ ವಾರ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ವರದಿಯಾಗಿದೆ. ʻಸೀತಾರಾಮಂʼ, ʻಹಾಯ್ ನಾನ್ನʼ, ʻಫ್ಯಾಮಿಲಿ ಸ್ಟಾರ್ʼ ಚಿತ್ರದ ಸಕ್ಸೆಸ್ ನಂತರ ಮೃಣಾಲ್ ಮತ್ತೆ ಹವಾ ಕ್ರಿಯೇಟ್ ಮಾಡಲಿದ್ದಾರೆ. ಮೃಣಾಲ್ ಮತ್ತು ಸಿದ್ಧಾಂತ್ ಮುಂದಿನ ವಾರ ಮುಂಬೈನಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
ಏಪ್ರಿಲ್ ಮೊದಲ ವಾರದಿಂದಲೇ ರವಿ ಉದ್ಯಾವರ್ ಅವರೊಂದಿಗೆ ಕಾರ್ಯಾಗಾರಗಳಿಗೆ ಭಾಗಿಯಾಗಿದ್ದರು. ಉದ್ಯಾವರ್ ಈ ಹಿಂದೆ ದಿವಂಗತ ನಟಿ ಶ್ರೀದೇವಿ ಅಭಿನಯದ MoM (2017) ಚಿತ್ರವನ್ನು ನಿರ್ದೇಶಿಸಿದ್ದರು. ಕೆಲವು ಮೂಲಗಳ ಪ್ರಕಾರ ‘ಲವ್ ಆ್ಯಂಡ್ ವಾರ್’ ಸಿನಿಮಾ ಬಳಿಕ ಬನ್ಸಾಲಿ ಈ ಸಿನಿಮಾದ ಚಿತ್ರೀಕರಣವನ್ನು ಮುಗಿಸುವ ಪ್ಲ್ಯಾನ್‌ನಲ್ಲಿದ್ದಾರೆ.
ಇದನ್ನೂ ಓದಿ: Mrunal Thakur: ಕೈ ಕೈ ಹಿಡಿದುಕೊಂಡ ಮೃಣಾಲ್ ಠಾಕೂರ್- ಬಾದ್‌ಶಾ; ಡೇಟಿಂಗ್ ಇರಬಹುದಾ?
ಬನ್ಸಾಲಿಯ ‘ಲವ್ ಆ್ಯಂಡ್ ವಾರ್’ಗೆ 1964ರ ಹಿಟ್ ಸಿನಿಮಾದಿಂದ ಸ್ಫೂರ್ತಿ!
ʼದೇವ್‌ದಾಸ್ʼ ‘ರಾಮ್ ಲೀಲಾ’, ‘ಬಾಜಿರಾವ್ ಮಸ್ತಾನಿ’ಯಂತಹ ಹಿಟ್ ಸಿನಿಮಾಗಳನ್ನು ನೀಡಿದವರು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali). ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ( ‘Love and War’) ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾ ಹಿಂದಿಯ ಹಿಟ್ ಸಿನಿಮಾವಾದ ʻಸಂಗಮ್ʼ ಕಥೆಯಿಂದ ಸ್ಫೂರ್ತಿ ಪಡೆದಿದೆ ಎಂದು ವರದಿಯಾಗಿದೆ. 1964ರ ಈ ʻಸಂಗಮ್ʼ ( film Sangam) ಚಲನಚಿತ್ರದಲ್ಲಿ ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ನಟಿಸಿದ್ದರು. ಈಗ ಈ ‘ಲವ್ ಆ್ಯಂಡ್ ವಾರ್’ ನಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟಿಸಲಿದ್ದಾರೆ.
ಈ ‘ಲವ್ ಆ್ಯಂಡ್ ವಾರ್’ ಸಿನಿಮಾ ʻಸಂಗಮ್ʼ ರಿಮೇಕ್ ಎಂದು ಬಹಳ ಹಿಂದೆಯೇ ವರದಿಯಾಗಿತ್ತು. ಆರಂಭದಲ್ಲಿ, ಧರ್ಮ ಪ್ರೊಡಕ್ಷನ್ಸ್ ಈ ಸಿನಿಮಾ ಮಾಡಲು ಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಬನ್ಸಾಲಿಯವರ ‘ಲವ್ ಆ್ಯಂಡ್ ವಾರ್’ ಸಿನಿಮಾ ಒಂದು ತ್ರಿಕೋನ ಪ್ರೇಮ ಕಥೆಯಾಗಿದೆ ಎಂದು ವರದಿಯಾಗಿದೆ. ಮಾತ್ರವಲ್ಲ 1964ರ ಚಲನಚಿತ್ರ ʻಸಂಗಮ್ʼ ಸಿನಿಮಾದಿಂದ ಸ್ಫೂರ್ತಿ ಪಡೆದ ‘ಲವ್ ಆ್ಯಂಡ್ ವಾರ್’ ಆಧುನಿಕ ಕಾಲದ ಚಿತ್ರಕಥೆ ಹೊಂದಿರಲಿದೆ ಎಂದು ವರದಿಯಾಗಿದೆ.
ಈ ಚಿತ್ರಕ್ಕಾಗಿ ರಣಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ʻಸಂಗಮ್ʼ ಪಾತ್ರ ನಿಭಾಯಿಸಲಿದ್ದಾರಂತೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಷಯ ದೃಢಪಟ್ಟಿಲ್ಲದಿದ್ದರೂ 2024ರ ದ್ವಿತೀಯಾರ್ಧದಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.