Site icon Vistara News

Naa Saami Ranga: ನಾಗಾರ್ಜುನ- ಆಶಿಕಾ ನಟನೆಯ ‘ನಾ ಸಾಮಿ ರಂಗ’ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌!

Naa Saami Ranga shika ranganath OTT release date Fix

ಬೆಂಗಳೂರು: ಕನ್ನಡದ ನಟಿ ಆಶಿಕಾ ರಂಗನಾಥ್ (Naa Saami Ranga) ನಟಿಸಿದ ಮೊದಲ ಸಿನಿಮಾ ‘ಅಮಿಗೋಸ್’ ಥಿಯೇಟರ್‌ನಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಆದರೆ, ನಾಗಾರ್ಜುನ ಸಿನಿಮಾ ‘ನಾ ಸಾಮಿ ರಂಗ’ ಥಿಯೇಟರ್‌ನಲ್ಲಿ ಹಿಟ್‌ ಕಂಡು ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಮಹೇಶ್ ಬಾಬು ಸಿನಿಮಾ ‘ಗುಂಟೂರು ಖಾರಂ’, ವಿಕ್ಟರಿ ವೆಂಕಟೇಶ್ ಸಿನಿಮಾ ‘ಸೈಂದವ್’, ನಾಗಾರ್ಜುನ ಸಿನಿಮಾ ‘ನಾ ಸಾಮಿ ರಂಗ’ ಈ ಸಿನಿಮಾ ಜತೆಗೆ ರಿಲೀಸ್ ಆಗಿದ್ದವು.

ಆಶಿಕಾ ರಂಗನಾಥ್ ನಟಿಸಿದ ಮೊದಲ ತೆಲಗು ಸಿನಿಮಾ ‘ಅಮಿಗೋಸ್’ ಥಿಯೇಟರ್‌ನಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಇದಾದ ಬಳಿಕ ‘ನಾ ಸಾಮಿ ರಂಗ’ ಸಿನಿಮಾದಲ್ಲಿ ಹಿಟ್‌ ಕಂಡೇ ಕಾಣುತ್ತಾರೆ ಎನ್ನಲಾಗಿತ್ತು. ಇಷ್ಟು ದಿನ ಈ ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡಿತ್ತು. ಅದೀಗ ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.

ನೃತ್ಯ ನಿರ್ದೇಶಕ ವಿಜಯ್ ಬಿನ್ನಿ ‘ನಾ ಸಾಮಿ ರಂಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿಯೇ ನಾಗಾರ್ಜುನಗೆ ಆಕ್ಷನ್ ಕಟ್ ಹೇಳಿದ್ದಾರೆ.ಥಿಯೇಟರ್‌ನಲ್ಲಿ ಉತ್ತರ ಪ್ರತಿಕ್ರಿಯೆ ಸಿಕ್ಕ ಬಳಿಕ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು ಅಂದ್ರೆ, ಫೆಬ್ರವರಿ 17ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಲ್ಲರಿ ನರೇಶ್, ರಾಜ್ ತರುಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್‌ನಲ್ಲಿ ಶ್ರೀನಿವಾಸ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ, ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ.

ಇದನ್ನೂ ಓದಿ: Boycott Maldives: ಮಾಲ್ಡೀವ್ಸ್‌ ಪ್ರವಾಸ ರದ್ದು ಪಡಿಸಿದ ಜನಪ್ರಿಯ ನಟ; ಲಕ್ಷದ್ವೀಪದತ್ತ ಹೊರಡಲು ಚಿಂತನೆ

ಇನ್ನು ಆಶಿಕಾ ಅವರು ಬಿಗ್‌ ಬಾಸ್‌ ತೆಲುಗು ವೇದಿಕೆಯಲ್ಲಿ ಸಿನಿ ಪ್ರಚಾರಕ್ಕೆಂದು ಬಂದಿದ್ದರು. ‘ಬಿಗ್ ಬಾಸ್’ ವೇದಿಕೆ ಮೇಲೆ ಆಶಿಕಾ ರಂಗನಾಥ್ ಅವರನ್ನು ಕಂಡ ಸ್ಪರ್ಧಿಗಳು ಖುಷಿಯಾದರು. ನಾಗಾರ್ಜುನ ಅವರು, ‘ನಮ್ಮ ನಾಯಕಿಗೆ ಎಷ್ಟು ಮಾರ್ಕ್ಸ್ ಕೊಡುತ್ತೀರಿ’ ಎಂದು ಸ್ಪರ್ಧಿ ಅಮರ್‌ಗೆ ಕೇಳಿದ್ದರು. ಅದಕ್ಕೆ ಅವರು, ‘100ಕ್ಕೆ 1000 ಮಾರ್ಕ್ಸ್‌ ಕೊಡುತ್ತೇನೆ ಸರ್‌’ ಎಂದು ಹೇಳಿದ್ದರು. ಮತ್ತೆಲ್ಲ ಸ್ಪರ್ಧಿಗಳು ಆಶಿಕಾ ಅವರನ್ನು ಕಂಡು ಹಾಡಿ ಹೊಗಳಿದ್ದರು. ಒಬ್ಬ ಸ್ಪರ್ಧಿ ʻʻಆಶಿಕಾ ಅವರು ನೋಡಲು ತೆಲುಗು ಹುಡುಗಿ ತರ ಇದ್ದಾರೆʼʼಎಂದಿದ್ದರು.

Exit mobile version