ಬೆಂಗಳೂರು: ತೆಲುಗು ಸೂಪರ್ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಇಂದು ಜನುಮದಿನದ ಸಂಭ್ರಮ. ಹೀಗಾಗಿ ಅನೇಕ ಸಿನಿ ಗಣ್ಯರು ಸೇರಿದಂತೆ ಅವರ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಇದೀಗ ಬೊಯಾಪಾಟಿ ಶ್ರೀನು ಅವರ ನಾಲ್ಕನೇ ಚಿತ್ರಕ್ಕಾಗಿ ಮತ್ತೆ ನಂದಮೂರಿ ಬಾಲಕೃಷ್ಣ ಒಂದಾಗಿದ್ದಾರೆ. 64ನೇ ವಸಂತಕ್ಕೆ ಕಾಲಿಟ್ಟ ಬಾಲಯ್ಯ ಇದೀಗ ‘BB4’ ಸಿನಿಮಾ ಅನೌನ್ಸ್ ಮಾಡಿದ್ದಾರೆ. BB4ಎಂದು ತಾತ್ಕಲಿಕವಾಗಿ ಶಿರ್ಷಿಕೆ ಇಡಲಾಗಿದೆ.
‘ಸಿಂಹ’, ‘ಲೆಜೆಂಡ್’ ಮತ್ತು ‘ಅಖಂಡ’ ನಂತರ ನಾಲ್ಕನೇ ಬಾರಿಗೆ ಬಾಲಕೃಷ್ಣ ಮತ್ತು ಬೊಯಾಪಾಟಿ ಶ್ರೀನು ಕೈ ಜೋಡಿಸಿದ್ದಾರೆ. ʻʻ’ಗಾಡ್ ಆಫ್ ಮಾಸಸ್’ ನಂದಮೂರಿ ಬಾಲಕೃಷ್ಣ ಮತ್ತು ಬೊಯಾಪಾಟಿ ಶ್ರೀನು BB4ಗಾಗಿ ಮತ್ತೆ ಒಂದಾಗುತ್ತಾರೆ. ಜನ್ಮದಿನದ ಶುಭಾಶಯಗಳು, ಬಾಲಯ್ಯ ಬಾಬುʼʼಎಂದು ಪೋಸ್ಟರ್ ಹಂಚಿಕೊಂಡಿದೆ. ನಂದಮೂರಿ ಬಾಲಕೃಷ್ಣ ಅವರ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದು ಒಂದಾಗಲಿದೆ ಎಂದು ಹೇಳಲಾಗಿದೆ. ಬಾಲಕೃಷ್ಣ ಅವರು ‘ಭಗವಂತ ಕೇಸರಿ’ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಸಹ-ನಟಿಯಾಗಿ ನಟಿಸಿದ್ದರು.
ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತಾ ಅವರು 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಇದನ್ನೂ ಓದಿ: Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!
ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಿದ್ದಾರೆ. ತಂದೆ ಎನ್ಟಿಆರ್ ಹಾದಿಯಲ್ಲೇ ನಟ ಬಾಲಯ್ಯ ಚಿತ್ರರಂಗಕ್ಕೆ ಬಂದರು. ತಂದೆ ರಾಜಕೀಯರಂಗ ಪ್ರವೇಶಿಸಿ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಬಾಲಯ್ಯ- ಚಂದ್ರಬಾಬು ಬೀಗರು ಸಹ ಆಗಿದ್ದಾರೆ. ಚಂದ್ರಬಾಬು ನಾಯ್ಡು ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.