ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಇತ್ತೀಚೆಗೆ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟಿ ಅಂಜಲಿಯನ್ನು (Actress Anjali ) ವೇದಿಕೆಯಲ್ಲಿಯೇ ತಳ್ಳಿದ್ದಾರೆ. ‘ಗ್ಯಾಂಗ್ಸ್ ಆಫ್ ಗೋದಾವರಿ’ ಯ ಪ್ರೀ-ರಿಲೀಸ್ ಸಮಾರಂಭದಲ್ಲಿ (Vishwak Sen and Neha Shetty) ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಇದೀಗ ಬಾಲಯ್ಯ ಅವರ ವರ್ತನೆಗೆ ನೆಟ್ಟಿಗರು ಛಿಮಾರಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ವೇದಿಕೆ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯ ಸೇವಿಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಮದ್ಯ ಸೇವಿಸಿ ಬಾಲಕೃಷ್ಣ ವೇದಿಕೆಯಲ್ಲಿ ನಟಿ ಅಂಜಲಿ ಜತೆ ಆ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಇದೇ ವಿಚಾರ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಬಾಟಲ್‌ನ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಡಿಯೊದಲ್ಲಿ ಏನಿದೆ?
ವೈರಲ್ ಆದ ವಿಡಿಯೊದಲ್ಲಿ ನಂದಮೂರಿ ಕೃಷ್ಣ ಅವರು ಚೈತನ್ಯ ಅವರ ಮುಂಬರುವ ತೆಲುಗು ಆಕ್ಷನ್ ಚಿತ್ರ ಗ್ಯಾಂಗ್ಸ್ ಆಫ್ ಗೋದಾವರಿಯ ಪ್ರಚಾರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಬಿಳಿ ಶೆರ್ವಾನಿ ಧರಿಸಿದ್ದರು. ವೇದಿಕೆಯ ಮೇಲೆ ನೇಹಾ ಶೆಟ್ಟಿ ಮತ್ತು ಅಂಜಲಿ ಅಕ್ಕ ಪಕ್ಕ ನಿಂತಿದ್ದರು. ನೇಹಾ ಅವರಿಗೆ ನಯವಾಗಿ ಪಕ್ಕಕ್ಕೆ ಸರಿಯಲು ಕೇಳುತ್ತಾರೆ. ಕೆಲವು ಕ್ಷಣಗಳ ನಂತರ, ಬಾಲಯ್ಯ ಅವರು ಅಂಜಲಿಯನ್ನು ದೂರ ತಳ್ಳುತ್ತಾರೆ, ಬಹುತೇಕ ನಟಿ ಬಿದ್ದೇ ಬಿಡುವಂತಿದ್ದರು. ಆಗ ನೇಹಾ ಅವರು ಅಂಜಲಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ನಟಿಯರು ತಮಾಷೆಯಾಗಿ ಬಾಲಯ್ಯ ನೋಡಿ ನಕ್ಕಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಾಲಯ್ಯ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಬರುತ್ತಿವೆ.
ಇದನ್ನೂ ಓದಿ: Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
ಕಾರ್ಯಕ್ರಮದ ನಡುವೆ ಕೂಡ ಬಾಲಕೃಷ್ಣ ಮಧ್ಯ ಸೇವಿಸಿದ್ದಾರೆ. ಕುಡಿದು ವೇದಿಕೆ ಏರಿ ನಟಿ ಅಂಜಲಿ ಜತೆ ಈ ರೀತಿ ವರ್ತಿಸಿದ್ದಾರೆ ಎಂದು ಕೆಲವರು ಎರಡೂ ವೀಡಿಯೊಗಳನ್ನು ವೈರಲ್ ಮಾಡುತ್ತಿದ್ದಾರೆ. ಇನ್ನು ಬಾಲಯ್ಯ ವೇದಿಕೆಯಲ್ಲಿ ಬೇಕಾ ಬಿಟ್ಟಿ ಡೈಲಾಗ್‌ಗಳನ್ನು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
“ಈ ವ್ಯಕ್ತಿ ಸೂಪರ್‌ಸ್ಟಾರ್, ಯಶಸ್ವಿ ರಾಜಕಾರಣಿ ಮತ್ತು ಸಹನಟಿಯನ್ನು ತಳ್ಳಿರುವುದು ಸರಿಯಲ್ಲʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ, ʻʻಆ ನಟಿ 50 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಿಟ್ ಕಂಡಿದೆ. ಆದರೆ ನಟ ಈ ರೀತಿ ವರ್ತಿಸಿದ್ದು ಸರಿಯಲ್ಲʼʼಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಬಾಲಕೃಷ್ಣ ಅವರು ಮಗ ಮೋಕ್ಷಜ್ಞ ಕುರಿತಾಗಿ ಮಾತನಾಡಿದರು. ನಟ ಮಾತನಾಡಿ “ನನ್ನ ಮಗ ನನ್ನಿಂದ ಸ್ಫೂರ್ತಿ ಪಡೆಯಬೇಕೆಂದು ನಾನು ಬಯಸುವುದಿಲ್ಲ. ಆದರೂ ನನ್ನ ಅಭಿಮಾನಿಗಳು ನನ್ನ ನಿರ್ಧಾರದಿಂದ ಅಸಮಾಧಾನಗೊಳ್ಳುತ್ತಾರೆ. ಮೋಕ್ಷಜ್ಞ ಶೀಘ್ರದಲ್ಲೇ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾನೆ. ಇದು ಬಹುನಿರೀಕ್ಷಿತ ಚಿತ್ರವಾಗಲಿದೆ. ನಾನು ಅವನ ಹಿಂದೆ ಸದಾ ಇರುತ್ತೇನೆʼʼಎಂದರು.
“ನನ್ನ ಮಗ ಹೊಸ ತಲೆಮಾರಿ ನಟರ ಜತೆ ಕಾಂಪೀಟ್ ಮಾಡಬೇಕು ಎಂದು ಬಯಸುತ್ತೇನೆ. ಯುವ ನಾಯಕರಾದ ಸಿದ್ದು ಜೊನ್ನಲಗಡ್ಡ ಮತ್ತು ಅಡಿವಿ ಶೇಷ್‌ರನ್ನು ಕಣಕ್ಕಿಳಿಸಿ ಅವರಿಗೆ ಕಠಿಣ ಹೋರಾಟ ನೀಡಬಲ್ಲೆ ಎಂದು ಬಾಲಕೃಷ್ಣ ಹೇಳಿಕೊಂಡಿದ್ದಾರೆ.
ಬಾಲಕೃಷ್ಣ ‘ಅಖಂಡ’ ಮತ್ತು ‘ವೀರಸಿಂಹ ರೆಡ್ಡಿ’ಯಂತಹ ಹಿಟ್ ಸಿನಿಮಾಗಳಿಂದ ಸುದ್ದಿ ಮಾಡುತ್ತಿದ್ದಾರೆ. ‘ಅಖಂಡ 2’ ಗಾಗಿ ನಿರ್ದೇಶಕ ಬೋಯಪತಿ ಶ್ರೀನು ಅವರೊಂದಿಗೆ ಕೈಜೋಡಿಸಲು ಯೋಜಿಸುತ್ತಿದ್ದಾರೆ.