Site icon Vistara News

Niharika Konidela: ತೆಲುಗು ಚಿತ್ರರಂಗ ನನ್ನ ಅಪ್ಪನ ಆಸ್ತಿ ಅಲ್ಲ ಎಂದ ನಟ ಚಿರಂಜೀವಿ ಸಹೋದರ ನಾಗಬಾಬು!

Niharika Konidela Nagendra Babu says Industry Is Not Our Father's Property

ಆಗಸ್ಟ್ 9 ರಂದು ಬಿಡುಗಡೆಯಾಗಲಿರುವ ನಿಹಾರಿಕಾ ಕೊನಿಡೇಲಾ (Niharika Konidela ) ಅವರ “ಕಮಿಟಿ ಕುರ್ರೊಲ್ಲು” (Committee Kurrollu) ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಪ್ರಚಾರಗಳು ಪ್ರೇಕ್ಷಕರನ್ನು ಆಕರ್ಷಿಸಿವೆ. ಹಾಡುಗಳು ಟೀಸರ್ ಮತ್ತು ಟ್ರೇಲರ್ ಸಿನಿರಸಿಕರ ಮನ ಮುಟ್ಟಿದೆ. ಇತ್ತೀಚೆಗೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆಯಿತು. ನಿಹಾರಿಕಾ ಅವರ ತಂದೆ, ಮೆಗಾ ಬ್ರದರ್ ನಾಗಬಾಬು, ಅವರ ಸಹೋದರ ಮೆಗಾ ಪ್ರಿನ್ಸ್ ವರುಣ್ ತೇಜ್ ಮತ್ತು ಅವರ ಸೋದರಸಂಬಂಧಿ ಸಾಯಿ ದುರ್ಗಾ ತೇಜ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ, ಚಿತ್ರದ ಸ್ಟಾರ್ ಪವರ್ ಅನ್ನು ಹೆಚ್ಚಿಸಿದ್ದರು. ಈ ವೇಳೆ ‘ತೆಲುಗು ಚಿತ್ರರಂಗ ಎಂಬುದು ನನ್ನ ಅಪ್ಪನ, ನನ್ನ ತಾತನ ಅಥವಾ ನಮ್ಮ ಕುಟುಂಬ ಆಸ್ತಿಯಲ್ಲ. ಕಷ್ಟ ಪಟ್ಟು ಕೆಲಸ ಮಾಡುವ ಎಲ್ಲರ ಆಸ್ತಿ’ ಎಂದಿದ್ದಾರೆ ನಾಗಬಾಬು.

ಮೆಗಾ ಫ್ಯಾಮಿಲಿ ತೆಲುಗು ಚಿತ್ರರಂಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಇತರೆ ಹೀರೋಗಳು ಮೆಗಾ ಫ್ಯಾಮಿಲಿಯ ಬೆದರಿಕೆಗೆ ಹೆದರಿದ್ದಾರೆ ಎಂದೆಲ್ಲ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಮಾಜಿ ಸಚಿವೆ ರೋಜಾ ಬಹಿರಂಗವಾಗಿ ಮೆಗಾ ಫ್ಯಾಮಿಲಿಯನ್ನು ರೌಡಿ ಫ್ಯಾಮಿಲಿ ಎಂದು ಸಂಭೋಧಿಸಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಮೆಗಾ ಫ್ಯಾಮಿಲಿಯ ಕುಟುಂಬದ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಮಂದಿ ಹೀರೋಗಳೇ ಇದ್ದಾರೆ. ಆದರೆ ಇತ್ತೀಚೆಗೆ ಮೆಗಾ ಫ್ಯಾಮಿಲಿ ಮೇಲೆ ಕೆಲವರು ಆರೋಪ ಮಾಡಿದ್ದಾರೆ.

ಇದೀಗ ನಾಗಬಾಬು ಹೊಸ ಹುಡುಗರ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ; Akshay Kumar: ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಹೊಸ ಟಚ್‌ ಕೊಟ್ಟ ʻಹೇ ಬೇಬಿʼ ಖ್ಯಾತಿಯ ರಿತೇಶ್, ಫರ್ದೀನ್ ಖಾನ್; ವಿಡಿಯೊ ವೈರಲ್‌!

ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವು ಸೋಮವಾರ ಪಿಠಾಪುರಂ ಕ್ಷೇತ್ರದಲ್ಲಿ ನಡೆದಿದ್ದು, ಕಮಿಟಿ ಕುರೋಲ್ಲು ತಂಡದ ಕಲಾವಿದರು ಮತ್ತು ಸಿಬ್ಬಂದಿ ಹಾಜರಿದ್ದರು. ನಿರ್ಮಾಪಕಿಯಾಗಿರುವ ಮಗಳ ಬಗ್ಗೆ ನಟ ನಾಗಬಾಬು ಶ್ಲಾಘಿಸಿದರು. ಹೀಗೆ ನಟ ಮಾತನ್ನು ಮುಂದುವರಿಸುವಾಗ ತೆಲುಗು ಸಿನಿ ಉದ್ಯಮ ಯಾರಿಗೂ ಸೇರಿಲ್ಲ ಮತ್ತು ಯಾವುದೇ ಪ್ರತಿಭಾವಂತ ವ್ಯಕ್ತಿ ಇಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು.

ʻʻಈ ಉದ್ಯಮ ನನ್ನ ಅಪ್ಪನ ಆಸ್ತಿಯಲ್ಲ. ಪ್ರತಿಭೆ ಇದ್ದರೆ ಯಾರು ಬೇಕಾದರೂ ಬರಬಹುದು ಎಂದರು. ಅಷ್ಟೆ ಅಲ್ಲ, ತೆಲುಗು ಚಿತ್ರರಂಗ ಎಂಬುದು ಮೆಗಾ ಕುಟುಂಬ, ನಂದಮೂರಿ ಕುಟುಂಬ, ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ಆಸ್ತಿಯಲ್ಲ. ಕಷ್ಟ ಪಟ್ಟು ಕೆಲಸ ಮಾಡುವ ಎಲ್ಲರ ಆಸ್ತಿ’ ಎಂದಿದ್ದಾರೆ.

ಯದು ವಂಶಿ ನಿರ್ದೇಶನದಲ್ಲಿ ಚಿತ್ರ ತಯಾರಾಗುತ್ತಿದ್ದು, ಅವರೇ ಕಥೆಯನ್ನೂ ಬರೆದಿದ್ದಾರೆ. ಸಾಯಿಕುಮಾರ್, ಗೋಪರಾಜು ರಮಣ, ಶರಣ್ಯ ಸುರೇಶ್, ಶ್ರೀ ಲಕ್ಷ್ಮಿ, ಟೀನಾ ಶ್ರಾವ್ಯ, ಪ್ರಸಾದ್ ಬೆಹ್ರಾ, ಕೋಟ ಜಯರಾಮ್, ಕಿಟ್ಟಯ್ಯ, ಈಶ್ವರ್ ರಾಚಿರಾಜು, ವಿಶಿಕಾ ಸೇರಿದಂತೆ ಹಲವರು ಇದ್ದಾರೆ. ಇದನ್ನು ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಜಯಲಕ್ಷ್ಮಿ ಅಡಪಾಕ, ನಿಹಾರಿಕಾ ಕೊನಿಡೇಲ, ಪದ್ಮಜಾ ಕೊನಿಡೇಲ ಮತ್ತು ರಮೇಶ್ ಮಾನ್ಯಂ ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಅನುದೀಪ್ ದೇವ್ ಸಂಗೀತ ನೀಡಿದ್ದು, ಎದುರೋಳು ರಾಜು ಅವರ ಛಾಯಾಗ್ರಹಣ ಮತ್ತು ಅನ್ವರ್ ಅಲಿ ಸಂಕಲನ ಮಾಡಿದ್ದಾರೆ. ಚಿತ್ರವು ಆಗಸ್ಟ್ 9 ರಂದು ಬಿಡುಗಡೆಯಾಗುತ್ತಿದೆ. ವರದಿಗಳ ಪ್ರಕಾರ ನಾಗಬಾಬು ಅವರು ತಮ್ಮ ಮಗಳು ನಿಹಾರಿಕಾ ಅವರ ಒತ್ತಾಯದ ಮೇರೆಗೆ ʻಕಮಿಟಿ ಕುರೋಲ್ಲುʼ ಕಥೆಯನ್ನು ಕೇಳಿದ್ದಾರೆ ಮತ್ತು ಅದನ್ನು ಇಷ್ಟಪಟ್ಟಿದ್ದಾರೆ.

Exit mobile version