Site icon Vistara News

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

Pawan Kalyan Hari Hara Veera Mallu Part 1 teaser Out

ಬೆಂಗಳೂರು: ಜನ ಸೇನಾ ಪಕ್ಷದ (Jana Sena Party) ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಈ ವರ್ಷ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Andhra Pradesh assembly election) ಪೀಠಂಪುರಂ ಕ್ಷೇತ್ರದಿಂದ (Anushka Shetty) ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ಪವನ್ ಕಲ್ಯಾಣ್ ನಟನೆಯ ಹರಿ ʻಹರ ವೀರ ಮಲ್ಲು ಭಾಗ 1ʼ (Hari Hara Veera Mallu)ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಟೀಸರ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. ಟೀಸರ್‌ನಲ್ಲಿ ಮಗಳು ತಂದೆಯ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ಪ್ರಶ್ನೆ ಇಡುತ್ತಾಳೆ. ಆಗ ತಂದೆ ʻʻಪ್ರತಿಯೊಬ್ಬನನ್ನು ಅವನ ಮೇಲಿರೋನು ದೋಚಿಕೊಳ್ಳುತ್ತಾನೆ. ನಮ್ಮನ್ನು ದೊರೆ ದೋಚಿಕೊಳ್ಳುತ್ತಾನೆ. ದೊರೆಯನ್ನು ಗೋಲ್ಕುಂಡ ನವಾಬ್‌ ದೋಚಿಕೊಳ್ಳುತ್ತಾನೆ. ಅವನಲ್ಲಿ ಇರುವುದನ್ನು ಮೋಘಲ್‌ ಚಕ್ರವರ್ತಿ ದೋಚಿಕೊಳ್ಳುತ್ತಾನೆ. ನಮ್ಮ ಮೇಲೆ ಇರುವ ಈ ಕಳ್ಳರನ್ನು ದೋಚಿಕೊಳ್ಳೋದಕ್ಕೆ ಭಗವಂತ ಖಂಡಿತ ಒಬ್ಬನನ್ನು ಕಳಿಸಿಕೊಡುತ್ತಾನೆʼʼ ಎಂದಾಗ ಪವನ್‌ ಎಂಟ್ರಿ ಆಗುತ್ತಾರೆ. ಹಾಗೇ ಮೋಘಲ್‌ ಚಕ್ರವರ್ತಿ ಆಗಿ ಬಾಬಿ ಡಿಯೋಲ್‌ ಕಂಡಿದ್ದಾರೆ.

ಪವನ್ ಕಲ್ಯಾಣ್ ಕತ್ತಿ ಹಿಡಿದು ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ನಟ ಕೆಂಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಟೀಸರ್‌ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿದೆ.

ಇದನ್ನೂ ಓದಿ: Pawan Kalyan: ಎನ್‌ಡಿಎ ತೊರೆಯಲ್ಲ! ಉಲ್ಟಾ ಹೊಡೆದ ನಟ, ಜನಸೇನಾ ನಾಯಕ ಪವನ್ ಕಲ್ಯಾಣ್

ಮೆಗಾ ಸೂರ್ಯ ಫಿಲ್ಮ್ ಅಡಿಯಲ್ಲಿ ಎ ದಯಾಕರ್ ರಾವ್ ಚಿತ್ರವನ್ನು ನಿರ್ಮಿಸುತ್ತಿದ್ದರೆ, ಎಎಮ್ ರತ್ನಂ ಅವರು ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರ ಹಾಡುಗಳು ಮತ್ತು ಸಂಗೀತ ಸಂಯೋಜನೆ ಚಿತ್ರಕ್ಕಿದೆ. ನಿಧಿ ಅಗರ್ವಾಲ್, ಎಂ. ನಾಸರ್, ಸುನಿಲ್, ರಘುಬಾಬು, ಸುಬ್ಬರಾಜು, ಮತ್ತು ನೋರಾ ಫತೇಹಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಹಿಂದೆ ಪವನ್ ಕಲ್ಯಾಣ್ ರಾಜಕೀಯದತ್ತ ಗಮನಹರಿಸುತ್ತಿರುವುದರಿಂದ ಸಿನಿಮಾ ಇನ್ನು ಮುಂದೆ ಮಾಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಕ್ರಿಶ್‌ ಜಾಗರ್ಲಮುಡಿ ಅವರ ನಿರ್ದೇಶನ ಈ ಸಿನಿಮಾಕ್ಕಿದೆ.

ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಡುವ ʻಹರಿ ಹರ ವೀರ ಮಲ್ಲುʼ ಆಗಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ‘ಧರ್ಮಕ್ಕಾಗಿ ಯುದ್ಧ’ ಎನ್ನುವ ಕ್ಯಾಪ್ಶನ್ ಗಮನ ಸೆಳೆದಿದೆ.

ಸದ್ಯ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ʻತೆಲುಗು ದೇಶಂʼ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರ ಮತ್ತು ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ಪವನ್‌ ಕಲ್ಯಾಣ್ ಅವರ ಜನಸೇನಾ ಪಕ್ಷವು ಒಟ್ಟು 175 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಟಿಡಿಪಿ 144 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಕಡೆ ಸ್ಪರ್ಧಿಸಲಿದೆ. ಟಿಡಿಪಿ 17 ಕ್ಷೇತ್ರ ಮತ್ತು ಜನಸೇನಾ ಪಕ್ಷವು 2 ಕಡೆ ಕಣಕ್ಕಿಳಿಯಲಿದೆ.

Exit mobile version