Site icon Vistara News

Pawan Kalyan: ಮರು ಬಿಡುಗಡೆಯಾಗುತ್ತಿದೆ ಪವನ್ ಕಲ್ಯಾಣ್ ಹಳೆಯ ಸಿನಿಮಾ..!

Pawan Kalyan Thammudu Re release

ಬೆಂಗಳೂರು: ಪವನ್ ಕಲ್ಯಾಣ್ (Pawan Kalyan) ಅಭಿನಯದ ‘ತಮ್ಮುಡು’ (Pawan Kalyan Thammudu) ಚಿತ್ರ 25 ವರ್ಷಗಳ ನಂತರ ಮರು-ಬಿಡುಗಡೆಯಾಗುತ್ತಿದೆ. ಪಿಎ ಅರುಣ್ ಪ್ರಸಾದ್ ಬರೆದು ನಿರ್ದೇಶಿಸಿದ ಈ ಚಿತ್ರ 1999 ರಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್‌ ಹಿಟ್‌ ಕಂಡಿತ್ತು. ಇದೀಗ ಸಿನಿಮಾ ಜೂನ್ 15ರಂದು ಮತ್ತೊಮ್ಮೆ ಥಿಯೇಟರ್‌ಗಳಲ್ಲಿ ರಿ ರಿಲೀಸ್‌ ಆಗುತ್ತಿದೆ. ಚಿತ್ರದಲ್ಲಿ ಪ್ರೀತಿ ಜಾಂಗಿಯಾನಿ ಮತ್ತು ಅದಿತಿ ಗೋವಿತ್ರಿಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಿಡಿಪಿ, ಬಿಜೆಪಿ ಜೊತೆ ಸೇರಿಕೊಂಡು ಆಂಧ್ರದ ಆಡಳಿತ ಪಕ್ಷವಾದ ವೈಸಿಪಿಯನ್ನು ಸೋಲಿಸಿ ಜಗನ್ ಅನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಇದರ ನಡುವೆ ಇದೀಗ ಪವನ್​ ಕಲ್ಯಾಣ್‌ ಅವರ ಹಳೆಯ ಸಿನಿಮಾ ಒಂದು ಮರುಬಿಡುಗಡೆಗೆ ಮಾಡಲಾಗುತ್ತಿದೆ. ಈ ವರ್ಷ ಜೂನ್ 9 ಕ್ಕೆ ಸಿನಿಮಾ ಬಿಡುಗಡೆ ಆಗಿ 25 ವರ್ಷ ಪೂರ್ಣಗೊಳಿಸುತ್ತಿರುವ ಕಾರಣ, ಇದೀಗ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಚುನಾವಣೆ ಬಳಿಕ ಪವನ್​ರ ಜನಪ್ರಿಯತೆ ದುಪ್ಪಟ್ಟಾಗಿದ್ದು, ‘ತಮ್ಮುಡು’ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಭರ್ಜರಿ ಕಲೆಕ್ಷನ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಸಿನಿಮಾ ಆಮೀರ್ ಖಾನ್ ಅವರ ‘ಜೋ ಜೀತಾ ವೋಹಿ ಸಿಕಂದರ್’ ಸಿನಿಮಾ ರಿಮೇಕ್‌ ಆಗಿದೆ. ನಂತರ ತಮಿಳು (ಬದ್ರಿ) ಮತ್ತು ಕನ್ನಡ (ಯುವರಾಜ) ಗೆ ರೀಮೇಕ್ ಮಾಡಲಾಯಿತು. ತಮಿಳಿನಲ್ಲಿ ದಳಪತಿ ವಿಜಯ್ ಮತ್ತು ಕನ್ನಡದಲ್ಲಿ ಶಿವ ರಾಜ್‌ಕುಮಾರ್ ನಟಿಸಿದ್ದಾರೆ. ಈ ಹಿಂದೆ ಪವನ್​ರ ‘ಜಲ್ಸ’, ‘ಗಬ್ಬರ್ ಸಿಂಗ್’, ‘ತೊಲಿ ಪ್ರೇಮ’ ಇನ್ನೂ ಕೆಲವು ಸಿನಿಮಾಗಳು ಮರು ಬಿಡುಗಡೆ ಆಗಿ ಒಳ್ಳೆಯ ಕಲೆಕ್ಷನ್ ಮಾಡಿದ್ದವು. ಕನ್ನಡದಲ್ಲಿ ‘ಯುವರಾಜ’ ಹೆಸರಿನಲ್ಲಿ ಶಿವರಾಜ್ ಕುಮಾರ್ ಸಹ ರೀಮೇಕ್ ಮಾಡಿದ್ದರು. ಆ ಸಿನಿಮಾ ಸಹ ಸೂಪರ್ ಹಿಟ್ ಎನಿಸಿಕೊಂಡಿತ್ತು.

ಆ ನಂತರ 2003ರಲ್ಲಿ ಚಾಂಪಿಯನ್ ಹೆಸರಿನಲ್ಲಿ ಬೆಂಗಾಲಿ ಭಾಷೆಗೆ ಕೂಡ ರಿಮೇಕ್ ಆಗಿತ್ತು ಈ ಸಿನಿಮಾ.ಉಳಿದಂತೆ ‘ಎನ್​ಡಿಎ’ದ ಪ್ರಮುಖ ಭಾಗ ಆಗಿರುವ ಪವನ್ ಕಲ್ಯಾಣ್ ಅವರಿಗೆ ಆಂಧ್ರ ಸರ್ಕಾರದಲ್ಲಿ ಪ್ರಮುಖ ಖಾತೆಯೂ ದೊರೆಯಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Pawan Kalyan: ಪವನ್ ಕಲ್ಯಾಣ್ ಗಾಳಿಯಲ್ಲ ಬಿರುಗಾಳಿ ಎಂದ ಮೋದಿ! ಮೋದಿ ಇರುವವರೆಗೆ ದೇಶ ತಲೆಬಾಗುವುದಿಲ್ಲ ಎಂದ ಪವನ್‌!

ಪವನ್ ನಟಿಸಿರುವ ‘ಓಜಿ’, ‘ಹರಿಹರ ವೀರಮಲ್ಲು’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಬಿಡುಗಡೆಗೆ ರೆಡಿಯಿದೆ. ಈ ಸಿನಿಮಾಗಳು ಬಿಡುಗಡೆ ದಿನಾಂಕ ಮುಂದಿನ ದಿನಗಳಲ್ಲಿ ಘೋಷಣೆ ಆಗಲಿದೆ.

Exit mobile version