ಬೆಂಗಳೂರು: ಪೋಸಾನಿ ಕೃಷ್ಣ ಮುರಳಿ (Posani Krishna Murali) ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಹಾಸ್ಯ ನಟನಾಗಿ, ವಿಲನ್ ಆಗಿ ಗಮನ ಸೆಳೆದಿದ್ದರು. ಚಲನಚಿತ್ರ ನಿರ್ಮಾಪಕರೂ ಆಗಿದ್ದು, ಕೆಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇದೇ ವೇಳೆ ಪೋಸಾನಿ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಕೆಟ್ಟ ಹೆಸರು ಬಂತು. ಆರಂಭದಲ್ಲಿ ʻಪ್ರಜಾರಾಜ್ಯಂʼ ಪಕ್ಷ ಸೇರಿ ಚುನಾವಣೆಯಲ್ಲಿ ಸೋತಿದ್ದರು. ನಂತರ ಅವರು ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಸೇರಿದರು. ಈಗ ನಾರಾ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಅಧಿಕಾರಕ್ಕೆ ಬಂದಿದ್ದು ಪೋಸಾನಿ ಕೃಷ್ಣ ವೃತ್ತಿ ಜೀವನ ಕೊನೆ ಆಗಲಿದೆ ಎನ್ನಲಾಗುತ್ತಿದೆ.
ಪೋಸಾನಿ ವೈಎಸ್‌ಆರ್‌ಸಿಪಿಗೆ ಕಾಲಿಟ್ಟಾಗಿನಿಂದ ಕೆಟ್ಟ ಹೆಸರು ಗಳಿಸಿದ್ದರು. ನಾರಾ ಚಂದ್ರ ಬಾಬು ನಾಯ್ಡು ಅವರನ್ನು ಪೋಸಾನಿ ಟೀಕಿಸಿದರು ಆದರೆ, ಕಾಲಕ್ರಮೇಣ ಅವಕಾಶ ಸಿಕ್ಕಾಗಲೆಲ್ಲ ಮೆಗಾಸ್ಟಾರ್ ಚಿರಂಜೀವಿ ಅವರು ಟೀಕಿಸಿದರು. ಇದಾದ ಬಳಿಕ ಪೋಸಾನಿ ಕೃಷ್ಣ ಅವರಿಗೆ ಸಿನಿಮಾ ರಂಗದಲ್ಲಿ ಆಫರ್ಗಳೇ ಇಲ್ಲದಂತೆ ಆಯಿತು. ಆ ಬಳಿಕ ಪೋಸಾನಿ ಕೃಷ್ಣ ಅವರು ಪವನ್ ಕಲ್ಯಾಣ್ನ ಟೀಕಿಸಲು ಆರಂಭಿಸಿದರು. ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದರು.
ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಜತೆ ಪೋಸಾನಿ ನಟಿಸಿದ್ದರೂ ಮೆಗಾ ಸಹೋದರರನ್ನು ಗೌರವಿಸಲೇ ಇಲ್ಲ. ಇತ್ತೀಚಿನವರೆಗೂ, ಆಂಧ್ರಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ, ಪೋಸಾನಿ ಅವರು ಪವನ್ ಕಲ್ಯಾಣ್ ಅವರನ್ನು ಹೆಚ್ಚು ಟೀಕಿಸುತ್ತಲೇ ಇದ್ದರು. ಜಗನ್ ಅವರು ಪೋಸಾನಿನ ನಂಬಿ ಆಂಧ್ರಪ್ರದೇಶ ಫಿಲ್ಮ್ ಡೆವಲಪ್ಮೆಂಟ್ನಲ್ಲಿ ಪ್ರಮುಖ ಪಾತ್ರ ನೀಡಿದರು. ಆದರೆ, ಪೋಸಾನಿ ಅವರ ಗಮನ ಅಲ್ಲಿರಲೇ ಇಲ್ಲ. ಈಗ ಟಿಡಿಪಿ ಮೈತ್ರಿ ಆಂಧ್ರ ಪ್ರದೇಶದಲ್ಲಿ ಗೆಲುವು ಕಂಡಿದೆ. ಹೀಗಾಗಿ ಈಗ ಪೋಸಾನಿ ಕೃಷ್ಣ ಮುರಳಿ ಅವರ ವೃತ್ತಿಜೀವನ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Kannada New Movie: ಹೊಸ ಸಿನಿಮಾಗೆ ಕಥೆ ಬರೆಯಿರಿ: 1 ಲಕ್ಷ ರೂ. ಬಹುಮಾನ ಗೆಲ್ಲಿರಿ!
ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು (N Chandrababu Naidu) ನೇತೃತ್ವದ ಟಿಡಿಪಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ನೇತೃತ್ವದ ಜೆಡಿಯು ಈಗಾಗಲೇ ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಭರ್ಜರಿ ಜಯ ದಾಖಲಿಸಿದೆ. ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಜತೆಗೂಡಿ ಎನ್‌ಡಿಎ (NDA) ಬಣದ ಅಡಿಯಲ್ಲಿ ಸ್ಪರ್ಧಿಸಿದ್ದ ಟಿಡಿಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಆಡಳಿತ ವಿರೋಧಿ ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದೆ (AP Election Results 2024).
2019ರ ಚಿತ್ರಣ
2019ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಮುಖಭಂಗವಾಗಿದೆ.