Site icon Vistara News

Pushpa 2 Teaser: ಕಾಲ್ಗೆಜ್ಜೆ ಧರಿಸಿ ಸೀರೆಯುಟ್ಟು ಖಡಕ್‌ ಆಗಿ ದರ್ಶನ ಕೊಟ್ಟ ಪುಷ್ಪರಾಜ್‌; ತಪ್ಪದೇ ಟೀಸರ್‌ ನೋಡಿ!

Pushpa 2 Teaser

ಬೆಂಗಳೂರು: ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ನಟನೆಯ ʻಪುಷ್ಪಾ 2ʼ ಸಿನಿಮಾದ (Pushpa 2 Teaser ) ಟೀಸರ್ ಔಟ್‌ ಆಗಿದೆ. ಟೀಸರ್ ಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದೆ. ಅಲ್ಲು ಅರ್ಜುನ್‌ ಅವರು ಸೀರೆಯುಟ್ಟು ರಗಡ್‌ ಅವತಾರದಲ್ಲಿ ಕಂಡಿದ್ದಾರೆ. ಫೈಟಿಂಗ್‌ ಮಾಡುತ್ತ ದರ್ಶನವನ್ನು ಫ್ಯಾನ್ಸ್‌ಗೆ ನೀಡಿದ್ದಾರೆ ಅಲ್ಲು. ಅಲ್ಲು ಅವರ ಸೀರೆಯ ಅವತಾರ ಕಂಡು ರೋಮಾಚಂನವಾಯ್ತು ಎನ್ನುತ್ತಿದ್ದಾರೆ ಫ್ಯಾನ್ಸ್‌.

ಟೀಸರ್‌ ಔಟ್‌ ಆದ ಕೆಲವೇ ನಿಮಿಷಗಳಲ್ಲಿ ಭಾರಿ ವೀಕ್ಷಣೆ ಕಂಡಿದೆ. ಕಿವಿಯಲ್ಲಿ ಜುಮ್ಕಿ, ಕಾಲಲ್ಲಿ ಗೆಜ್ಜೆ, ಹಣೆಯಲ್ಲಿ ಕುಂಕುಮ, ಸೀರೆಯುಟ್ಟು ಜಾತ್ರೆಯಲ್ಲಿ ಶತ್ರುಗಳನ್ನು ಸೆದೆಬಡಿಯುವ ಅವತಾರದಲ್ಲಿ ಕಂಡಿದ್ದಾರೆ ಪುಷ್ಪರಾಜ್‌. ದೃಶ್ಯಕ್ಕೆ ತಕ್ಕ ಹಾಗೇ ಹಿನ್ನೆಲೆ ಧ್ವನಿ ಕೂಡ ಮೈ ರೋಮಾಂಚನಗೊಳಿಸುವಂತಿದೆ.

ಕೆಲವು ದಿನದ ಹಿಂದೆ ಅಲ್ಲು ಅರ್ಜುನ್ ಮತ್ತೊಂದು ಹೊಚ್ಚ ಹೊಸ ಪೋಸ್ಟರ್ ಹಂಚಿಕೊಂಡಿದ್ದರು. ಅದಲ್ಲಿ ಒಂದು ಕಾಲಿನ ಚಿತ್ರವನ್ನು ಮಾತ್ರ ಹಾಕಲಾಗಿತ್ತು. ಅದರ ಮೇಲೆ ತಾಯಿತವೊಂದನ್ನು ಕಟ್ಟಲಾಗಿತ್ತು.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್‌ಗೆ ಪಾರ್ಟಿ ಆಯೋಜಿಸಿ ಸರ್‌ಪ್ರೈಸ್‌ ಕೊಟ್ಟ ಪತ್ನಿ ಸ್ನೇಹಾ!

ರಶ್ಮಿಕಾ ಅವರ ಹುಟ್ಟುಹಬ್ಬದಂದು ಪುಷ್ಪಾ ಚಿತ್ರದ ನಿರ್ಮಾಪಕರು ಅವರ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದರು. ಹಸಿರು ಸೀರೆ ಮತ್ತು ಆಭರಣಗಳನ್ನು ಧರಿಸಿರುವ ರಶ್ಮಿಕಾ ಅವರ ಕಣ್ಣುಗಳು ಚಿತ್ರದಲ್ಲಿ ಮಾತನಾಡುತ್ತವೆ. ಈ ಫೋಟೋವನ್ನು ಹಂಚಿಕೊಂಡಿರುವ ಚಿತ್ರತಂಡ, “ದೇಶದ ಹೃದಯಸ್ಪರ್ಶಿ ‘ಶ್ರೀವಲ್ಲಿ’ ಅಲಿಯಾಸ್ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಏಪ್ರಿಲ್ 8ರಂದು #PushpaMassJaathara #Pushpa2TheRuleTeaser. #Pushpa2TheRule ಆಗಸ್ಟ್ 15, 2024ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದರು.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

Exit mobile version