ಬೆಂಗಳೂರು: ಕರ್ನಾಟಕವು ಹಿಂದೆಂದೂ (Bengaluru Water Crisis) ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ (Water Crisis) ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಸಮಸ್ಯೆ (Bangalore Water Problem) ಮತ್ತಷ್ಟು ಉಲ್ಬಣಿಸಿದೆ. ಇದೀಗ ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ (actor chiranjeevi) ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ ಬಹಳ ಮುಖ್ಯ ಎಂದಿದ್ದಾರೆ ನಟ ಚಿರಂಜೀವಿ.
ನಟ ಚಿರಂಜೀವಿ ಟ್ವೀಟ್‌ನಲ್ಲಿ ʻʻಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ… ಬಹಳ ಮುಖ್ಯವಾದದ್ದು. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು. ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಿದೆ. ನಾಳೆ ಎಲ್ಲಿ ಬೇಕಾದರೂ ಈ ರೀತಿಯ ಸಮಸ್ಯೆ ಸಂಭವಿಸಬಹುದು. ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಹೇಳಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ,” ಎಂದಿದ್ದಾರೆ.
ಇದನ್ನೂ ಓದಿ: Lokayukta Raid: ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್, ರಾಜ್ಯದ 60 ಕಡೆ ದಾಳಿ
ಚಿರಂಜೀವಿ ಟ್ವೀಟ್
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ… ಬಹಳ ಮುಖ್ಯ.
— Chiranjeevi Konidela (@KChiruTweets) March 26, 2024
ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ… pic.twitter.com/HwoWhSiZW5
20-36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ಸೈಟ್‌ನಾದ್ಯಂತ ಆಯಕಟ್ಟಿನ ಕಡೆಗಳಲ್ಲಿ ಸ್ಥಾಪಿಸಲಾಗಿದೆ. ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವನ್ನು ನಿರ್ದೇಶಿಸಲು ಸಾಕಷ್ಟು ಇಳಿಜಾರು ದಾರಿಗಳಿವೆ. ಪ್ರತಿಯೊಂದು ಬಾವಿಯೂ ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ. ನೀರನ್ನು ಸೋಸುವ ವ್ಯವಸ್ಥೆ , ಅಂದರೆ ವಿವಿಧ ಗಾತ್ರದ ಕಲ್ಲಿನ ಲೇಯರ್‌ಗಳು ಮತ್ತು ಮರಳಿನ ಪದರಗಳ ಮೂಲಕ ನೀರಿನ ಇಂಗುವಿಕೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
ರೀಚಾರ್ಜ್ ಬಾವಿ- ರೀಚಾರ್ಜ್ ಪಿಟ್‌ಗೆ ಹೋಲಿಸಿದರೆ – ಹೆಚ್ಚು ನೀರನ್ನು ಸಂಗ್ರಹಿಸಬಹುದು. ಮತ್ತು ಹೆಚ್ಚು ಆಳವಾದ ನೀರಿನಲ್ಲಿ ವಾಸಿಸುವ ಜಲಚರಗಳನ್ನು ಸಾಕುತ್ತದೆ. ತಳಾಧಾರದಲ್ಲಿನ ಸರಂಧ್ರ ಪದರಗಳ ಮೂಲಕ ನೀರನ್ನು ನಿಧಾನವಾಗಿ ಹರಿಯುವಂತೆ ಮಾಡುತ್ತದೆ.
ನಾನು ಫರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಫರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ವೃತ್ತಾಕಾರದ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಫರ್ಮಾಕಲ್ಚರ್‌ನ ಪ್ರಮುಖ ಫಲಿತಾಂಶವೆಂದರೆ ನೀರಿನ ಬೇಡಿಕೆಯಲ್ಲಿನ ಕಡಿತ. ಮಣ್ಣಿನಿಂದ ಆವಿಯಾಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ತೋಟದಲ್ಲಿ ಬಿದ್ದ ಎಲೆಗಳು ಮತ್ತು ಮರದ ತೊಗಟೆಗಳನ್ನು ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ.
ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು. ಆ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.
1.05 ಲಕ್ಷ ದಂಡ ವಸೂಲಿ ಮಾಡಿದ ಜಲಮಂಡಳಿ
ಕುಡಿಯುವ ನೀರಿನ ಅಭಾವದ ಹಿನ್ನಲೆ ಕಾವೇರಿ ನೀರು ದುರುಪಯೋಗ ಮಾಡದಂತೆ ಜಲಮಂಡಳಿ ಸೂಚನೆ ನೀಡಿತ್ತು. ಆದಾಗ್ಯೂ ಹಲವೆಡೆ ನೀರಿನ ದುಂದುವೆಚ್ಚ ಮಾಡುವುದು ಕಂಡುಬರುತ್ತಿದೆ. ಕಾವೇರಿ ನೀರಿನಿಂದ ಕಾರು ತೊಳೆಯುವುದು, ಸ್ವಚ್ಛತೆ ಸೇರಿ ಅನ್ಯ ಉದ್ದೇಶಗಳಿಂದ ಕಾವೇರಿ ನೀರು ದುರುಪಯೋಗ ಮಾಡಿದವರಿಗೆ ಜುಲ್ಮಾನೆ ವಿಧಿಸಲಾಗಿದೆ.
ನೀರಿನ ದುರ್ಬಳಕೆ ಮಾಡಿದರೆ ಮೊದಲು ಕನಿಷ್ಠ 5,000 ರೂಪಾಯಿ ದಂಡವನ್ನು ವಿಧಿಸಲಾಗುವುದು. ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದರೆ ಕನಿಷ್ಠ ದಂಡ ಶುಲ್ಕದ ಮೇಲೆ 500 ರೂಪಾಯಿ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.
ಬೆಂಗಳೂರು ಜಲ ಮಂಡಳಿಯ ಎಚ್ಚರಿಕೆ ಏನು?
ಈ ಬಗ್ಗೆ ಬೆಂಗಳೂರು ಜಲ ಮಂಡಳಿ ಪ್ರಕಟಣೆಯನ್ನು ಹೊರಡಿಸಿದ್ದು, ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. “ಬೆಂಗಳೂರು ಮಹಾನಗರದಲ್ಲಿ ಕಾಯಂ ನಿವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆ ಇದೆ ಎಂದು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯಕವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತ ಕಂಡಿದೆ. ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.