ಬೆಂಗಳೂರು: ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಟಾಲಿವುಡ್ನ ಜನಪ್ರಿಯ ಯುವ ನಟ ರಾಜ್ ತರುಣ್ (Raj Tarun) ವಿರುದ್ಧ ಅವರ ಪ್ರೇಯಸಿ ಲಾವಣ್ಯ ವಂಚನೆ ಪ್ರಕರಣ ದಾಖಲಿಸಿದ್ದರು. ರಾಜ್ ಅನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಆತ್ಮಹತ್ಯೆಯನ್ನು ತಡೆದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಲಾವಣ್ಯ ಶನಿವಾರ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು ಸೂಕ್ತ ಸಮಯಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗುತ್ತಿದೆ.
ಯಾವಾಗ ಲಾವಣ್ಯ ಅವರು ರಾಜ್ ತರುಣ್ ಹಾಗೂ ಅವರ ಜತೆ ಸಂಬಂಧ ಇತ್ತು ಎನ್ನಲಾಗುತ್ತಿದ್ದ ನಟಿ ಮಾಳವಿ ಮಲ್ಹೋತ್ರಾ ವಿರುದ್ಧ ದೂರು ನೀಡಿದ್ದರೋ. ಅದರ ಪ್ರತಿಯಾಗಿ ರಾಜ್ ತರುಣ್ರ ಹೊಸ ಸಿನಿಮಾದ ನಾಯಕ ನಟಿ ಮಾಳವಿ ಮಲ್ಹೋತ್ರಾ, ರಾಜ್ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದರು. ಲಾವಣ್ಯ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಾನು ರಾಜ್ ತರುಣ್ ಜತೆ ಸಂಬಂಧ ಹೊಂದಿಲ್ಲ ಮತ್ತು ನಮ್ಮಿಬ್ಬರ ಮಧ್ಯೆ ಇರುವುದು ಕೇವಲ ಫ್ರೆಂಡ್‌ಶಿಪ್. ನಮ್ಮ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಹೇಳಿಕೊಂಡಿದ್ದರು.
ಇದೀ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶನಿವಾರ ತಮ್ಮ ವಕೀಲರನ್ನು ಭೇಟಿ ಆಗಿದ್ದ ಲಾವಣ್ಯ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್, ನಟ ರಾಜ್ ತರುಣ್, ತಮ್ಮ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಇನ್ನಿತರೆಗಳಿಂದ ಬೇಸತ್ತಿರುವುದಾಗಿ ಹೇಳಿಕೊಂಡಿದ್ದರು. ಲಾವಣ್ಯ ವಕೀಲರಿಗೆ ಸಂದೇಶ ಕಳಿಸಿ, ಈ ಪ್ರಪಂಚದಲ್ಲಿ ನನ್ನ ದಿನಗಳು ಅಂತ್ಯವಾದವು’, ‘ಈ ಮೈಂಡ್ ಗೇಮ್, ಗಾಸಿಪ್ಗಳಿಂದ ನನಗೆ ಸಾಕಾಗಿ ಹೋಗಿದೆ’ ಎಂದೆಲ್ಲ ಮೆಸೆಜ್ ಕಳುಹಿಸಿದ್ದರಂತೆ. ಲಾವಣ್ಯರ ಮನೆಗೆ ಧಾವಿಸಿದ ಪೊಲೀಸರು ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ತಡೆದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Raj Tarun: ಯುವ ನಟ ರಾಜ್ ತರುಣ್ ಮಾಜಿ ಪ್ರೇಯಸಿ ವಿರುದ್ಧ ದೂರು ದಾಖಲಿಸಿದ ನಟಿ!
ಲಾವಣ್ಯ ಈ ಹಿಂದೆ ದೂರು ನೀಡಿದ್ದೇನು?
ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದರು. . “ರಾಜ್ ತರುಣ್ ನನ್ನನ್ನು ನಂಬಿ, ಪ್ರೀತಿಸಿ, ದೈಹಿಕವಾಗಿಯೂ ಬಳಸಿಕೊಂಡಿದ್ದಾರೆ. ಇದಕ್ಕೆ ಕಾರಣ ಒಬ್ಬ ಯುವತಿ . ಹಾಗಾಗಿಯೇ ಆಕೆಯ ಹಾಗೂ ಆಕೆಯ ಸಹೋದರನ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ರಾಜ್‌ತರುಣ್ ಜತೆ 11 ವರ್ಷಗಳಿಂದ ಸಂಬಂಧ ಹೊಂದಿದ್ದೆ. ದೇವಸ್ಥಾನದಲ್ಲಿ ಮದುವೆ ಕೂಡ ಮಾಡಿಕೊಂಡಿದ್ದೇವು. ಆದರೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ 3 ತಿಂಗಳ ಹಿಂದೆ ರಾಜ್ ಮನೆ ಬಿಟ್ಟು ನನ್ನಿಂದ ದೂರ ಉಳಿದಿದ್ದರು’’ ಎಂದು ಲಾವಣ್ಯ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.