ಬೆಂಗಳೂರು: ‘ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಟಾಲಿವುಡ್ನ ಜನಪ್ರಿಯ ಯುವ ನಟ ರಾಜ್ ತರುಣ್ (Raj Tarun) ವಿರುದ್ಧ ಅವರ ಪ್ರೇಯಸಿಯೇ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸಿನಿಮಾ ಚೂಪಿಸ್ತಾ ಮಾವ’, ‘ಪವರ್ ಪ್ಲೇ’, ‘ನಾ ಸಾಮಿ ರಂಗ’, ‘ಒರೇ ಬುಜ್ಜಿಗಾ ಸೇರಿದಂತೆ ಇನ್ನೂ ಹಲವಾರು ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಲ್ಲಿ ಅಭಿನಯಿಸಿದ್ದರು ರಾಜ್ ತರುಣ್. ಇದೀಗ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಲಾವಣ್ಯ ಹೆಸರಿನ ಯುವತಿ ದೂರು ದಾಖಲಿಸಿದ್ದು, ತಮಗೆ ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.
ಅಲ್ಲದೆ, ರಾಜ್ ತನ್ನ ಜೀವನದಿಂದ ದೂರವಾಗದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ತಿಳಿಸಿದ್ದಾರೆ. ನಟ ರಾಜ್ ತರುಣ್ ಗೆಳತಿ ಎಂದು ಹೇಳಿಕೊಳ್ಳುವ ಲಾವಣ್ಯ, ರಾಜ್ ತರುಣ್ ವಿರುದ್ಧ ಸೆನ್ಸೇಷನಲ್ ಆರೋಪ ಮಾಡಿದ್ದು ಹೀಗೆ. “ರಾಜ್ ತರುಣ್ ನನ್ನನ್ನು ನಂಬಿ, ಪ್ರೀತಿಸಿ, ದೈಹಿಕವಾಗಿಯೂ ಬಳಸಿಕೊಂಡಿದ್ದಾರೆ. ಇದಕ್ಕೆ ಕಾರಣ ಒಬ್ಬ ಯುವತಿ . ಹಾಗಾಗಿಯೇ ಆಕೆಯ ಹಾಗೂ ಆಕೆಯ ಸಹೋದರನ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ರಾಜ್‌ತರುಣ್ ಜತೆ 11 ವರ್ಷಗಳಿಂದ ಸಂಬಂಧ ಹೊಂದಿದ್ದೆ. ದೇವಸ್ಥಾನದಲ್ಲಿ ಮದುವೆ ಕೂಡ ಮಾಡಿಕೊಂಡಿದ್ದೇವು. ಆದರೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ 3 ತಿಂಗಳ ಹಿಂದೆ ರಾಜ್ ಮನೆ ಬಿಟ್ಟು ನನ್ನಿಂದ ದೂರ ಉಳಿದಿದ್ದರು’’ ಎಂದು ಲಾವಣ್ಯ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಲಾವಣ್ಯ ಹೇಳುತ್ತಿರುವಂತೆ ಇದೀಗ ಮುಂಬೈ ಮೂಲದ ನಟಿ, ಲಾವಣ್ಯಗೆ ಬೆದರಿಕೆಗಳನ್ನು ಹಾಕಿದ್ದು, ರಾಜ್ ತರುಣ್ ಇಂದ ದೂರ ಇರುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Rashmika Mandanna: ಧನುಷ್ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್ ಲುಕ್ ಪೋಸ್ಟರ್ ಔಟ್!
ʻʻರಾಜ್ ಈ ರೀತಿ ಮೋಸ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈಗ ನನಗೆ ಜೀವ ಭಯವಿದೆ. ಆ ಹುಡಗಿ ನನ್ನನ್ನು ಏನು ಮಾಡುತ್ತಾಳೋ ಎಂಬ ಭಯದಿಂದ ನಾನು ಪೊಲೀಸ್ ದೂರು ದಾಖಲಿಸಿದೆ. ಅವಳು ನನಗೆ ಸಾಕಷ್ಟು ಬಾರಿ ಕರೆ ಮಾಡಿ ನನಗೆ ಜೀವ ಬೆದರಿಕೆ ಹಾಕಿದ್ದಾಳೆ. ಈ ವಿಚಾರದಲ್ಲಿ ಭದ್ರತೆ ನೀಡುವಂತೆ ಪೊಲೀಸರನ್ನೂ ಕೇಳಿದ್ದೇನೆ,’’ ಎಂದು ಲಾವಣ್ಯ ಹೇಳಿದ್ದಾರೆ.
ಲಾವಣ್ಯಗೆ ನಟಿಯಿಂದ, ಆಕೆಯ ಸಹೋದರನಿಂದ ಬೆದರಿಕೆಗಳು ಬಂದಿವೆಯಂತೆ. ಕೆಲ ತಿಂಗಳ ಹಿಂದೆ ಸಹ ಲಾವಣ್ಯ, ರಾಜ್ ಅನ್ನು ಮದುವೆಯಾಗಲು ನಿಶ್ಚಯಿಸಿದ್ದರಂತೆ. ಆ ಸಮಯದಲ್ಲಿ ಆ ನಟಿಗೆ ಕರೆ ಮಾಡಿ ರಾಜ್ ಇಂದ ದೂರ ಇರುವಂತೆ ಬೇಡಿಕೊಂಡಿದ್ದಾಗಿಯೂ ಲಾವಣ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಜ್ ಸದ್ಯ ‘ತಿರಗಬಡರಾ ಸ್ವಾಮಿ’ ಹೆಸರಿನ ಹೊಸ ಸಿನಿಮಾ ಪ್ರಾರಂಭಿಸಿದ್ದು ಚಿತ್ರೀಕರಣ ನಡೆಯುತ್ತಿದೆ.