ಬೆಂಗಳೂರು: ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಟಾಲಿವುಡ್ನ ಜನಪ್ರಿಯ ಯುವ ನಟ ರಾಜ್ ತರುಣ್ (Raj Tarun) ವಿರುದ್ಧ ಅವರ ಪ್ರೇಯಸಿಯೇ ವಂಚನೆ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಠಾಣೆಯಲ್ಲಿ ಲಾವಣ್ಯ ಹೆಸರಿನ ಯುವತಿ ದೂರು ದಾಖಲಿಸಿದ್ದು, ತಮಗೆ ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದರು. ಮಾತ್ರವಲ್ಲ ರಾಜ್ ತರುಣ್ಗೆ ಅವರು ನಟಿಸುತ್ತಿರುವ ಸಿನಿಮಾದ ನಾಯಕ ನಟಿಯೊಂದಿಗೆ ಸಂಬಂಧವಿದ್ದು ಆಕೆಯ ಕಾರಣಕ್ಕೆ ನನಗೆ ಮೋಸ ಮಾಡಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ರಾಜ್ ತರುಣ್ರ ಹೊಸ ಸಿನಿಮಾದ ನಾಯಕ ನಟಿ, ರಾಜ್ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದಾರೆ.
”ಲಾವಣ್ಯ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಾನು ರಾಜ್ ತರುಣ್ ಜತೆ ಸಂಬಂಧ ಹೊಂದಿಲ್ಲ ಮತ್ತು ನಮ್ಮಿಬ್ಬರ ಮಧ್ಯೆ ಇರುವುದು ಕೇವಲ ಫ್ರೆಂಡ್‌ಶಿಪ್. ನಮ್ಮ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಹೇಳಿಕೊಂಡಿದ್ದಾರೆ. “ತಿರಗಬ್ಯಾಡರ ಸಾಮಿ” ಚಿತ್ರದಲ್ಲಿ ನಟಿಸಿದ್ದರು ಮಾಳವಿ ಮಲ್ಹೋತ್ರಾ.
ಇದೀಗ ಲಾವಣ್ಯ ಈಗ ಇದೇ ಮಾಳವಿ ಅವರು ರಾಜ್ ತರುಣ್ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಹೈದರಾಬಾದ್ ಡಿಸಿಪಿ ಅವರನ್ನು ಭೇಟಿ ಆಗಿರುವ ಮಾಳವಿ ಮಲ್ಹೋತ್ರಾ, ʻʻಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ತನ್ನ ಕುಟುಂಬಕ್ಕೆ ಲಾವಣ್ಯ ಬೆದರಿಕೆ ಹಾಕಿದ್ದಾಳೆ. ಮತ್ತು ತನ್ನ ಸಹೋದರನಿಗೆ ಕರೆ ಮಾಡಿ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ಲಾವಣ್ಯ ಯಾರು ಹಾಗೇ ಅವರ ಮುಖವನ್ನು ಇನ್ನೂ ನಾನು ನೋಡಿಲ್ಲ. ರಾಜ್ ತರುಣ್ ಅವರು ನನ್ನ ಮಾಜಿ ಎಕ್ಸ್ ಎಂದು ಹೇಳಿದ್ದರಿಂದ ನಾನು ಅವಳನ್ನು ಬ್ಲಾಕ್ ಮಾಡಿದ್ದೇನೆ ರಾಜ್ ತರುಣ್ ಬಳಿಯೂ ನನ್ನ ಅಪ್ಪನ ಫೋನ್ ನಂಬರ್ ಇರಲಿಲ್ಲ. ಆದರೆ ಲಾವಣ್ಯ ಅವಳ ಬಳಿ ಇದೆ. ನನ್ನ ಖಾಸಗಿ ಜೀವನದ ಮೇಲೆ ಆಕೆ ನಿಗಾ ಇರಿಸಿದ್ದಾಳೆ. ನನ್ನ ಖಾಸಗಿ ಜೀವನದಲ್ಲಿ ಮೂಗು ತೂರಿಸಿದ್ದಾಳೆ ಅದು ಅಪರಾಧ. ಪೊಲೀಸರು ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕುʼʼ ಎಂದಿದ್ದಾರೆ.
ಇದನ್ನೂ ಓದಿ: Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!
ಲಾವಣ್ಯ ಈ ಹಿಂದೆ ದೂರು ನೀಡಿದ್ದೇನು?
ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದರು. . “ರಾಜ್ ತರುಣ್ ನನ್ನನ್ನು ನಂಬಿ, ಪ್ರೀತಿಸಿ, ದೈಹಿಕವಾಗಿಯೂ ಬಳಸಿಕೊಂಡಿದ್ದಾರೆ. ಇದಕ್ಕೆ ಕಾರಣ ಒಬ್ಬ ಯುವತಿ . ಹಾಗಾಗಿಯೇ ಆಕೆಯ ಹಾಗೂ ಆಕೆಯ ಸಹೋದರನ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ರಾಜ್‌ತರುಣ್ ಜತೆ 11 ವರ್ಷಗಳಿಂದ ಸಂಬಂಧ ಹೊಂದಿದ್ದೆ. ದೇವಸ್ಥಾನದಲ್ಲಿ ಮದುವೆ ಕೂಡ ಮಾಡಿಕೊಂಡಿದ್ದೇವು. ಆದರೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ 3 ತಿಂಗಳ ಹಿಂದೆ ರಾಜ್ ಮನೆ ಬಿಟ್ಟು ನನ್ನಿಂದ ದೂರ ಉಳಿದಿದ್ದರು’’ ಎಂದು ಲಾವಣ್ಯ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.