ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh wedding) ಅವರ ಮದುವೆ ಫೆಬ್ರವರಿ 21ರಂದು ನಟ-ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಜತೆ ನೆರವೇರಲಿದೆ. ಅವರ ವಿವಾಹ ಕಾರ್ಯ ಗೋವಾದಲ್ಲಿ ನಡೆಯುತ್ತಿದೆ. ಈ ಮದುವೆಯಲ್ಲಿ ಆಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಮುಂಬೈನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಸುವ ಆಲೋಚನೆ ಇವರಿಗೆ ಇದೆ. ಇದೀಗ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಾಲ್ಕು ವರ್ಷಗಳಿಂದ ಈ ಜೋಡಿ ಡೇಟಿಂಗ್ ಮಾಡುತ್ತಿತ್ತು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ರಕುಲ್ ಪ್ರೀತ್ ಸಿಂಗ್. 2014ರಲ್ಲಿ ʻಯಾರಿಯಾನ್ʼ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ʻಐಯಾರಿʼ (2016), ʻದೇ ದೇ ಪ್ಯಾರ್ ದೇʼ (2019) ಮತ್ತು ʻರನ್ವೇ 34ʼ (2022) ನಂತಹ ಸಿನಿಮಾಗಳನ್ನು ಮಾಡಿದ್ದಾರೆ. ರಕುಲ್ ಪ್ರೀತ್ ಸಿಂಗ್ ಕನ್ನಡದ ‘ಗಿಲ್ಲಿ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಬಂದರು. ‘ಅಯಲಾನ್’ ಚಿತ್ರ ಇತ್ತೀಚೆಗೆ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿದೆ. ಕಲಮ್ ಹಾಸನ್ ಅವರ ಇಂಡಿಯನ್-2 ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಇದನ್ನೂ ಓದಿ: Rakul Preet Singh: ಮೈ ಕೊರೆಯುವ ಚಳಿಯಲ್ಲಿ, ಹಿಮದ ನೀರಿನಲ್ಲಿ ಮಿಂದೆದ್ದ ರಕುಲ್ ಪ್ರೀತ್ ಸಿಂಗ್, ಇಲ್ಲಿದೆ ವಿಡಿಯೊ
ಜಾಕಿ ಭಗ್ನಾನಿ 2009ರಲ್ಲಿ ನಟನಾಗಿ ಬಣ್ಣದ ಲೋಕಕ್ಕೆ ಬಂದರು. ಕಲ್ ಕಿಸ್ನೆ ದೇಖಾ (2009) ಮತ್ತು ಅಜಬ್ ಗಜಾಬ್ ಲವ್ (2012) ಸಿನಿಮಾಗಳನ್ನು ಮಾಡಿದರು. ಆ ಬಳಿಕ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಸರಬ್ಜಿತ್’ (2016) ನೊಂದಿಗೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟರು. ನಟನಾಗಿ ಅವರು ಗೆಲ್ಲಲಿಲ್ಲ. ಈವರೆಗೆ 10 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ʻಬಡೇ ಮಿಯಾನ್ ಚೋಟೆ ಮಿಯಾನ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. – ಅಕ್ಷಯ್ ಕುಮಾರ್, ಪೃಥ್ವಿರಾಜ್ ಸುಕುಮಾರನ್, ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ.