Site icon Vistara News

Ram Charan: ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್​: ಫ್ಯಾನ್ಸ್‌ ಫುಲ್‌ ಖುಷ್‌!

Ram Charan awarded honorary doctorate

ಬೆಂಗಳೂರು: ಟಾಲಿವುಡ್‌ ನಟ ರಾಮ್‌ಚರಣ್‌ (Ram Charan ) ಚೆನ್ನೈನ ವೆಲ್ಸ್ ( University of Vels) ವಿಶ್ವವಿದ್ಯಾಲಯದಿಂದ (ಏಪ್ರಿಲ್ 13ರಂದು) ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಏಪ್ರಿಲ್ 13ರಂದು ನಡೆದ ವಿಶ್ವವಿದ್ಯಾಲಯದ ಪದವಿ ಸಮಾರಂಭದಲ್ಲಿ ನಟ ಮುಖ್ಯ ಅತಿಥಿಯಾಗಿದ್ದರು. ವೇಲ್ಸ್ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಲು ಹೆಸರುವಾಸಿಯಾಗಿದೆ. ಇದೀಗ ವಿಶ್ವವಿದ್ಯಾಲಯವು ಮನರಂಜನಾ ಕ್ಷೇತ್ರದಲ್ಲಿ ಸೇವೆಗಾಗಿ ರಾಮ್‌ಚರಣ್‌ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ.

ಇದಕ್ಕೂ ಮೊದಲು, ಎಕ್ಸ್‌ನಲ್ಲಿ ವೆಲ್ಸ್ ವಿಶ್ವವಿದ್ಯಾಲಯ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿತ್ತು, “ರಾಮ್ ಚರಣ್ ಭಾರತೀಯ ನಟ, ನಿರ್ಮಾಪಕ ಮತ್ತು ಉದ್ಯಮಿ. ನಮ್ಮ 14ನೇ ವಾರ್ಷಿಕ ಘಟಿಕೋತ್ಸವಕ್ಕೆ ಡೈನಾಮಿಕ್ ಸ್ಟಾರ್ ರಾಮ್‌ಚರಣ್‌ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆʼʼಎಂದು ಬರೆದುಕೊಂಡಿತ್ತು. ತಮ್ಮ ನೆಚ್ಚಿನ ನಾಯಕನಿಗೆ ಸಿಕ್ಕ ಗೌರವ ಕಂಡು ರಾಮ್ ಚರಣ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರ ʼಗೇಮ್ ಚೇಂಜರ್ʼ (Game Changer) ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜತೆ ಕೈ ಜೋಡಿಸಿದ್ದಾರೆ. ಆರ್‌ಸಿ 16 ಸಿನಿಮಾಗೆ ಬುಚ್ಚಿ ಬಾಬು ಆ್ಯಕ್ಷನ್‌ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಟೇಕಾಫ್‌ಗೂ ಮೊದಲೇ ರಾಮ್‌ ಚರಣ್‌ ಅವರ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್, ರಾಮ್ ಚರಣ್ ಹಾಗೂ ʼಪುಷ್ಪʼ ನಿರ್ದೇಶಕ ಸುಕುಮಾರ್ ಮತ್ತೆ ಒಂದಾಗಿದ್ದಾರೆ. ʼರಂಗಸ್ಥಳಂʼ ಮೂಲಕ ಧಮಾಕ ಎಬ್ಬಿಸಿದ್ದ ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಬಣ್ಣದ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Ram Charan: ಥೈಲ್ಯಾಂಡ್‌ನಲ್ಲಿ ಆನೆ ಮರಿಗೆ ಸ್ನಾನ ಮಾಡಿಸಿದ ರಾಮ್ ಚರಣ್!

ಆರ್‌.ಆರ್‌.ಆರ್‌. ಸಿನಿಮಾದ ಭಾರೀ ಯಶಸ್ಸಿನ ಬಳಿಕ ಶಂಕರ್ ಸಾರಥ್ಯದ ʼಗೇಮ್ ಚೇಂಜರ್ʼ ಚಿತ್ರದಲ್ಲಿ ರಾಮ್ ನಟಿಸುತ್ತಿದ್ದಾರೆ. ಜತೆಗೆ ʼಉಪ್ಪೇನಾʼ ನಿರ್ದೇಶಕ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ಹಣ ಹೂಡುತ್ತಿರುವ ಈ ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆದ ʼರಂಗಸ್ಥಳಂʼ ಚಿತ್ರಕ್ಕೂ ಸಂಗೀತ ನೀಡಿದ್ದ ದೇವಿಶ್ರೀ ಪ್ರಸಾದ್ ಮತ್ತೆ ಸುಕುಮಾರ್ ಹಾಗೂ ರಾಮ್ ಸಿನಿಮಾ ಮೂಲಕ ಧಮಾಕ ಎಬ್ಬಿಸುವ ಸೂಚನೆ ನೀಡಿದ್ದಾರೆ. ಅಂದ ಹಾಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಮೂಡಿ ಬರಲಿದೆ. ರಾಮ್‌ ಚರಣ್‌ ಅವರ ಈ 17ನೇ ಚಿತ್ರ 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Exit mobile version