Site icon Vistara News

Ram Charan Birthday: ಹುಟ್ಟುಹಬ್ಬದ ದಿನ ಕುಟುಂಬ ಸಮೇತ ತಿರುಪತಿಗೆ ಭೇಟಿ ಕೊಟ್ಟ ರಾಮ್‌ಚರಣ್‌!

Ram Charan Birthday Upasana Visit Tirupati

ಬೆಂಗಳೂರು: ಟಾಲಿವುಡ್‌ ನಟ ರಾಮ್ ಚರಣ್ (Ram Charan Birthday) ಅವರಿಗೆ ಇಂದು (ಮಾ. 27) 39ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಪತ್ನಿ ಉಪಾಸನಾ ಜತೆ ಪ್ರಾರ್ಥನೆ ಸಲ್ಲಿಸಿದರು. ಮಗಳು ಕ್ಲೀಂಕಾರ (Klin Kaara Konidela) ಕೂಡ ಇದ್ದಳು. ಇದೀಗ ರಾಮ್‌ಚರಣ್‌ ಅವರು ತಿರುಪತಿಯಲ್ಲಿರುವ (Tirupati Temple) ವಿಡಿಯೊ ವೈರಲ್‌ ಆಗಿದೆ. ನಟ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಉಪಾಸನಾ ಸೀರೆಯುಟ್ಟಿದ್ದರು.

ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾದಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್‌ ಚರಣ್‌ ಅವರಿಗೆ ಫ್ಯಾನ್ಸ್‌ ಬರ್ತ್‌ಡೇ ವಿಶ್‌ ತಿಳಿಸುತ್ತಿದ್ದಾರೆ. ಈಗಾಗಲೇ ನಟನ ಕೈಯಲ್ಲಿ ಹಲವಾರು ಸಿನಿಮಾಗಳಿವೆ.

ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್

ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರತಂಡ ಇದೀಗ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಿದೆ. ಮೈತ್ರಿ ಮೂವಿ ಮೇಕರ್ಸ್ ಬೆಂಬಲದೊಂದಿಗೆ, ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಹೈ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸ್ಪೋರ್ಟ್ಸ್ ಡ್ರಾಮಾ ಚಿತ್ರ ಇದಾಗಿದ್ದು, ಪ್ಯಾನ್-ಇಂಡಿಯಾ ಚಲನಚಿತ್ರವಾಗಲಿದೆ ಎಂದು ವರದಿಯಾಗಿದೆ. ಜಾನ್ವಿ ಕಪೂರ್ ಈ ಸಿನಿಮಾಗೆ ನಾಯಕಿ. ‘ಆರ್‌ಸಿ 16’ ಮತ್ತು ‘ದೇವರ’ ಹೊರತುಪಡಿಸಿ, ಜಾನ್ವಿ ಅವರು ರಾಜ್‌ಕುಮಾರ್ ರಾವ್ ಎದುರು ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’, ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Ram Charan: ಮಗು ಪಡೆಯಲು ಕುಟುಂಬ, ಸಮಾಜ ನಮ್ಮ ಮೇಲೆ ಒತ್ತಡ ಹೇರಿಲ್ಲ, ಇದು ನಮ್ಮಿಬ್ಬರ ನಿರ್ಧಾರ ಎಂದ ಉಪಾಸನಾ

‘ಗೇಮ್ ಚೇಂಜರ್’

ಟಾಲಿವುಡ್‌ ನಟ ರಾಮ್ ಚರಣ್ (Ram Charan) ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಗೇಮ್ ಚೇಂಜರ್’ (Game Changer) ಮೂಲಕ ಮತ್ತೆ ಫ್ಯಾನ್ಸ್‌ ಹೃದಯಗಳನ್ನು ಗೆಲ್ಲಲು ಸಿದ್ಧರಾಗಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಆಡ್ವಾಣಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರ ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಬಜೆಟ್‌ ಸಿನಿಮಾವಾಗಿರಲಿದೆ ಎಂದು ಹೇಳಲಾಗುತ್ತಿದೆ.

ವೈರಲ್‌ ವಿಡಿಯೊ

ಚಿತ್ರದಲ್ಲಿ ರಾಮ್ ಚರಣ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ಷಣ್ಮುಖಂ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಆಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಈ ವರ್ಷದ ಆರಂಭದಲ್ಲಿ ಘೋಷಣೆಯಾದಾಗಿನಿಂದ ಗಮನ ಸೆಳೆಯುತ್ತಿದೆ.

ವರದಿ ಪ್ರಕಾರ, ರಾಮ್ ಚರಣ್ ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿಲಿದ್ದಾರೆ. ಚಿತ್ರದ ನಾಯಕಿಯಾಗಿ ಕಿಯಾರಾ ಆಡ್ವಾಣಿ ಆಯ್ಕೆಯಾಗಿದ್ದಾರೆ. ‘ಗೇಮ್ ಚೇಂಜರ್’ ಒಂದು ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು ಎಸ್ ಶಂಕರ್ ನಿರ್ದೇಶಿಸಿದ್ದಾರೆ.

ಗೇಮ್ ಚೇಂಜರ್‌ಗಾಗಿ ನಿರ್ದೇಶಕ ಎಸ್‌ ಶಂಕರ್ ಚಿತ್ರದ ಹಾಡುಗಳಿಗೆ 90 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಎಸ್ ಥಮನ್ ಈ ಚಿತ್ರದ ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Actor Ramcharan: RC15 ಟೈಟಲ್‌ ರಿವೀಲ್‌: ಜನುಮದಿನದಂದೇ ಗುಡ್‌ನ್ಯೂಸ್‌ ಕೊಟ್ಟ ರಾಮ್‌ಚರಣ್‌

ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್, ಕಿಯಾರಾ ಆಡ್ವಾಣಿ ಮತ್ತು ಎಸ್‌ಜೆ ಸೂರ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಿಲ್ ರಾಜು ಮತ್ತು ಸಿರಿಶ್ ನಿರ್ಮಾಣದ ಈ ಚಿತ್ರ 2024ರಲ್ಲಿ ಬಿಡುಗಡೆಯಾಗಲಿದೆ. ಅಂಜಲಿ, ಜಯರಾಮ್, ನವೀನ್ ಚಂದ್ರ, ಸುನೀಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸರ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್ ಥಮನ್ ಸಂಯೋಜನೆ, ಶಮೀರ್ ಮುಹಮ್ಮದ್ ಸಂಕಲನ ಮತ್ತು ತಿರ್ರು ಛಾಯಾಗ್ರಹಣವಿದೆ.

Exit mobile version