ಬೆಂಗಳೂರು: ರಾಮ್ ಚರಣ್ (Ram Charan) ಮತ್ತು ಉಪಾಸನಾ ಕಾಮಿನೇನಿ (Upasana on daughter ) ಕೊನಿಡೇಲಾ ಅವರ ಪುತ್ರಿ ಕ್ಲೀಂಕಾರ (Klin Kaara) ಕೊನಿಡೇಲಾಗೆ ಇಂದು ಜನುಮದಿನದ ಸಂಭ್ರಮ. ಕ್ಲೀಂಕಾರ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಉಪಾಸನಾ ಅವರು ಮಗಳ ನಾಮಕರಣ ದಿನದ ಫೋಟೊವನ್ನು ಹಂಚಿಕೊಂಡು ʻʻನಮ್ಮ ಜೀವನದಲ್ಲಿ ಸಂತೋಷ ತಂದಿದ್ದಕ್ಕಾಗಿ ಧನ್ಯವಾದಗಳುʼʼಎಂದು ಕ್ಯಾಪ್ಷನ್ ನೀಡಿ ವಿಶ್ ಮಾಡಿದ್ದಾರೆ.
“ಮೊದಲ ವರ್ಷದ ಜನ್ಮದಿನದ ಶುಭಾಶಯಗಳು, ನನ್ನ ಪ್ರಿಯತಮೆ ಕ್ಲಿನ್ ಕಾರಾ ಕೊನಿಡೆಲಾ. ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದಕ್ಕಾಗಿ ಧನ್ಯವಾದಗಳು. ನಾನು ಈ ವೀಡಿಯೊವನ್ನು ಮಿಲಿಯನ್ ಬಾರಿ ನೋಡಿದ್ದೇನೆʼʼಎಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಮದುವೆಯಾಗಿ 11 ವರ್ಷಗಳ ಬಳಿಕ ರಾಮ್ ಚರಣ್ (Ram Charan)- ಉಪಾಸನಾ ದಂಪತಿ ಹೆಣ್ಣು ಮಗುವಿಗೆ ಪೋಷಕರಾದರು. ಮಗುವಿನ ಹೆಸರು ‘ಕ್ಲೀಂಕಾರ ಕೊನಿಡೆಲಾ’ (Klin Kaara konidela). ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ. ಉಪಾಸನಾ ಹಾಗೂ ರಾಮ್ ಚರಣ್ ತಮ್ಮ ಮಗಳಿಗಾಗಿ ವಿಶೇಷವಾಗಿ ಕೋಣೆಯನ್ನು ಡಿಸೈನ್ ಮಾಡಿಸಿದ್ದರು. ಹಲವಾರು ಸ್ಟಫ್ಡ್ ಆಟಿಕೆಗಳು ಮತ್ತು ವಿಶೇಷವಾಗಿ ಕ್ಯುರೇಟೆಡ್ ವಾಲ್‌ಪೇಪರ್ ಹೊಂದಿದೆ ಈ ಕೋಣೆ. ಉಪಾಸನಾ ಹಾಗೂ ರಾಮ್ ಚರಣ್ ಇಬ್ಬರಿಗೂ ಅರಣ್ಯವೆಂದರೆ ಬಹಳ ಪ್ರೀತಿಯಾದ್ದರಿಂದ ಅದೇ ಥೀಮ್ ಇರಿಸಿ ಮಗಳ ಕೋಣೆಯನ್ನು ಡಿಸೈನ್ ಮಾಡಿಸಿದ್ದಾರೆ. ಮರ, ಗಿಡಗಳ ಭಿನ್ನ ರೀತಿಯ ಚಿತ್ರಗಳು ಇಡೀ ಕೋಣೆಯ ತುಂಬೆಲ್ಲ ಇವೆ.‘ಕ್ಲೀಂಕಾರ’ ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ. ದೈವಿಕ ತಾಯಿಯಾದ ‘ಶಕ್ತಿ’ಯ ಪರಮೋಚ್ಚ ಶಕ್ತಿ ಎಂದು ಅರ್ಥ.
ಇದನ್ನೂ ಓದಿ: Ram Charan: ರಾಮ್‌ಚರಣ್ ಮಗಳಿಗೆ ಸಿಕ್ತು ಪ್ರಭಾಸ್‌ರಿಂದ ಪುಟಾಣಿ ಬುಜ್ಜಿ!
ಸಿನಿಮಾ ವಿಚಾರಕ್ಕೆ ಬಂದರೆ ರಾಮ್ ಚರಣ್ ನಿರ್ದೇಶಕ ಶಂಕರ್ ಅವರ ‘ಗೇಮ್ ಚೇಂಜರ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಅಧಿಕೃತ ಘೋಷಣೆಗೆ ಇನ್ನೂ ಕಾಯಬೇಕಾಗಿದೆ. ‘ಗೇಮ್ ಚೇಂಜರ್’ ನಂತರ, ಚರಣ್ ನಿರ್ದೇಶಕ ಬುಚ್ಚಿ ಬಾಬು ಸಾನಾ ಅವರ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.