Site icon Vistara News

Ram Charan: ‘ಗೇಮ್ ಚೇಂಜರ್’ ರಾಮ್ ಚರಣ್ ಲುಕ್‌ ಲೀಕ್‌!

Ram Charan's 'Game Changer' look leaked

ಬೆಂಗಳೂರು: ಟಾಲಿವುಡ್‌ ನಟ ರಾಮ್ ಚರಣ್ (Ram Charan) ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಗೇಮ್ ಚೇಂಜರ್’ (Game Changer) ಮೂಲಕ ಮತ್ತೆ ಫ್ಯಾನ್ಸ್‌ ಹೃದಯಗಳನ್ನು ಗೆಲ್ಲಲು ಸಿದ್ಧರಾಗಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಆಡ್ವಾಣಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರ ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಬಜೆಟ್‌ ಸಿನಿಮಾವಾಗಿರಲಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ನಡುವೆ, ಚಿತ್ರದ ಹಾಡೊಂದು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿತ್ತು. ಇದೀಗ ಮತ್ತೆ ಸಿನಿಮಾವೊಂದರ ಲುಕ್‌ ಲೀಕ್‌ ಆಗಿದೆ.

ಚಿತ್ರದಲ್ಲಿ ರಾಮ್ ಚರಣ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ಷಣ್ಮುಖಂ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಆಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಈ ವರ್ಷದ ಆರಂಭದಲ್ಲಿ ಘೋಷಣೆಯಾದಾಗಿನಿಂದ ಗಮನ ಸೆಳೆಯುತ್ತಿದೆ.

2023ರ ಸೆಪ್ಟೆಂಬರ್‌ನಲ್ಲಿ, ಚಿತ್ರದ ಹಾಡೊಂದರ ದೃಶ್ಯ ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ ‘ಗೇಮ್ ಚೇಂಜರ್’ ತಯಾರಕರು ದೂರು ಸಲ್ಲಿಸಿದ್ದರು. 30 ಸೆಕೆಂಡ್‌ಗಳ ಕ್ಲಿಪ್ ಆಗಿದ್ದು ವೈರಲ್ ಆಗಿತ್ತು. ತಯಾರಕರು ದೂರು ದಾಖಲಿಸಿದ ನಂತರ, ಸೈಬರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಇದನ್ನೂ ಓದಿ: Ram Charan: ಅಜ್ಜನ ಜತೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ ರಾಮ್ ಚರಣ್ ಪತ್ನಿ!

ವರದಿ ಪ್ರಕಾರ, ರಾಮ್ ಚರಣ್ ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿಲಿದ್ದಾರೆ. ಚಿತ್ರದ ನಾಯಕಿಯಾಗಿ ಕಿಯಾರಾ ಆಡ್ವಾಣಿ ಆಯ್ಕೆಯಾಗಿದ್ದಾರೆ. ‘ಗೇಮ್ ಚೇಂಜರ್’ ಒಂದು ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು ಎಸ್ ಶಂಕರ್ ನಿರ್ದೇಶಿಸಿದ್ದಾರೆ.

ಗೇಮ್ ಚೇಂಜರ್‌ಗಾಗಿ ನಿರ್ದೇಶಕ ಎಸ್‌ ಶಂಕರ್ ಚಿತ್ರದ ಹಾಡುಗಳಿಗೆ 90 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಎಸ್ ಥಮನ್ ಈ ಚಿತ್ರದ ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್, ಕಿಯಾರಾ ಆಡ್ವಾಣಿ ಮತ್ತು ಎಸ್‌ಜೆ ಸೂರ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಿಲ್ ರಾಜು ಮತ್ತು ಸಿರಿಶ್ ನಿರ್ಮಾಣದ ಈ ಚಿತ್ರ 2024ರಲ್ಲಿ ಬಿಡುಗಡೆಯಾಗಲಿದೆ. ಅಂಜಲಿ, ಜಯರಾಮ್, ನವೀನ್ ಚಂದ್ರ, ಸುನೀಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸರ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್ ಥಮನ್ ಸಂಯೋಜನೆ, ಶಮೀರ್ ಮುಹಮ್ಮದ್ ಸಂಕಲನ ಮತ್ತು ತಿರ್ರು ಛಾಯಾಗ್ರಹಣವಿದೆ.

Exit mobile version