Site icon Vistara News

Ram Gopal Varma: ʻದಿ ಕೇರಳ ಸ್ಟೋರಿʼ ನಾನು ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದು ಎಂದ ರಾಮ್ ಗೋಪಾಲ್ ವರ್ಮಾ!

Ram Gopal Varma calls The Kerala Story one of the best films

ಬೆಂಗಳೂರು: ಕಳೆದ ವರ್ಷ ಥಿಯೇಟರ್‌ಗಳಲ್ಲಿ ಬಂದ ಅದಾ ಶರ್ಮಾ ಅಭಿನಯದ `ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ (The Kerala Story) ಹಲವಾರು ವಿವಾದಗಳ ನಡುವೆ ಚಿತ್ರಮಂದಿರಗಳಿಗೆ ಅಪ್ಪಳಿಸಿತು. ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ (Ram Gopal Varma). ಇದೀಗ ಸಂದರ್ಶನದಲ್ಲಿ, ರಾಮ್ ಗೋಪಾಲ್ ವರ್ಮಾ ಅವರು ಈ ಸಿನಿಮಾವನ್ನು ಶ್ಲಾಘಿಸಿದರು. ಬಾಕ್ಸ್‌ ಆಫೀಸ್‌ನಲ್ಲಿ ‘ದಿ ಕೇರಳ ಸ್ಟೋರಿ ₹ 300 ಕೋಟಿ ಗಳಿಸಿದೆ’ ಎಂದು ಅವರು ಹೇಳಿದರು.

ರಾಮ್ ಗೋಪಾಲ್ ವರ್ಮಾ ಮಾತನಾಡಿ ʻʻ ಬಹಳ ಹಿಂದೆ, (ಸಂಗೀತ ಸಂಯೋಜಕ) ಎಆರ್ ರೆಹಮಾನ್ ಅವರು ಟ್ಯೂನ್ ಮಾಡುವಾಗ, ಅದು ವರ್ಷದ ಬ್ಲಾಕ್ಬಸ್ಟರ್ ಆಗಲಿದೆ ಎಂದು ಜನ ಭಾವಿಸುತ್ತಾರೆ. ಆದರೆ ಹಾಡು ಬಂದಾಗ ಜನ ನಿರ್ಲಕ್ಷಿಸುತ್ತಾರೆ. ಆದರೆ ಆಹಾಡನ್ನು ಕೆಟ್ಟದ್ದಾಗಿದೆ ಎಂದು ಕರೆಯುವುದಿಲ್ಲ. ಇದನ್ನು ಸಾಬೀತುಪಡಿಸಲು ಹಲವಾರು ಉದಾಹರಣೆಗಳಿವೆ. ನನ್ನ ಎಲ್ಲಾ ಹಿಟ್ ಚಿತ್ರಗಳು , ನನ್ನ ಫ್ಲಾಪ್‌ಗಳು ಉದ್ದೇಶಪೂರ್ವಕವಾಗಿವೆʼʼಎಂದರು.

ಇದನ್ನು ಉದಾಹರಣೆಯೊಂದಿಗೆ ವಿವರಿಸಿದ ರಾಮ್ ಗೋಪಾಲ್ ವರ್ಮಾ ʻʻಕೇರಳ ಸ್ಟೋರಿ ವರ್ಷಗಳಲ್ಲಿ ನೋಡಿದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ. ಆದರೆ ಅದೇ ತಂಡ ಮತ್ತೊಂದು ಸಿನಿಮಾ ಮಾಡಿ ಪ್ಲಾಪ್‌ ಆಯ್ತು ಎಂದು ತಿಳಿದು ಆಘಾತವಾಯಿತುʼʼಎಂದರು.

“ಈ ಚಿತ್ರವು ಕೇರಳದ ಕಥೆ ಎಂದು ನನಗೆ ತುಂಬಾ ಸಂತೋಷವಾಯಿತು. ಹಲವು ವರ್ಷಗಳಿಂದ ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು. ನಾನು ನಿರ್ದೇಶಕ (ಸುದೀಪ್ತೋ ಸೇನ್) ಜೊತೆ ಮಾತನಾಡಿದೆ, ನಾನು ನಿರ್ಮಾಪಕ (ವಿಪುಲ್ ಶಾ), ನಟಿ (ಆದಾ ಶರ್ಮಾ) ಜೊತೆ ಮಾತನಾಡಿದೆ. ನಂತರ, ಮುಂದಿನ ಚಿತ್ರ (ಬಸ್ತರ್: ದಿ ನಕ್ಸಲ್ ಸ್ಟೋರಿ) ಬಂದಿತು. ಬಿಡುಗಡೆಯಾಯಿತು ಮತ್ತು ಹೋಯಿತು. ಅದರ ಬಗ್ಗೆ ನನಗೆ ತಿಳಿದಿರಲಿಲ್ಲʼʼಎಂದರು.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ಕೇರಳದಿಂದ ಕಾಣೆಯಾದ ಹುಡುಗಿಯರ ನಿಜ ಜೀವನದ ಅನುಭವವನ್ನು ಆಧರಿಸಿದೆ ಈ ಸಿನಿಮಾ. ನರ್ಸ್ ಆಗುವ ಕನಸು ಹೊತ್ತ ಶಾಲಿನಿ ಉನ್ನಿಕೃಷ್ಣನ್ ಎಂಬ ಗ್ರಾಮೀಣ ಹುಡುಗಿ, ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ಶಿಬಿರಕ್ಕೆ ಸೇರಿಹೋದ, ಅಲ್ಲಿಂದ ಹೊರಬರಲಾಗದೆ ಪರಿತಪಿಸುವ ಕತೆಯನ್ನು ಕೇರಳ ಸ್ಟೋರಿ ಹೊಂದಿದೆ. ಕೇರಳದ ಹಿಂದು ಯುವತಿಯರನ್ನು ಕಳ್ಳಸಾಗಣೆ ಮಾಡಿ, ಮತಾಂತರಿಸಿ, ಭಯೋತ್ಪಾದಕ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಕಷ್ಟಿವೆ. ಅಂಥ ನೈಜ ಪ್ರಕರಣಗಳೂ ವರದಿಯಾಗಿವೆ. ಅದೇ ಹಿನ್ನೆಲೆಯಲ್ಲಿ ಈ ಚಿತ್ರ ಹುಟ್ಟಿಕೊಂಡಿದೆ ಎನ್ನಲಾಗಿದೆ.

Exit mobile version