Site icon Vistara News

Ram Pothineni: ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ; ನಟನ ಅನ್​ಫಾಲೋ ಮಾಡಿದ ಖ್ಯಾತ ನಟಿ!

Ram Pothineni Double iSmart Bachchan Director Breaks Silence On Clash

ಬೆಂಗಳೂರು: ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ರವಿತೇಜ `ಇಟ್ಲು ಶ್ರಾವಣಿ ಸುಬ್ರಮಣ್ಯಂ’ ಮತ್ತು `ಈಡಿಯಟ್’ ನಂತಹ ಹಿಟ್ ಸಿನಿಮಾಗಳನ್ನು (Mr Bachchan Director) ಒಟ್ಟಿಗೆ ನೀಡಿದವರು. ರವಿತೇಜಾ ಅವರ ʻಮಿಸ್ಟರ್ ಬಚ್ಚನ್ʼ ಮತ್ತು ಪುರಿ ಅವರ ನಿರ್ದೇಶನದ ʻಡಬಲ್ ಇಸ್ಮಾರ್ಟ್ʼ (Ram Pothineni) ಆಗಸ್ಟ್ 15 ರಂದು ತೆಲುಗು ಬಾಕ್ಸ್ ಆಫೀಸ್ನಲ್ಲಿ ಘರ್ಷಣೆಗೆ ಸಿದ್ಧವಾಗಿದೆ (Puri Jagannadh’s directorial ). ‘ಡಬಲ್ ಇಸ್ಮಾರ್ಟ್” ಮತ್ತು ”ಮಿಸ್ಟರ್ ಬಚ್ಚನ್” ತಂಡದ ನಡುವೆ ಶೀತಲ ಸಮರ ಆರಂಭವಾಗಿದೆ.

ʻಮಿಸ್ಟರ್ ಬಚ್ಚನ್ʼ ನಿರ್ದೇಶಕ ಹ್ಯಾರಿಸ್ ಶಂಕರ್ ಬೇರೆ ಯಾರು ಅಲ್ಲ, ಬದಲಿಗೆ ಪುರಿ ಜಗನ್ನಾಥ್ ಶಿಷ್ಯ. ಒಂದು ಕಾಲದಲ್ಲಿ ಪುರಿ ಬಳಿ ಕೆಲಸ ಕಲಿತ ಹ್ಯಾರಿಸ್ ಶಂಕರ್ ಈಗ ಗುರುವಿಗೆ ತಿರುಮಂತ್ರ ಹಾಕುತ್ತಿದ್ದಾರೆ. ಕೇವಲ ಹ್ಯಾರಿಸ್ ಶಂಕರ್ ಮಾತ್ರ ಅಲ್ಲ, ʻಮಿಸ್ಟರ್ ಬಚ್ಚನ್ʼ ಚಿತ್ರದ ಮೂಲಕ ರವಿತೇಜಾ ಕೂಡ ಪುರಿ ಜಗನ್ನಾಥ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ರವಿತೇಜಾ ಅವರಿಂದ ಪುರಿ ಜಗನ್ನಾಥ್ ಇದನ್ನು ನಿರೀಕ್ಷೆ ಮಾಡಿರಲಿಲ್ಲ.

ʻಡಬಲ್ ಇಸ್ಮಾರ್ಟ್” ಚಿತ್ರಕ್ಕೆ ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ. ಹೀಗಾಗಿಯೇ ಪುರಿ ಜಗನ್ನಾಥ್ ಜೊತೆ ರವಿತೇಜಾ ಮೇಲೆ ಕೋಪ ಮಾಡಿಕೊಂಡಿರುವ ಚಾರ್ಮಿ,ಸದ್ಯಕ್ಕೆ ”ಮಿಸ್ಟರ್ ಬಚ್ಚನ್” ನಿರ್ದೇಶಕ ಹರೀಶ್ ಶಂಕರ್ ಮತ್ತು ನಾಯಕ ರವಿತೇಜಾ ಇಬ್ಬರನ್ನೂ ಸಾಮಾಜಿಕ ಜಾಲತಾಣದಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಬಚ್ಚನ್ ನಿರ್ದೇಶಕ ಹರೀಶ್ ಶಂಕರ್ ಅವರು ಪರಿಸ್ಥಿತಿಯನ್ನು ತಿಳಿಸಿದರು. ಅನಿವಾರ್ಯ ಕಾರಣಗಳಿಂದ ಅದೇ ದಿನಾಂಕದಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆಯೇ ಹೊರತು ವೈಯಕ್ತಿಕ ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಪೂರಿ ಜಗನ್ ಅವರಿಗೂ ನನಗೂ ಭಿನ್ನಾಭಿಪ್ರಾಯವಿಲ್ಲ ಎಂದ ಹರೀಶ್ ಶಂಕರ್

“ಪುರಿ ಜಗನ್ ಅವರು ಲೆಜೆಂಡ್‌ ಮತ್ತು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಕೆಲವು ಆರ್ಥಿಕ ಕಾರಣ, OTT ಸಮಸ್ಯೆಗಳು ಮತ್ತು ಇತರ ಕಾರಣಗಳಿಂದಾಗಿ, ನಾವು ಡಬಲ್ ಇಸ್ಮಾರ್ಟ್‌ನೊಂದಿಗೆ ರಿಲೀಸ್‌ ಮಾಡುತ್ತಿದ್ದೇವೆ. ಪೂರಿ ಜಗನ್‌ಗೂ ನನಗೂ ಭಿನ್ನಾಭಿಪ್ರಾಯವಿಲ್ಲ. ಆದರೂ ಅವರು ನನ್ನನ್ನು ಟ್ವಿಟರ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಅದನ್ನು ವೈಯಕ್ತಿಕವಾಗಿ ನಾನು ತೆಗೆದುಕೊಂಡಿಲ್ಲ. ಪ್ರತಿಯೊಬ್ಬರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆʼʼಎಂದರು. ಆಗಸ್ಟ್ 15 ರಂದು ಸಿನಿಮಾವನ್ನು ಬಿಡುಗಡೆ ಮಾಡುವಂತೆ ಮೈತ್ರಿ ಮೂವಿ ವಿತರಕರ ಮುಖ್ಯಸ್ಥ ಶಶಿ ಕೇಳಿದರು ಅದರಂತೆ ರಿಲೀಸ್‌ ಆಗುತ್ತಿದೆʼʼಎಂದರು.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

”ಡಬಲ್ ಇಸ್ಮಾರ್ಟ್” ಚಿತ್ರಕ್ಕೆ ಒಂದು ಕಾಲದಲ್ಲಿ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಚಾರ್ಮಿ ಕೌರ್ ಕೂಡ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರವಿತೇಜ ಹೊರತಾಗಿ, ಭಾಗ್ಯಶ್ರೀ ಬೋರ್ಸೆ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿರುವ ರವಿ ತೇಜ ಅವರು ಫಸ್ಟ್ ಲುಕ್‌ನಲ್ಲಿ ಅಮಿತಾಭ್‌ ಅವರಂತೆ ಪೋಸ್‌ ಕೊಟ್ಟಿದ್ದರು. ಈ ಚಿತ್ರ ಅಜಯ್ ದೇವಗನ್ ಅಭಿನಯದ 2018ರ ಹಿಂದಿ ʻಸ್ಲೀಪರ್ ಹಿಟ್ ರೈಡ್ʼ ನ ರಿಮೇಕ್ ಆಗಿದೆ.

ಡಬಲ್ ಇಸ್ಮಾರ್ಟ್

ಸೌತ್ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್ ಇಸ್ಮಾರ್ಟ್’ ಚಿತ್ರದಲ್ಲೂ ವಿಲನ್ ಆಗಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬಲ್ ಇಸ್ಮಾರ್ಟ್ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸ್ಯಾಮ್ ಕೆ. ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ಆಗಸ್ಟ್-15 ರಂದು ಚಿತ್ರ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಬರ್ತಿರೋ ಈ ಚಿತ್ರದ ಪ್ರಚಾರ ಕೂಡ ಈಗಾಗಲೇ ಶುರು ಆಗಿದೆ.

2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ.

Exit mobile version