ಬೆಂಗಳೂರು: ಜುಲೈ 13ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅದ್ಧೂರಿ ಶುಭ ಆಶೀರ್ವಾದ ಸಮಾರಂಭ ನಡೆಯಿತು. ಅನೇಕ ಬಾಲಿವುಡ್, ಸೌತ್ ಸೆಲೆಬ್ರಿಟಿಗಳು ಸೇರಿದ್ದರು. ಈ ವೇಳೆ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಸೀರೆಯಲ್ಲಿ ಮಿಂಚಿದರು. ನೀಲಿ ಸೀರೆಯಲ್ಲಿ ಅದ್ಧೂರಿಯಾಗಿ ಮಿಂಚಿದ್ದಾರೆ. ವರದಿಗಳ ಪ್ರಕಾರ ರಶ್ಮಿಕಾ ಸೀರೆ ಬೆಲೆ 1,28,000 ರೂ. ಎನ್ನಲಾಗಿದೆ.
ವಜ್ರಗಳಿಂದ ಅಲಂಕರಿಸಲ್ಪಟ್ಟ ಸುಂದರವಾದ ನೆಕ್ಲೇಸ್ ಅನ್ನು ಧರಿಸಿದ್ದರು, ಅಂದವಾದ ಕಿವಿಯೋಲೆಗಳು, ಬಳೆಗಳ ಸ್ಟಾಕ್ ಮತ್ತು ಸ್ಟೇಟ್‌ಮೆಂಟ್ ರಿಂಗ್‌ನೊಂದಿಗೆ ಮತ್ತಷ್ಟು ಚೆಂದವಾಗಿ ಕಂಡಿದ್ದಾರೆ. ಹಿಂದಿ, ತೆಲುಗು ಸಿನಿಮಾಗಳಲ್ಲಿ ಬ್ಯೂಸಿ ಇರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಬಹುನಿರೀಕ್ಷೆಯ ಪುಷ್ಪಾ – 2 ಸಿನಿಮಾ ಮುಂದಿನ ತಿಂಗಳು ಆಗಸ್ಟ್‌ಗೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಡಿಸೆಂಬರ್‌ಗೆ ಫಿಕ್ಸ್ ಆಗಿದೆ. ಅಭಿಮಾನಿಗಳು ರಶ್ಮಿಕಾರನ್ನು ಶ್ರೀವಲ್ಲಿ ಪಾತ್ರದಲ್ಲಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.ಇನ್ನು ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನೂರಿ ಸಿನಿಮಾಗಳಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತು ಕೇಳಿ ಬಂದಿವೆ. ನಟ ಧನುಷ್ ಅಭಿನಯದ ‘ಕುಬೇರ’ ಸಿನಿಮಾದಲ್ಲಿ ನಟಿ ಬ್ಯೂಸಿ ಇದ್ದಾರೆ. ರವಿತೇಜ – ಗೋಪಿಚಂದ್ ಮಲಿನೇನಿ ಚಿತ್ರ ಜೊತೆಗೆ ‘ರೈನ್ಬೋ’ ಲೇಡಿ ಓರಿಯೆಂಟೆಡ್ ಸಿನಿಮಾಗಳ ಮೂಲಕ ರಶ್ಮಿಕಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಬಾಲಿವುಡ್ ಸಲ್ಮಾನ್ ಖಾನ್ ಚಿತ್ರ ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ನಟಿಸಬೇಕಿದೆ.
ಇದನ್ನೂ ಓದಿ: Rashmika Mandanna: ಧನುಷ್ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್ ಲುಕ್ ಪೋಸ್ಟರ್ ಔಟ್!
ರಶ್ಮಿಕಾ ಫಸ್ಟ್ ಲುಕ್ ಜತೆಗೆ ಕ್ಯಾರಕ್ಟರ್ ಗ್ಲಿಂಪ್ಸ್ ಕೂಡ ಕುಬೇರ ಚಿತ್ರತಂಡ ರಿವೀಲ್ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೊದಲ್ಲಿ ರಶ್ಮಿಕಾ ಪಾತ್ರದ ಝಲಕ್ ಇದೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್ ಕೊಡುವಂತಿದೆ. ಶೇಖರ್ ಕುಮ್ಮಲ ಅವರ ಕುಬೇರ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ. ಸದ್ಯ ಈ ಹೈ-ಬಜೆಟ್ ಸಿನಿಮಾದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಆಗುತ್ತಿವೆ. ಇತ್ತೀಚೆಗಷ್ಟೇ ಧನುಷ್ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ಮಾತ್ರವಲ್ಲ ಪ್ರೇಕ್ಷರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಕೆಲವು ದಿನಗಳ ಹಿಂದೆ ಧನುಷ್ (Actor Dhanush) ಅವರ ಎರಡನೇ ನಿರ್ದೇಶನದ ಸಿನಿಮಾ ‘ಡಿ 50’ಪೋಸ್ಟರ್ ಲುಕ್ ಅನಾವರಣಗೊಂಡಿತ್ತು. ಧನುಷ್ ಕಳೆದ ವರ್ಷ ಜುಲೈನಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಿನಿಮಾಗಾಗಿ ನಟ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಇನ್ನು ಸಿನಿಮಾದ ನಾಯಕಿ ಹಾಗೂ ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್ ನೀಡುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2017 ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ʻರಾಯನ್ʼ ಅವರ ಎರಡನೇ ನಿರ್ದೇಶನದ ಸಿನಿಮಾ.